ಕರ್ನಾಟಕ

karnataka

ETV Bharat / state

ಬೆಂಗಳೂರು ಕರಗ: ಈ ಪ್ರದೇಶಗಳಲ್ಲಿ ಮದ್ಯ ಮಾರಾಟಕ್ಕೆ ನಿರ್ಬಂಧ - liquor sale ban - LIQUOR SALE BAN

ಬೆಂಗಳೂರು ಕರಗ ಮಹೋತ್ಸವದ ಹಿನ್ನೆಲೆ ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಮದ್ಯ ಮಾರಾಟಕ್ಕೆ ನಿರ್ಬಂಧ ಹೇರಲಾಗಿದೆ.

Bengaluru Karaga  Bengaluru
ಬೆಂಗಳೂರು ಕರಗ: ಈ ಪ್ರದೇಶಗಳಲ್ಲಿ ಮದ್ಯ ಮಾರಾಟಕ್ಕೆ ನಿರ್ಬಂಧ

By ETV Bharat Karnataka Team

Published : Apr 23, 2024, 12:07 PM IST

ಬೆಂಗಳೂರು:ಇಂದು ನಡೆಯಲಿರುವ ಬೆಂಗಳೂರು ಕರಗ ಉತ್ಸವದ ಮೆರವಣಿಗೆ ಹಿನ್ನೆಲೆಯಲ್ಲಿ ಮದ್ಯ ಮಾರಾಟಕ್ಕೆ ನಿರ್ಬಂಧ ವಿಧಿಸಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಆದೇಶ ಹೊರಡಿಸಿದ್ದಾರೆ.

ಏಪ್ರಿಲ್ 23 ರಂದು ಸಂಜೆ 4 ರಿಂದ ಏಪ್ರಿಲ್ 24 ರ ಬೆಳಗ್ಗೆ 10 ರವರೆಗೆ ನಗರದ ಸಿಟಿ ಮಾರ್ಕೆಟ್, ಕಲಾಸಿಪಾಳ್ಯ, ಕಾಟನ್‌ಪೇಟೆ ಮತ್ತು ಉಪ್ಪಾರಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿರ್ಬಂಧ ಜಾರಿಯಲ್ಲಿರಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಸಿಎಲ್ - 4 (ಕ್ಲಬ್‌ಗಳು) ಮತ್ತು ಸಿಎಲ್ -6 ಎ ಪರವಾನಗಿಗಳನ್ನು ಹೊಂದಿರುವ ಸ್ಟಾರ್ ಹೋಟೆಲ್​ಗಳಿಗೆ ನಿರ್ಬಂಧದಿಂದ ವಿನಾಯಿತಿ ನೀಡಲಾಗಿದೆ. ಬೆಂಗಳೂರಿನ ಐತಿಹಾಸಿಕ ಕರಗ ಮಹೋತ್ಸವದ ಮೆರವಣಿಗೆ ಇಂದು ಮಧ್ಯ ರಾತ್ರಿ 2 ಗಂಟೆಯಿಂದ ಬೆಳಗ್ಗೆ 10 ಗಂಟೆಯವರೆಗೂ ನಡೆಯಲಿದೆ.

ಸಂಪಂಗಿ ಕೆರೆಯಂಗಳದಲ್ಲಿ ಅದ್ಧೂರಿ ಹಸಿ ಕರಗ:ಬೆಂಗಳೂರಿನ ಐತಿಹಾಸಿಕ ಕರಗೋತ್ಸವ ಏ.15ರಿಂದ ಪ್ರಾರಂಭವಾಗಿದ್ದು, ಸಂಪಂಗಿ ಕೆರೆಯಂಗಳದಲ್ಲಿ ಏ.21ರಂದು ರಾತ್ರಿ 3 ಗಂಟೆಗೆ ವಿಜೃಂಭಣೆಯಿಂದ ಹಸಿ ಕರಗ ಕಾರ್ಯಕ್ರಮ ಜರುಗಿತು.

