ಕರ್ನಾಟಕ

karnataka

ETV Bharat / state

ಬೆಂಗಳೂರು: ಐತಿಹಾಸಿಕ ಕರಗ ಉತ್ಸವದ ಹಸಿ ಕರಗ ಸಂಪನ್ನ - Bengaluru Karaga - BENGALURU KARAGA

ಬೆಂಗಳೂರಿನ ಪ್ರಸಿದ್ಧ ಕರಗ ಉತ್ಸವದ ಹಸಿ ಕರಗ ಸಂಪನ್ನವಾಗಿದೆ. ಏಪ್ರಿಲ್ 23ರ ರಾತ್ರಿ ಬೆಂಗಳೂರು ಕರಗ ನೆರವೇರಲಿದೆ.

Bengaluru Karaga
ಬೆಂಗಳೂರು ಕರಗ

By ETV Bharat Karnataka Team

Published : Apr 22, 2024, 7:27 AM IST

ಬೆಂಗಳೂರು: ಐತಿಹಾಸಿಕ ಕರಗ ಉತ್ಸವದ ಹಸಿ ಕರಗವನ್ನು ಭಾನುವಾರ ಸಂಪಂಗಿ ಕೆರೆಯಂಗಳದಲ್ಲಿ ಬೆಳಗ್ಗೆ 3 ಗಂಟೆಗೆ ಆಚರಿಸಲಾಗಿದೆ. ಈಗಾಗಲೇ ಕರಗದ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತಿದ್ದು, ಕರಗ ಶಕ್ತ್ಯವು ಚೈತ್ರ ಪೌರ್ಣಮಿಯಂದು ರಾತ್ರಿ 12.30ಕ್ಕೆ ನಡೆಯಲಿದೆ. 13 ಬಾರಿ ಕರಗ ಹೊತ್ತಿರುವ ಪೂಜಾರಿ ಎ.ಜ್ಞಾನೇಂದ್ರ ಈ ಬಾರಿಯೂ ಕರಗ ಹೊರಲಿದ್ದಾರೆ. ಏ.24ರಂದು ದೇವಾಲಯದಲ್ಲಿ ಗಾವು ಪೂಜೆ, 25ಕ್ಕೆ ಕೊನೆಯ ದಿನದ ವಸಂತೋತಸ್ವ ಧ್ವಜಾರೋಹಣ ಕಾರ್ಯಕ್ರಮ ನೆರವೇರಲಿದೆ.

ಐತಿಹಾಸಿಕ ಕರಗ ಉತ್ಸವದ ಹಸಿ ಕರಗ ಸಂಪನ್ನ

ಈ ವರ್ಷ ಸುಮಾರು 3000 ವೀರ ಕುಮಾರರು ಕರಗದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಕಳೆದ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಗಿದ್ದ ಕರಗವನ್ನು ಈ ಬಾರಿ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಕರಗದ ದಿನ ರಾತ್ರಿ ಧರ್ಮರಾಯಸ್ವಾಮಿ ದೇಗುಲದಲ್ಲಿ ಧಾರ್ಮಿಕ ವಿಧಿ-ವಿಧಾನಗಳ ಮೂಲಕ ಪೂಜೆ ನೆರವೇರಿಸಲಾಗುತ್ತದೆ. ನಡುರಾತ್ರಿ ವೇಳೆಗೆ ಕಳಶದ ಆಕೃತಿಗೆ ಮಲ್ಲಿಗೆ ಹೂವಿನಿಂದ ಶೃಂಗಾರ ಮಾಡಿ ಕರಗ ಸಿದ್ಧಪಡಿಸಲಾಗುತ್ತದೆ. ಸಂಪಗಿರಾಮನಗರದ ಬಳಿಯಿಂದ ಕರಗಕ್ಕೆ ಪೂಜೆ ಸಲ್ಲಿಸಲಾಗುತ್ತದೆ.

