ರಾಮನಗರ:ದಶಪಥ ಬೆಂಗಳೂರು - ಮೈಸೂರು ಹೆದ್ದಾರಿಯ ಟೋಲ್ ಶುಲ್ಕ ಇದೇ ಏಪ್ರಿಲ್ 1ರಿಂದ ಹೆಚ್ಚಳವಾಗಲಿದೆ. ಸಗಟು ಬೆಲೆ ಸೂಚ್ಯಂಕ (WPI) ಪ್ರಕಾರ ಟೋಲ್ ಶುಲ್ಕ ಶೇ 3 ರಿಂದ 14 ರಷ್ಟು ಹೆಚ್ಚಾಗಿದ್ದು, ಈ ಶುಲ್ಕ ಪಾವತಿಯು 2025ರ ಮಾರ್ಚ್ 31ರವರೆಗೆ ಜಾರಿಯಲ್ಲಿರುತ್ತದೆ. ಆದರೆ ಬೆಂಗಳೂರು-ಮೈಸೂರು ಹೆದ್ದಾರಿ ಮತ್ತು ರಾಷ್ಟ್ರೀಯ ಹೆದ್ದಾರಿ ಶೇ.7 ರಷ್ಟು ಟೋಲ್ ಶುಲ್ಕಗಳು ಶೇ.3ರಷ್ಟು ಹೆಚ್ಚಿಸಲಾಗಿದೆ. STRR ಬಳಸುವ ವಾಹನಗಳು ಶೇ.14ರಷ್ಟು ಹೆಚ್ಚು ಪಾವತಿಸಬೇಕಾಗುತ್ತದೆ.
ಇದೇ 2023ರ ನವೆಂಬರ್ 17 ರಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ STRR ನ 39.6-ಕಿಮೀ ದೊಡ್ಡಬಳ್ಳಾಪುರ - ಹೊಸಕೋಟೆ ವಿಭಾಗಕ್ಕೆ ಟೋಲ್ ಸಂಗ್ರಹಿಸಲು ಪ್ರಾರಂಭಿಸಿದ ಕೇವಲ ಆರು ತಿಂಗಳ ಒಳಗೆಯೇ ಶುಲ್ಕ ಹೆಚ್ಚಳವಾಗಿದೆ. ಈ ಬಗ್ಗೆ NHAI ಯ ಬೆಂಗಳೂರು ಪ್ರಾದೇಶಿಕ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಕರ್ನಾಟಕ ರಾಜ್ಯದ ಎನ್‌ಎಚ್275ರ ಕಿ.ಮೀ 23.900 ಕಣಿಮಿಣಿಕಿ ಗ್ರಾಮ ಮತ್ತು ಬಿಡದಿ ಬಳಿಯ ಶೇಷಗಿರಿಹಳ್ಳಿ ಬಳಿಯ ಟೋಲ್ ಸಂಗ್ರಹ ಕೇಂದ್ರದ ಶುಲ್ಕಗಳಲ್ಲಿ ಹೆಚ್ಚಳವಾಗಿದೆ. ಪ್ರಸ್ತುತ ದರ (ರೂ.ಗಳಲ್ಲಿ) ಪರಿಷ್ಕೃತ ದರ (ರೂ.ಗಳಲ್ಲಿ) ಏಕಮುಖ, ದ್ವಿಮುಖ ಸಂಚಾರದಲ್ಲಿ ಹೆಚ್ಚಳ ಮಾಡಲಾಗಿದೆ.
ಕಾರಿಗೆ 155 ರೂ ಇದ್ದದ್ದು 170 ಹೆಚ್ಚಳವಾಗಿದೆ. ಲಘು ವಾಣಿಜ್ಯ ವಾಹನಗಳಿಗೆ 270 ಇದ್ದದ್ದು ದ್ವಿಮುಖ ಸಂಚಾರಕ್ಕೆ 405ಕ್ಕೆ ಹೆಚ್ಚಳವಾಗಿದೆ. ಹಾಗೆಯೇ ಟ್ರಕ್ /ಬಸ್ 565 ರಿಂದ 850ಕ್ಕೆ ಹೆಚ್ಚಳವಾಗಿದ್ದು, 3 ಆಕ್ಸೆಲ್ ವಾಣಿಜ್ಯ ವಾಹನಗಳಿಗೆ 925 ರಿಂದ 950ಕ್ಕೆ ಏರಿಕೆ ಮಾಡಲಾಗಿದೆ. ಹಾಗೆಯೇ ಭಾರಿ ನಿರ್ಮಾಣ ಯಂತ್ರಗಳಿಗೆ 885 ರಿಂದ 1,330ಕ್ಕೆ ಹೆಚ್ಚಿಸಲಾಗಿದೆ . ಮೂರನೇ ದರ ಹೆದ್ದಾರಿ ಲೋಕಾರ್ಪಣೆಗೊಂಡ ಒಂದು ವರ್ಷದ ಅವಧಿಯಲ್ಲಿ ಎರಡನೇ ಬಾರಿ ಟೋಲ್ ದರ ನಿಗದಿಯಾಗಿದೆ.
