ಬೆಂಗಳೂರು:ನಗರದ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ಕಳೆದ ಆರು ತಿಂಗಳ ಅವಧಿಯಲ್ಲಿ ವಶಪಡಿಸಿಕೊಂಡ 38.11 ಕೋಟಿ ರೂ ಮೌಲ್ಯದ ವಿವಿಧ ಮಾದಕ ಪದಾರ್ಥಗಳನ್ನ ಬೆಂಗಳೂರು ಪೊಲೀಸರು ನಾಶಪಡಿಸಿದ್ದಾರೆ.
27 ಜೂನ್ 2024ರಿಂದ 10 ಜನವರಿ 2025ರ ವರೆಗೆ ನಗರದಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾಗಿದ್ದ ಒಟ್ಟು 745.769 ಕೆಜಿ ವಿವಿಧ ಮಾದಕ ಪದಾರ್ಥಗಳನ್ನ ದಾಬಸ್‌ಪೇಟೆಯ ಕೆಐಎಡಿಬಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಕರ್ನಾಟಕ ವೇಸ್ಟ್ ಮ್ಯಾನೇಜ್‌ಮೆಂಟ್ ಪ್ರಾಜೆಕ್ಟ್ ಡಿವಿಷನ್ ಆಫ್ ರಿ-ಸಸ್ಟೇನಬೆಲಿಟಿ ಲಿಮಿಟೆಡ್‌ನಲ್ಲಿ ನಾಶಪಡಿಸಲಾಗಿದೆ. ನ್ಯಾಯಾಲಯ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಪಡೆದು ಮಾದಕ ವಿಲೇವಾರಿ ಸಮಿತಿಯ ಸದಸ್ಯರ ಸಮ್ಮುಖದಲ್ಲಿ ಡ್ರಗ್ಸ್ ನಾಶಪಡಿಸಲಾಗಿದೆ.