ಕರಗದ ಮೆರವಣಿಗೆ ಸಾಗುವ ದಾರಿ ಉದ್ದಕ್ಕೂ ರಂಗೋಲಿ ಹಾಕಲಾಗುತ್ತದೆ. ಮನೆಗಳು ತಳಿರು ತೋರಣಗಳಿಂದ ಶೃಂಗಾರವಾಗಿರುತ್ತವೆ. ತಿಗಳರ ಪೇಟೆ, ಬಳೇಪೇಟೆ, ಚಿಕ್ಕಪೇಟೆ, ಅಣ್ಣಮ್ಮ ದೇವಸ್ಥಾನಗಳಲ್ಲಿ ಕರಗಧಾರಿಗಳು ಸಂಚರಿಸಿ ಸೂರ್ಯೋದಯದ ವೇಳೆಗೆ ಧರ್ಮರಾಯಸ್ವಾಮಿ ಗುಡಿಗೆ ಬರುತ್ತಾರೆ. ಕರಗಧಾರಿಗಳು ಮೊದಲು ಮಸ್ತಾನ್ ಸಾಬ್ ದರ್ಗಾಕ್ಕೆ ತೆರಳಿ ಅಲ್ಲಿ ಧೂಪಾರತಿ ಸ್ವೀಕರಿಸಿ ನಂತರ ನಗರದ ಪ್ರದಕ್ಷಿಣೆ ಹೊರಡುತ್ತಾರೆ. ಇದು ಭಾವೈಕ್ಯತೆಯ ಸಂಕೇತದ ಪ್ರತೀಕವಾಗಿದೆ ಎಂದು ಕರಗ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸತೀಶ್ ಹೇಳಿದ್ದಾರೆ.

ಐತಿಹಾಸಿಕ ಕರಗ ಉತ್ಸವದ ಹಸಿ ಕರಗ ಸಂಪನ್ನ

9 ದಿನ ವಿಶೇಷ ಪೂಜೆ:ಏಪ್ರಿಲ್ 15 ರಿಂದ ಆರಂಭವಾಗಿದ್ದು, ಏ.23ರಂದು ಮುಕ್ತಾಯವಾಗಲಿದೆ. ಕರಗ ಉತ್ಸವದ ಮೊದಲ ದಿನ ಧ್ವಜಾರೋಹಣ ಮಾಡಿ ಉತ್ಸವಕ್ಕೆ ಚಾಲನೆ ನೀಡಲಾಗಿದ್ದು, ಬಳಿಕ 9 ದಿನಗಳವರೆಗೆ ನಿತ್ಯ ಅಮ್ಮನಿಗೆ ವಿಶೇಷ ಪೂಜೆ ಮಾಡಲಾಗುತ್ತಿದೆ. ಏಪ್ರಿಲ್ 23 ರ ರಾತ್ರಿ 12 ಗಂಟೆಗೆ ಬೆಂಗಳೂರು ಕರಗ ನಡೆಯಲಿದೆ. ಇನ್ನು ಈ ಉತ್ಸವಕ್ಕೆ ರಾಜ್ಯದ ಗಣ್ಯರು ಸೇರಿದಂತೆ ಮಠಾಧೀಶರು ಅಗಮಿಸುತ್ತಾರೆ. ಈ ಬಾರಿ ಬಿಸಿಲಿನ ತಾಪಮಾನ ಹೆಚ್ಚಾಗಿರುವುದರಿಂದ ಎಲ್ಲರಿಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕರಗ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಮಾಹಿತಿ ನೀಡಿದ್ದಾರೆ.

ಕರಗವು ಕರ್ನಾಟಕದ ಪ್ರಸಿದ್ಧ ಜಾನಪದ ಆಚರಣೆಯಾಗಿದ್ದು, ಆದಿಶಕ್ತಿ ದ್ರೌಪದಿಯನ್ನು, ವಹ್ನಿಕುಲ ಕ್ಷತ್ರಿಯ ಜನಾಂಗ ಆರಾಧಿಸುತ್ತದೆ. ಶತಮಾನಗಳ ಇತಿಹಾಸ ಹೊಂದಿರುವ ವಿಶ್ವಪ್ರಸಿದ್ಧ ಬೆಂಗಳೂರು ಕರಗಕ್ಕೆ ತನ್ನದೇ ಆದ ವಿಶೇಷ ಮಹತ್ವವಿದೆ. ಮೈಸೂರು ದಸರಾದಂತೆಯೇ ಬೆಂಗಳೂರು ಕರಗವೂ ಕೂಡ ರಾಜ್ಯದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ.

ಇದನ್ನೂ ಓದಿ:ಶ್ರೀ ಕ್ಷೇತ್ರ ಕಟೀಲಿನಲ್ಲಿ ಪ್ರಸಿದ್ಧ 'ತೂಟೆದಾರ' ಸೇವೆ: ವಿಡಿಯೋ ನೋಡಿ - Kateel Thootedhara Seva

ABOUT THE AUTHOR

...view details