ಕರ್ನಾಟಕ

karnataka

ETV Bharat / state

ದಾವಣಗೆರೆ ವಿರಕ್ತ ಮಠದಲ್ಲಿ ಬಸವ ಜಯಂತಿ ಆಚರಣೆ: ಬಸವೇಶ್ವರ ಜಯಂತ್ಯುತ್ಸವಕ್ಕಿದೆ ದೊಡ್ಡ ಇತಿಹಾಸ - Basava Jayanti

ದಾವಣಗೆರೆ ವಿರಕ್ತ ಮಠದಲ್ಲಿ 1913ರಲ್ಲಿ ಮೊದಲ ಬಾರಿಗೆ ಬಸವ ಜಯಂತಿ ಆಚರಿಸಲಾಯಿತು. ಅಂದಿನಿಂದ ಇಲ್ಲಿಯ ತನಕ ವಿರಕ್ತ ಮಠದಲ್ಲಿ ಲಿಂಗಾಯತ ಸಂಪ್ರದಾಯದ ವಿವಿಧ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿಕೊಂಡು ಬರಲಾಗುತ್ತಿದೆ.

Davangere Virakta Math
ದಾವಣಗೆರೆ ವಿರಕ್ತ ಮಠದಲ್ಲಿ ಬಸವ ಜಯಂತಿ ಆಚರಿಸಲಾಯಿತು. (Etv Bharat)

By ETV Bharat Karnataka Team

Published : May 10, 2024, 6:57 PM IST

Updated : May 10, 2024, 8:17 PM IST

ವಿರಕ್ತ ಮಠದಲ್ಲಿ ಬಸವ ಜಯಂತಿ ಆಚರಣೆ (ETV Bharat)

ದಾವಣಗೆರೆ:ಶೋಷಿತರ ಪರ ಕೆಲಸ ಮಾಡಿ ಸಮಾನತೆ ಸಮಾಜದ ಪರಿಕಲ್ಪನೆ ಕಂಡಿದ್ದ ಮಹಾನ್ ದಾರ್ಶನಿಕ ಶ್ರೀ ಜಗಜ್ಯೋತಿ ಬಸವಣ್ಣವರ ಜಯಂತಿಯನ್ನು ವಿಶ್ವದಲ್ಲೇ ಮೊದಲ ಬಾರಿಗೆ ದಾವಣಗೆರೆ ಜಿಲ್ಲೆಯಲ್ಲಿ ಆಚರಿಸಿದ್ದು ಐತಿಹಾಸಿಕತೆಗೆ ಸಾಕ್ಷಿಯಾಗಿದೆ.

1913ರಲ್ಲಿ ವಿಶ್ವದಲ್ಲೇ ಮೊದಲ ಬಾರಿಗೆ ಬಸವ ಜಯಂತಿಯನ್ನು ಮುರುಘಾ ಮಠದ ಶಾಖಾಮಠ ದಾವಣಗೆರೆ ವಿರಕ್ತ ಮಠದಲ್ಲಿ ಆಚರಿಸಲಾಯಿತು. ಅಂದಿನಿಂದ ಇಲ್ಲಿಯ ತನಕ ಈ ಶಿವಯೋಗಿ ಶಾಖಾ ಮಠದಲ್ಲಿ ವಿಭಿನ್ನವಾಗಿ ಬಸವಣ್ಣನವರ ಜಯಂತಿ ಆಚರಿಸಲಾಗುತ್ತಿದೆ.

ವಿರಕ್ತ ಮಠ:ಚಿತ್ರದುರ್ಗದ ಮುರುಘಾ ಬೃಹನ್ಮಠದ ಶಾಖಾ ಮಠ ಆಗಿರುವ ದಾವಣಗೆರೆ ದೊಡ್ಡಪೇಟೆಯ ವಿರಕ್ತ ಮಠ ಶತ ಶತಮಾನಗಳಿಂದ ಧಾರ್ಮಿಕ, ಆಧ್ಯಾತ್ಮಿಕ, ಸಮಾಜಮುಖಿ ಸೇವಾಕಾರ್ಯ ಹಮ್ಮಿಕೊಳ್ಳುವುದರಲ್ಲಿ ಸದಾ ಮುಂಚೂಣಿಯಲ್ಲಿದೆ. ವಿರಕ್ತ ಮಠವು ಲಿಂಗಾಯತ ಸಮಾಜಕ್ಕೆ ನೀಡಿರುವ ಕೊಡುಗೆ ಅಪಾರ. ವಿರಕ್ತ ಮಠ ಶತ ಶತಮಾನಗಳಿಂದ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿದೆ. ದಾವಣಗೆರೆ ವಿರಕ್ತ ಮಠ ವಿಶ್ವದಲ್ಲೇ ಹಲವಾರು ಪ್ರಥಮಗಳಿಗೂ ಸಾಕ್ಷಿಯಾಗಿದೆ.ವಿರಕ್ತ ಮಠದಲ್ಲಿ ಶತಮಾನಗಳ ಹಿಂದೆ ಪ್ರಾರಂಭಿಸಿದ ಧಾರ್ಮಿಕ ಚಟುವಟಿಕೆಗಳು ಪಾರಂಪರಿಕವಾಗಿ ಮುಂದುವರಿದಿದ್ದು ಈ ಮಠದ ಧಾರ್ಮಿಕ, ಸಮಾಜಮುಖಿ ಕಾರ್ಯಗಳು ವಿಶ್ವ ವಿಖ್ಯಾತಿ ಪಡೆಯುತ್ತಿವೆ.

