ಬೆಂಗಳೂರು: ರಾಜಧಾನಿಯ ರಸ್ತೆ ಗುಂಡಿಗಳನ್ನು ಮುಚ್ಚುವುದಾಗಿ ಬಿಬಿಎಂಪಿ ಕೋಟಿಗಟ್ಟಲೆ ಹಣ ರಿಲೀಸ್ ಮಾಡಿದರೂ ನಗರದ ರಸ್ತೆ ಗುಂಡಿಗಳಿಗೆ ಮಾತ್ರ ಮುಕ್ತಿ ಸಿಕ್ಕಿಲ್ಲ. ಇದೀಗ ಮತ್ತೆ ಪಾಲಿಕೆ ಅಧಿಕಾರಿಗಳು ರಸ್ತೆ ಗುಂಡಿಗಳಿಗೆ ಮುಕ್ತಿ ನೀಡುತ್ತೇವೆ ಎಂದು ಸುಮಾರು 700 ಕೋಟಿ ರೂ.ಗಳ ಹೊಸ ಟೆಂಡರ್ ಕರೆಯಲು ಮುಂದಾಗಿದ್ದಾರೆ.
ವಲಯವಾರು ಟೆಂಡರ್ ಪ್ರಕ್ರಿಯೆ ಇದಾಗಿದ್ದು, ಟೆಂಡರ್ ಸಲ್ಲಿಸಲು ಡಿಸೆಂಬರ್ 25ಕ್ಕೆ ಮುಕ್ತಾಯದ ಅವಧಿ ನೀಡಲಾಗಿದೆ. ಬಿಬಿಎಂಪಿ ಅನುದಾನದಲ್ಲೇ 389 ಕಿಲೋಮೀಟರ್ ರಸ್ತೆ ಅಭಿವೃದ್ಧಿಪಡಿಸಲಾಗುತ್ತದೆ. 5 ತಿಂಗಳೊಳಗೆ ರಸ್ತೆಗಳ ಅಭಿವೃದ್ಧಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಇಂಜಿನಿಯರ್ ಪ್ರಹ್ಲಾದ್ ತಿಳಿಸಿದರು.