ಹಾವೇರಿ:ಹಾವೇರಿಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸುತ್ತಿದ್ದಾರೆ. ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಿಂದ ಸತತ ನಾಲ್ಕು ಬಾರಿ ಜಯಭೇರಿ ಬಾರಿಸಿರುವ ಬೊಮ್ಮಾಯಿ ಇದೇ ಮೊದಲ ಬಾರಿಗೆ ಲೋಕಸಭೆಗೆ ಸ್ಪರ್ಧಿಸುತ್ತಿದ್ದಾರೆ. ಇವರಿಗೆ ಎದುರಾಳಿಯಾಗಿ ಕಾಂಗ್ರೆಸ್ ಪಕ್ಷದಿಂದ ಆನಂದಸ್ವಾಮಿ ಗಡ್ಡದೇವರಮಠ ಸ್ಪರ್ಧೆಗಿಳಿದಿದ್ದಾರೆ.
ಹಾವೇರಿಯಲ್ಲಿ ಬಿಜೆಪಿಯಿಂದ ಬೊಮ್ಮಾಯಿ ಸ್ಪರ್ಧೆ: ಇಲ್ಲಿದೆ ಪ್ಲಸ್-ಮೈನಸ್ ವಿಚಾರಗಳು - Basavaraj Bommai
ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಬಿಜೆಪಿಯಿಂದ ಇದೇ ಮೊದಲ ಬಾರಿಗೆ ಹಾವೇರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.
ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ
Published : Apr 1, 2024, 10:44 PM IST
ಬಿಜೆಪಿ ಅಭ್ಯರ್ಥಿಯ ಪ್ಲಸ್ ಪಾಯಿಂಟ್ಸ್:
- ಪ್ರಧಾನಿ ನರೇಂದ್ರ ಮೋದಿ ಅಲೆ
- ಆಡಳಿತಾರೂಢ ಕೇಂದ್ರದ ಬಿಜೆಪಿ ಸರ್ಕಾರ, ಬಿಜೆಪಿ ವರಿಷ್ಠರ ಬಲ
- ಮಾಜಿ ಸಿಎಂ ಆಗಿರುವ ಕಾರಣ ವೈಯಕ್ತಿಕ ವರ್ಚಸ್ಸು
- ಪಕ್ಷದಲ್ಲಿ ಬೊಮ್ಮಾಯಿ ಗೆಲುವಿಗೆ ಧಕ್ಕೆ ತರಬಲ್ಲ ಬಂಡಾಯಗಾರರಿಲ್ಲ
- ಸಿಎಂ ಆಗಿದ್ದ ವೇಳೆ ಜಿಲ್ಲೆಯ ಪ್ರಮುಖ ನಾಯಕರು, ವಿವಿಧ ಸಮಾಜದ ಮುಖಂಡರು, ಸ್ಥಳೀಯ ಪ್ರಭಾವಿ ನಾಯಕರ ಜತೆ ಉತ್ತಮ ಬಾಂಧವ್ಯ
- ಹಾವೇರಿ-ಗದಗ ಜಿಲ್ಲೆಗಳ ಪ್ರಮುಖ ಮಠಾಧೀಶರು, ಜಾತಿ ನಾಯಕರ ಜತೆ ಉತ್ತಮ ಬಾಂಧವ್ಯ
- ಲಿಂಗಾಯತ ಸಮಾಜದ ಸ್ಥಳೀಯ ಮುಖಂಡರ ಬೆಂಬಲ
- ಸಿಎಂ ಆಗಿದ್ದ ವೇಳೆ ಹಾವೇರಿ ಜಿಲ್ಲೆಯಲ್ಲಿ ಕೈಗೊಂಡಿದ್ದ ಕೆಲ ಅಭಿವೃದ್ಧಿ ಕೆಲಸಗಳು
- ಮಾಜಿ ಸಿಎಂ ಯಡಿಯೂರಪ್ಪನವರ ಕೃಪಾಶೀರ್ವಾದ
ಬಸವರಾಜ ಬೊಮ್ಮಾಯಿ ಮೈನಸ್ ಪಾಯಿಂಟ್ಸ್: - ಸಿಎಂ ಆಗಿದ್ದ ವೇಳೆಯೂ ತವರು ಜಿಲ್ಲೆ ಹಾವೇರಿಗೆ ಶಾಶ್ವತ ಕುಡಿಯೋ ನೀರಿನ ವ್ಯವಸ್ಥೆ ಮಾಡಲಿಲ್ಲ. ಹೆಚ್ಚಿನ ಅನುದಾನ ತರಲಿಲ್ಲ. ಮೂಲ ಸೌಕರ್ಯಗಳ ಅಭಿವೃದ್ಧಿ ಆಗಲಿಲ್ಲ ಎಂಬ ನೋವು ಮತದಾರರಲ್ಲಿದೆ.
