ಬೆಂಗಳೂರು : ಇಂದಿನಿಂದ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ (ಕೆಎಸ್‌ಎಲ್‌ಟಿಎ)ನಲ್ಲಿ 9ನೇ ಆವೃತ್ತಿಯ ಬೆಂಗಳೂರು ಓಪನ್ ಟೆನಿಸ್ ಆರಂಭವಾಗಲಿದೆ. ಮಾರ್ಚ್ 2ರ ವರೆಗೂ ನಡೆಯಲಿರುವ ಟೂರ್ನಿಯಲ್ಲಿ ಭಾರತದ ರಾಮಕುಮಾರ್ ರಾಮನಾಥನ್, ಎಸ್.ಡಿ. ಪ್ರಜ್ವಲ್, ಮಾನಸ್ ಧಾಮನೆ ಮತ್ತಿತರ ಪ್ರಮುಖ ಆಟಗಾರರು ಕಣದಲ್ಲಿದ್ದಾರೆ.
ಜಪಾನಿನ 7ನೇ ಶ್ರೇಯಾಂಕದ ಶಿಂಟರೊ ಮೊಚಿಜುಕಿ ಅವರನ್ನು ರಾಮಕುಮಾರ್ ರಾಮನಾಥನ್ ಎದುರಿಸಲಿದ್ದಾರೆ. ಎಸ್.ಡಿ. ಪ್ರಜ್ವಲ್ ದೇವ್ ಅವರು ಜೆಕ್ ರಿಪಬ್ಲಿಕ್‌ನ ಮರೆಕ್ ಗೆಂಗೆಲ್ ಅವರನ್ನು ಹಾಗೂ ಮತ್ತೋರ್ವ ಉದಯೋನ್ಮುಖ ಆಟಗಾರ ಮಾನಸ್ ಧಾಮನೆ ಅರ್ಹತಾ ಸುತ್ತಿನಿಂದ ಬರಲಿರುವ ಆಟಗಾರನನ್ನು ಎದುರಿಸಲಿದ್ದಾರೆ.