ಕರ್ನಾಟಕ

karnataka

ETV Bharat / state

ಚುನಾವಣಾ ಬಾಂಡ್ ಮಾಹಿತಿ ನೀಡುವಂತೆ ಆಗ್ರಹಿಸಿ ಎಸ್​ಬಿಐ ಬ್ಯಾಂಕ್​ಗೆ ಯುವ ಕಾಂಗ್ರೆಸ್ ಕಾರ್ಯಕರ್ತರ ಮುತ್ತಿಗೆ - Youth Congress

ಎಲೆಕ್ಟ್ರೋಲ್ ಬಾಂಡ್‌ಗಳ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ಆದೇಶದಂತೆ ಮಾಹಿತಿ ಬಹಿರಂಗ‌ಪಡಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಯುವ ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರಿನ ಎಸ್‌ಬಿಐ ಬ್ಯಾಂಕ್ ಎದುರು ದಿಢೀರ್​ ಪ್ರತಿಭಟನೆ ನಡೆಸಿದರು.

youth congress workers protest
ಯುವ ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರಿನ ಎಸ್‌ಬಿಐ ಬ್ಯಾಂಕ್ ಎದುರು ಪ್ರತಿಭಟನೆ ನಡೆಸಿದರು.

By ETV Bharat Karnataka Team

Published : Mar 11, 2024, 6:38 PM IST

ಬೆಂಗಳೂರು:ಎಸ್​ಬಿಐ ಬ್ಯಾಂಕ್ ಚುನಾವಣಾ ಬಾಂಡ್ ವಿವರ ನೀಡುವಂತೆ ಒತ್ತಾಯಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಎಲೆಕ್ಟ್ರೋಲ್ ಬಾಂಡ್‌ಗಳ ಕುರಿತು ಸುಪ್ರೀಂಕೋರ್ಟ್ ನೀಡಿರುವ ಆದೇಶದಂತೆ ಮಾಹಿತಿ ಬಹಿರಂಗ‌ಪಡಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಯುವ ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರಿನ ಎಸ್‌ಬಿಐ ಬ್ಯಾಂಕ್ ಎದುರು ದಿಢೀರ್​ ಪ್ರತಿಭಟನೆ ನಡೆಸಿದರು. ಎಸ್​ಬಿಐ ಬ್ಯಾಂಕ್ ಚುನಾವಣೆಯ ಬಾಂಡ್ ಮಾಹಿತಿಯನ್ನು ಮುಚ್ಚಿಡುತ್ತಿದೆ ಎಂದು ಆರೋಪಿಸಿದರು.

ಚುನಾವಣೆ ಬಾಂಡ್‌ಗಳ ವಿವರ ನೀಡುವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಯುವ ಕಾಂಗ್ರೆಸ್ ಕಾರ್ಯಕರ್ತರು ಎಸ್ ಬಿಐ ಬ್ಯಾಂಕ್ ಮುತ್ತಿಗೆ ಹಾಕಲು ಪ್ರಯತ್ನಿಸಿದರು.‌ ಈ ವೇಳೆ ಬ್ಯಾಂಕ್ ಕಚೇರಿಯೊಳಗೆ ಒಳ ನುಗ್ಗಲು ಯತ್ನಿಸಿದ ಕಾರ್ಯಕರ್ತರನ್ನು ಪೊಲೀಸರು ತಡೆ ಹಿಡಿದರು ಹಾಗೂ ಎಸ್​ಬಿಐ ಬ್ಯಾಂಕ್ ಎದುರು ಧರಣಿಗೂ ಅವಕಾಶ ನಿರಾಕರಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಕಾರ್ಯಕರ್ತರು ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಫೋಟೋ ಹಿಡಿದುಕೊಂಡು ಧಿಕ್ಕಾರ ಕೂಗಿದರು.

ಎಸ್​ಬಿಐ ಬ್ಯಾಂಕ್​ವೂ ಚುನಾವಣೆ ಬಾಂಡ್ ಮಾಹಿತಿ ಮುಚ್ಚಿಡುತ್ತಿದೆ ಎಂದು ರಾಜ್ಯ ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಮಂಜುನಾಥ್ ಅವರು ಆರೋಪಿಸಿದರು. ಈ ವೇಳೆ, ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಮಂಜುನಾಥ್ ಸೇರಿ ಹಲವರನ್ನು ಪೊಲೀಸರು ವಶಕ್ಕೆ ಪಡೆದರು.

ಇದನ್ನೂಓದಿ:ಮನು ಸ್ಮೃತಿಗೆ ಅನುಗುಣವಾಗಿ ಸಂವಿಧಾನ ಇರಬೇಕು ಎಂಬುದು ಬಿಜೆಪಿಯ ಒಳಸಂಚು: ಸಿಎಂ ಸಿದ್ದರಾಮಯ್ಯ

ABOUT THE AUTHOR

...view details