ಕರ್ನಾಟಕ

karnataka

ETV Bharat / state

ಮೈಸೂರು: ಬಿರುಗಾಳಿ ಮಳೆಗೆ ನೆಲಕಚ್ಚಿದ ಬಾಳೆ, ಟೊಮೆಟೊ, ತೆಂಗು - CROP DAMAGE

ಬಿರುಗಾಳಿ ಸಹಿತ ಧಾರಾಕಾರ ಮಳೆಗೆ ಬಾಳೆ, ಟೊಮೆಟೊ, ತೆಂಗು ಮತ್ತು ತೇಗದ ಬೆಳೆ ನೆಲಕಚ್ಚಿದ ಘಟನೆ ನಂಜನಗೂಡಿನಲ್ಲಿ ನಡೆದಿದೆ.

ಬಾಳೆ, ಟೊಮೆಟೊ ಬೆಳೆ ನಾಶ
ಬಾಳೆ, ಟೊಮೆಟೊ ಬೆಳೆ ನಾಶ (ETV Bharat)

By ETV Bharat Karnataka Team

Published : Nov 2, 2024, 7:47 PM IST

ಮೈಸೂರು: ನಂಜನಗೂಡು ತಾಲೂಕಿನ ಹಲ್ಲರೆ ಗ್ರಾಮದಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆಗೆ ಬಾಳೆ, ಟೊಮೆಟೊ, ತೆಂಗು ಮತ್ತು ತೇಗದ ಬೆಳೆ ನೆಲಕಚ್ಚಿದ್ದು, ರೈತರು ಕಂಗಾಲಾಗಿದ್ದಾರೆ.

ಹಲ್ಲರೆ ಗ್ರಾಮದ ರೈತ ಬಸವರಾಜು ಎಂಬುವರು ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ಬೆಳೆದಿದ್ದ ಟೊಮೆಟೊ ಮತ್ತು ತೆಂಗು ಬೆಳೆ, ರೈತ ಚೆನ್ನಪ್ಪ ಎಂಬುವರು ಮೂರು ಎಕರೆ ಜಮೀನಿನಲ್ಲಿ ಬೆಳೆದಿದ್ದ ಬಾಳೆ ಹಾಗೂ ರೈತ ಬಸವಣ್ಣ ಬೆಳೆದಿದ್ದ ತೇಗದ ಬೆಳೆ ನಾಶವಾಗಿದೆ. ಇದರಿಂದ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

ಬೆಳೆ ನಾಶ (ETV Bharat)

ರೈತ ಬಸವರಾಜು ಮಾತನಾಡಿ, "ನಿನ್ನೆ ರಾತ್ರಿ ಗಾಳಿ - ಮಳೆಗೆ ಜಮೀನಿನಲ್ಲಿ ಬೆಳೆದಿದ್ದ ಟೊಮೆಟೊ ಬೆಳೆ ಹಾನಿಯಾಗಿದೆ. ಇದಿರಿಂದ ನಷ್ಟ ಉಂಟಾಗಿದೆ. ಜೊತೆಗೆ 8 ತೆಂಗಿನ ಮರ, 12 ತೇಗದ ಮರಗಳು ಸಹ ನೆಲಕಚ್ಚಿವೆ. ಸರ್ಕಾರ ಸೂಕ್ತ ಪರಿಹಾರ ನೀಡಬೇಕು" ಎಂದು ಮನವಿ ಮಾಡಿದರು.

ರೈತ ಚೆನ್ನಪ್ಪ ಮಾತನಾಡಿ, "ಜಮೀನಿನಲ್ಲಿ ಬೆಳೆದಿದ್ದ ಬಾಳೆ ಬೆಳೆ ನಾಶವಾಗಿದೆ. ಹೀಗಾಗಿ ತಹಶೀಲ್ದಾರ್​ ಮತ್ತು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ಪರಿಹಾರ ಒದಗಿಸಬೇಕು" ಎಂದು ವಿನಂತಿಸಿಕೊಂಡರು.

ಇದನ್ನೂ ಓದಿ:ದಾಳಿಂಬೆ ಬೆಳೆಗೆ ವರುಣಾಘಾತ: ಚುಕ್ಕಿ ರೋಗಕ್ಕೆ ನೆಲಕಚ್ಚಿದ ಫಸಲು, ಚಿನ್ನದಂತಾ ಬೆಲೆ ಇರುವಾಗ ರೈತನಿಗೆ ಬರಸಿಡಿಲು

ABOUT THE AUTHOR

...view details