ಚಿಕ್ಕಮಗಳೂರು:ಮುಂಬೈ ಕ್ರೈಂ ಬ್ರಾಂಚ್ ಪೊಲೀಸರ ಸೋಗಿನಲ್ಲಿ ಬ್ಯಾಂಕ್ ಉದ್ಯೋಗಿಯೊಬ್ಬರಿಗೆ ಬರೋಬ್ಬರಿ 17 ಲಕ್ಷ ರೂ. ವಂಚಿಸಿರುವ ಘಟನೆ ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ನಡೆದಿದೆ.
ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮಟೆ ಮಾತನಾಡಿ, "ಕೊಪ್ಪದ ಬ್ಯಾಂಕ್ ಉದ್ಯೋಗಿಯೊಬ್ಬರು ಜೂ.10 ರಂದು ಚಿಕ್ಕಮಗಳೂರಿನ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಿಮ್ಮ ಬ್ಯಾಂಕ್ನಲ್ಲಿ ವಂಚನೆ ನಡೆದಿದೆ, ಈ ಸಂಬಂಧ ಮುಂಬೈ ಕ್ರೈಂ ಬ್ರಾಂಚ್ನಲ್ಲಿ ಪ್ರಕರಣ ದಾಖಲಾಗಿದೆ. ಹೀಗಾಗಿ ನಿಮ್ಮನ್ನು ಬಂಧಿಸಬೇಕಾಗಿದೆ ಎಂಬ ಸಂದೇಶ ಬ್ಯಾಂಕ್ ಉದ್ಯೋಗಿಗೆ ಬಂದಿದೆ. ನಂತರ ವಿಡಿಯೋ ಕರೆ ಮಾಡಿ ದಾಖಲೆಗಳನ್ನು ತೋರಿಸಿ ನಿಮ್ಮ ಮೇಲೆ ಎಫ್ಐಆರ್ ದಾಖಲಾಗಿದೆ. ನಿಮ್ಮನ್ನು ಅರೆಸ್ಟ್ ಮಾಡುತ್ತೇವೆ ಎಂದು ಭಯಪಡಿಸಿದ್ದರು. ಅರೆಸ್ಟ್ ಮಾಡಬಾರದು ಎಂದರೆ ನಮ್ಮ ಖಾತೆಗೆ ಹಣ ಹಾಕಬೇಕು ಎಂದು ಹೇಳಿದ್ದಾರೆ. ಅದರಂತೆ ಬ್ಯಾಂಕ್ ಉದ್ಯೋಗಿ ವಂಚಕರ ಖಾತೆಗಳಿಗೆ 17 ಲಕ್ಷ ರೂ. ಹಾಕಿದ್ದಾರೆ.