ಚೈತ್ರ ಪೌರ್ಣಮಿಯ ದಿನ (ಏ.23ರಂದು) ರಾತ್ರಿ 12.30ಕ್ಕೆೆ ಕರಗ ಶಕ್ತ್ಯೋತ್ಸವ ನೆರವೇರಲಿದೆ. 13 ಬಾರಿ ಕರಗ ಹೊತ್ತಿರುವ ಪೂಜಾರಿ ಎ. ಜ್ಞಾನೇಂದ್ರ ಅವರು ಈ ಬಾರಿಯೂ ಕರಗ ಹೊರಲಿದ್ದಾರೆ. ಏ. 24ರಂದು ದೇವಸ್ಥಾನದಲ್ಲಿ ಪೂಜೆ ಮತ್ತು ಏ. 25ಕ್ಕೆೆ ಕೊನೆಯ ದಿನದ ವಸಂತೋತ್ಸವ ಧ್ವಜಾರೋಹಣ ನೆರವೇರಲಿದೆ.

ಈ ವರ್ಷದ ಕರಗ ಮಹೋತ್ಸವದಲ್ಲಿ ಸುಮಾರು ಮೂರು ಸಾವಿರ ವೀರ ಕುಮಾರರು ಕರಗದಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ಕಳೆದ ಬಾರಿ ಕೊರೋನಾ ಹಿನ್ನೆೆಲೆಯಲ್ಲಿ ಸಾಧಾರಣವಾಗಿ ಆಚರಿಸಲಾಗಿದ್ದ ಕರಗವನ್ನು ಈ ಬಾರಿ ಸಂಭ್ರಮದಿಂದ ಆಚರಿಸಲಾಯಿತು. ಕರಗದ ದಿನ ರಾತ್ರಿ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಧಾರ್ಮಿಕ ವಿಧಿ ವಿಧಾನಗಳು, ವಿಶೇಷ ಪೂಜೆ ನೆರವೇರಿಸಲಾಯಿತು. ಮಧ್ಯರಾತ್ರಿ ಸಮಯದಲ್ಲಿ ಕಳಸದ ಆಕೃತಿಗೆ ಮಲ್ಲಿಗೆ ಹೂವಿನಿಂದ ಅಲಂಕರಿಸಿ ಮಾಡಿ ಕರಗ ಸಿದ್ಧಪಡಿಸಲಾಯಿತು.

ಸಂಪಂಗಿ ರಾಮನಗರದ ಬಳಿಯಿಂದ ಕರಗಕ್ಕೆೆ ವಿಶೇಷ ಪೂಜೆ ಸಲ್ಲಿಕೆ ಮಾಡಲಾಯಿತು. ಕರಗದ ಮೆರವಣಿಗೆ ಸಾಗುವ ಮಾರ್ಗದಲ್ಲಿ ರಂಗೋಲಿ ಹಾಕಲಾಯಿತು. ತಿಗಳರ ಪೇಟೆ, ಬಳೇಪೇಟೆ, ಚಿಕ್ಕಪೇಟೆ, ಅಣ್ಣಮ್ಮ ದೇವಸ್ಥಾನಗಳಲ್ಲಿ ಕರಗಧಾರಿಗಳು ಸಂಚಾರ ಮಾಡಿ ಸೂರ್ಯೋದಯದ ವೇಳೆಗೆ ಧರ್ಮರಾಯಸ್ವಾಮಿ ಗುಡಿಗೆ ಬಂದು ತಲುಪಿದರು.

ಇದನ್ನೂ ಓದಿ:ಏ.29ರೊಳಗೆ ಕರ್ನಾಟಕದ ಬರ ಪರಿಹಾರ ಹಣ ಬಿಡುಗಡೆಗೆ ಕ್ರಮ: ಸುಪ್ರೀಂ ಕೋರ್ಟ್​ಗೆ ಕೇಂದ್ರ ಸರ್ಕಾರದ ಭರವಸೆ - Drought Relief Fund

ABOUT THE AUTHOR

...view details