2023ರ ಮಾರ್ಚ್ನಲ್ಲಿ ಟೋಲ್ ಸಂಗ್ರಹ ಆರಂಭವಾಗಿತ್ತು. ನಂತರ ಜೂನ್ನಲ್ಲಿ ಶೇ. 22 ರಷ್ಟು ಟೋಲ್ ದರ ಏರಿಕೆ ಮಾಡಲಾಗಿತ್ತು. ಈಗ ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮ ದೊಡ್ಡ ಗಾತ್ರದ ವಾಹನಗಳಿಗೆ 1,080 ರಿಂದ 1,620 ಹೆಚ್ಚಳವಾಗುತ್ತಿದೆ. 2008-ನಿಯಮ 5ರ ಪ್ರಕಾರ ಬಳಕೆದಾರರ ಶುಲ್ಕದಲ್ಲಿ ವಾರ್ಷಿಕ ಪರಿಷ್ಕರಣೆಯಂತೆ ಮತ್ತೆ ಟೋಲ್ ದರ ಹೆಚ್ಚಳ ಮಾಡಲಾಗಿದ್ದು, ಶುಲ್ಕ ಹೆಚ್ಚಳದ ಬಗ್ಗೆ ಟೋಲ್ ಸಿಬ್ಬಂದಿ ವಾಹನ ಸವಾರರಿಗೆ ಕರಪತ್ರ ಹಂಚುತ್ತಿದ್ದಾರೆ. ದರಪಟ್ಟಿ ಫಲಕ ತಿದ್ದುಪಡಿ ಮಾಡಲಾಗುತ್ತಿದೆ. ನೂತನ ಪರಿಷ್ಕರಣೆಯಲ್ಲಿ ಶೇ.3 ರಷ್ಟು ಶುಲ್ಕ ಹೆಚ್ಚಳ ಮಾಡಲಾಗಿದೆ. ಮಂಡ್ಯ ಗಣಂಗೂರು ಹಾಗೂ ಬಿಡದಿ ಟೋಲ್ ಪ್ಲಾಜದ ಶುಲ್ಕದ ವಿವರಗಳು ಬದಲಾಗಿವೆ.
ಹೆದ್ದಾರಿ ಪ್ರಾಧಿಕಾರಕ್ಕೆ ಟೋಲ್ ವಸೂಲಿಗಿರುವ ಆಸಕ್ತಿ ಪ್ರಯಾಣಿಕರಿಗೆ ಮೂಲಭೂತ ಸೌಕರ್ಯ ಒದಗಿಸಲು ಇಲ್ಲ. ಅನೇಕ ಬಾರಿ ಹೋರಾಟ ಮಾಡಿದರೂ ಹೆದ್ದಾರಿಯಲ್ಲಿ ಇನ್ನೂ ಶೌಚಾಲಯಗಳನ್ನು ನಿರ್ಮಿಸಿಲ್ಲ. ಸರ್ವೀಸ್ ರಸ್ತೆಗಳು ಅಪೂರ್ಣವಾಗಿವೆ. ಹೆದ್ದಾರಿಯಲ್ಲಿ ಪ್ರಯಾಣಿಕರಿಗೆ ಎಲ್ಲ ಸೌಕರ್ಯ ನೀಡಿದ ಮೇಲೆ ಟೋಲ್ ಹೆಚ್ಚಳ ಮಾಡಲಿ ಎಂದು ಸಾರ್ವಜನಿಕರು ಕೇಳುತ್ತಲೆ ಇದ್ದಾರೆ.
ಓದಿ:ಗುಜರಿ ಮಾರಾಟದಿಂದ ಉತ್ತರ ರೈಲ್ವೆಗೆ ₹603 ಕೋಟಿ ಆದಾಯ - Northern Railway Scrap Sale