- ಯಡಿಯೂರಪ್ಪ ಶಿವಮೊಗ್ಗ ಜಿಲ್ಲೆ ಅಭಿವೃದ್ಧಿ ಮಾಡಿದಂತೆ, ಹೆಚ್ಡಿಡಿ, ಹೆಚ್ಡಿಕೆ ಹಾಸನ ಜಿಲ್ಲೆ ಅಭಿವೃದ್ಧಿ ಮಾಡಿದಂತೆ ಬೊಮ್ಮಾಯಿ ತವರು ಜಿಲ್ಲೆ ಹಾವೇರಿ ಅಭಿವೃದ್ಧಿ ಕೈಗೊಳ್ಳಲಿಲ್ಲ ಎಂಬ ಕೊರಗು ಮತದಾರರಲ್ಲಿದೆ.
- ಹಾವೇರಿ ಜಿಲ್ಲೆಗೆ ಹೇಳಿಕೊಳ್ಳುವಂತಹ ಕೆಲಸಗಳು ಬೊಮ್ಮಾಯಿ ಸಿಎಂ ಆದ ವೇಳೆ ಆಗಲಿಲ್ಲ ಎಂಬ ಅಭಿಪ್ರಾಯ ಜನರಲ್ಲಿದೆ.
- ಸಂಸದ ಶಿವಕುಮಾರ್ ಉದಾಸಿ ಹಾವೇರಿ ಗದಗ ಕ್ಷೇತ್ರ ಕಡೆಗಣಿಸಿ ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದು, ಹಾಲಿ ಸಂಸದರು ಏನೂ ಮಾಡಲಿಲ್ಲ ಎಂಬ ಬೇಸರ ಮತದಾರರಲ್ಲಿದೆ.
- ಬೊಮ್ಮಾಯಿ ಸಿಎಂ ಆಗಿದ್ದ ವೇಳೆ ನೀಡಿದ ಭರವಸೆಯಂತೆ ಅಖಂಡ ಲಿಂಗಾಯತ ಸಮಾಜಕ್ಕೆ ನೀಡಿದ್ದ 2D ಮೀಸಲಾತಿ ವಿಚಾರದಲ್ಲಿ ಸ್ಪಷ್ಟತೆ ಇಲ್ಲ.
- ಕುರುಬ ಸಮಾಜದ ಕೆ.ಈ.ಕಾಂತೇಶ್ಗೆ ಟಿಕೆಟ್ ಮಿಸ್ ಆಗಿರೋದು, ಕೆಲ ಬಿಜೆಪಿ ಬೆಂಬಲಿತ ಕುರುಬ ಸಮಾಜದ ಮುಖಂಡರು ಬೇಸರ ಮಾಡಿಕೊಂಡಿದ್ದಾರೆ.
- ಸಿಎಂ ಆಗಿದ್ದ ವೇಳೆ ತಮ್ಮ ಶಿಗ್ಗಾಂವಿ ಕ್ಷೇತ್ರ ಬಿಟ್ಟು ಇಡೀ ಜಿಲ್ಲೆ ಅಭಿವೃದ್ಧಿ ಕಡೆ ಗಮನ ಹರಿಸಲಿಲ್ಲ ಎಂಬ ಭಾವನೆ ಜನರಲ್ಲಿದೆ.
- ಹಾವೇರಿ ಲೋಕಸಭಾ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ-17,58,021
- ಮಹಿಳೆಯರು-8,68,510
- ಪುರುಷರು-8,89,421
- ತೃತೀಯಲಿಂಗಿಗಳು-90
ಹಾವೇರಿ ಲೋಕಸಭಾ ಕ್ಷೇತ್ರದ ಜಾತಿವಾರು ಮತದಾರರ ಸಂಖ್ಯೆ:
- ಲಿಂಗಾಯತರ ಮತಗಳು-6,80,000
- ಕುರುಬ ಮತಗಳು-2,70,000
- ಪರಿಶಿಷ್ಟ ಜಾತಿ Sc- 2,00,000
- ಪಂಗಡದ ಮತಗಳು ST- 1,25,000
- ಮುಸ್ಲಿಂ ಮತಗಳು-2,95,000
- ಗಂಗಾಮತ ಮತಗಳು-50,000
- ಬ್ರಾಹ್ಮಣ- 45,000
- ಮರಾಠ- 45,000
- ಇತರೆ-1,50,000
ಇದನ್ನೂ ಓದಿ :ಕೊನೆಯುಸಿರಿನವರೆಗೂ ಕ್ಷೇತ್ರದ ಜನಸೇವೆ ಮಾಡುವೆ: ಶಿಗ್ಗಾಂವಿಯಲ್ಲಿ ಬೊಮ್ಮಾಯಿ ಭಾವುಕ