ಬಸವೇಶ್ವರ ಜಯಂತಿ ಆರಂಭಿಸಿದ ಕೀರ್ತಿ ವಿರಕ್ತ ಮಠಕ್ಕೆ:ವಿಶ್ವದಲ್ಲೇ ಮೊಟ್ಟ ಮೊದಲ ಬಾರಿಗೆ ಬಸವೇಶ್ವರರ ಜಯಂತಿ ಆರಂಭಿಸಿದ ಕೀರ್ತಿ ದಾವಣಗೆರೆ ವಿರಕ್ತ ಮಠಕ್ಕೆ ಸಲ್ಲುತ್ತದೆ. ಕರ್ನಾಟಕದ ಗಾಂಧಿ ಖ್ಯಾತಿಯ ಹರ್ಡೇಕರ್‌ ಮಂಜಪ್ಪ ಅವರು ಬಸವಣ್ಣನವರ ಜಯಂತಿಯನ್ನು ಸಾರ್ವಜನಿಕವಾಗಿ ಆಚರಿಸಲು ಆಲೋಚಿಸಿ ಮೃತ್ಯುಂಜಯ ಅಪ್ಪ ಅವರಲ್ಲಿ ಭಿನ್ನಹ ಮಂಡಿಸುತ್ತಾರೆ. ಈ ವಿಚಾರವನ್ನು ಅವರು ಜಯದೇವ ಜಗದ್ಗುರುಗಳ ಗಮನಕ್ಕೆ ತಂದಾಗ ಬಸವ ಜಯಂತಿಗೆ ಒಪ್ಪಿಗೆ ಸಿಗುತ್ತದೆ. ಬಳಿಕ 1913 ರಲ್ಲಿ ಮೊಟ್ಟ ಮೊದಲ ಬಾರಿಗೆ ವಿರಕ್ತ ಮಠದಲ್ಲಿ ಸಾರ್ವಜನಿಕವಾಗಿ ಬಸವ ಜಯಂತಿ ಆಚರಣೆ ಮಾಡಲಾಗುತ್ತಿದೆ. ನಂತರ ಜಗತ್ತಿನೆಲ್ಲೆಡೆ ಬಸವ ಜಯಂತಿ ಆಚರಣೆ ಶುರುವಾಗುತ್ತದೆ. ಇಂದಿಗೂ ಕೂಡ ವಿರಕ್ತ ಮಠದಲ್ಲಿ ಬಸವ ಜಯಂತಿಯನ್ನು ವಿಭಿನ್ನವಾಗಿ ಆಚರಿಸಿಕೊಂಡು ಬರಲಾಗುತ್ತಿದೆ.

ಮಕ್ಕಳಿಗೆ ದಾರ್ಶನಿಕರ ಹೆಸರು: ವಿರಕ್ತ ಮಠದ ಬಸವಪ್ರಭು ಶ್ರೀಗಳ ನೇತೃತ್ವದಲ್ಲಿ ಬಸವ ಜಯಂತಿ ಪ್ರಯುಕ್ತ ಇಂದು ಮಕ್ಕಳಿಗೆ ತೊಟ್ಟಿಲಿ‌ನಲ್ಲಿ ಹಾಕುವ ಮೂಲಕ ದಾರ್ಶನಿಕರ ಹೆಸರುಗಳನ್ನು ನಾಮಕರಣ ಮಾಡಲಾಯಿತು. ಮಕ್ಕಳಿಗೆ ದಾರ್ಶನಿಕರ ಹೆಸರು ನಾಮಕರಣ ಮಾಡುವುದು ಹದಿನೈದು ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ.

ಬಸವ ಪ್ರಭುರವರ ನೇತೃತ್ವದಲ್ಲಿ 15 ಮಕ್ಕಳಿಗೆ ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು, ಚನ್ನಬಸವಣ್ಣ, ವಚನ ಶ್ರೀ, ಬಸವ ಶ್ರೀ, ಮೃತ್ಯುಂಜಯ, ಜಯದೇವ ಹೀಗೆ ಮಕ್ಕಳಿಗೆ ನಾನಾ ಹೆಸರುಗಳನ್ನು ನಾಮಕರಣ ಮಾಡುವ ಮೂಲಕ ಇಂದು ವಿರಕ್ತಮಠದಲ್ಲಿ ಬಸವ ಜಯಂತಿಗೆ ಚಾಲನೆ ನೀಡಲಾಯಿತು.

ಹರ್ಡೇಕರ್‌ ಮಂಜಪ್ಪ, ಮೃತ್ಯುಂಜಯ ಅಪ್ಪ ಅವರು ಸೇರಿಕೊಂಡು 1913 ರಲ್ಲಿ ಬಸವೇಶ್ವರರ ಜಯಂತಿ ಆಚರಿಸಿದ್ದರು.
ಬಸವ ಜಯಂತಿ ಗಂಗೋತ್ರಿಯ ಸ್ಥಾನ ಈ ದಾವಣಗೆರೆಯ ವಿರಕ್ತ ಮಠ ಆಗಿದೆ ಎಂದು ವಿರಕ್ತ ಮಠದ ಪೀಠಾಧಿಪತಿ ಬಸವಪ್ರಭು ಸ್ವಾಮೀಜಿ ತಿಳಿಸಿದ್ದಾರೆ.

ಇದನ್ನೂಓದಿ:ಬೆಳಗಾವಿ: ಸಂಭ್ರಮದ ಬಸವ ಜಯಂತಿ ಆಚರಣೆ: ಐದು ಸಾವಿರ ಲೀಟರ್ ಶರಬತ್ ಹಂಚಿಕೆ - Basava Jayanti

Last Updated : May 10, 2024, 8:17 PM IST

ABOUT THE AUTHOR

...view details