ಕರ್ನಾಟಕ

karnataka

ಮಳಲಿಯಲ್ಲಿ ಮಂದಿರ ನಿರ್ಮಾಣ ಆಗಿಯೆ ತೀರುತ್ತದೆ: ಬಜರಂಗದಳ ಮುಖಂಡ ಸುನಿಲ್ ಕೆ ಆರ್

By ETV Bharat Karnataka Team

Published : Feb 2, 2024, 6:14 PM IST

ಮಳಲಿಯಲ್ಲಿ ಮಂದಿರ ನಿರ್ಮಾಣ ಆಗಿಯೇ ತೀರುತ್ತದೆ ಎಂದು ಬಜರಂಗದಳ ಮುಖಂಡ ಸುನಿಲ್ ಕೆ ಆರ್ ಹೇಳಿದ್ದಾರೆ.

Eಮಳಲಿಯಲ್ಲಿ ಮಂದಿರ ನಿರ್ಮಾಣ ಆಗಿಯೆ ತೀರುತ್ತದೆ: ಬಜರಂಗದಳ ಮುಖಂಡ
ಮಳಲಿಯಲ್ಲಿ ಮಂದಿರ ನಿರ್ಮಾಣ ಆಗಿಯೆ ತೀರುತ್ತದೆ: ಬಜರಂಗದಳ ಮುಖಂಡ

ಮಂಗಳೂರು: ಮಳಲಿ ಮಸೀದಿ ಕಟ್ಟಡ ವಿಚಾರದಲ್ಲಿ ನಮ್ಮ ಹೋರಾಟ ಮುಂದುವರಿಯುತ್ತದೆ. ಮಳಲಿಯಲ್ಲಿ ಕೂಡ ಮಂದಿರ ನಿರ್ಮಾಣ ಆಗಿಯೇ ತೀರುತ್ತದೆ ಎಂಬ ವಿಶ್ವಾಸ ಇದೆ ಎಂದು ಬಜರಂಗದಳ ಪ್ರಾಂತ ಸಂಯೋಜಕ ಸುನಿಲ್ ಕೆ ಆರ್ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಮಳಲಿ‌ ಕಟ್ಟಡದ ಬಗ್ಗೆ ಕಾನೂನು ಪ್ರಕ್ರಿಯೆಗಳು ನಡೆಯುತ್ತಿದೆ. ಅದು ಅವರ ಆಸ್ತಿಯಲ್ಲ ಎಂಬ ತೀರ್ಪು ಕೂಡ ಬಂದಿರುವುದು ಸಂತಸದ ವಿಚಾರ ಎಂದರು. ಬಳಿಕ ಮಾತನಾಡಿದ ಅವರು ಮಂಡ್ಯ ಕೆರಗೋಡು ಗ್ರಾಮದಲ್ಲಿ ಆಂಜನೇಯ ದೇವಸ್ಥಾನದ ಎದುರುಗಡೆ ಪಂಚಾಯಿತಿಯ ಅನುಮತಿ ಪಡೆದು ಹಾಕಿರುವ ಹನುಮಧ್ವಜದ ವಿಚಾರದಲ್ಲಿ ಗೊಂದಲಗಳು ನಿರ್ಮಾಣ ಆಗಿರುವುದರಿಂದ ರಾಜ್ಯಾದ್ಯಂತ ಹನುಮಧ್ವಜ ಅಭಿಯಾನ ಮತ್ತು ಫೆಬ್ರವರಿ 9 ರಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹನುಮಾನ್ ಚಾಲೀಸಾ ಪಠಣದ ಮೂಲಕ ಪ್ರತಿಭಟನೆಗೆ ಕರೆ ನೀಡಲಾಗಿದೆ ಎಂದರು.

ಇಂದಿನಿಂದ ಫೆಬ್ರವರಿ 9ರ ತನಕ ಹನುಮಧ್ವಜದ ಅಭಿಯಾನ ನಡೆಯಲಿದ್ದು, ಪ್ರತಿ ಮನೆ ಮನೆಯಲ್ಲಿ, ಧ್ವಜಕಟ್ಟೆಗಳಲ್ಲಿ ಧಾರ್ಮಿಕ ಕೇಂದ್ರಗಳಲ್ಲಿ ಹನುಮಧ್ವಜ ಹಾರಿಸುವ ಮೂಲಕ ಅಭಿಯಾನವನ್ನು ಯಶಸ್ವಿಗೊಳಿಸಲು ಬಜರಂಗದಳ ಕಾರ್ಯಕರ್ತರಿಗೆ ಕರೆ ನೀಡಲಾಗಿದೆ. ಇಡೀ ರಾಜ್ಯದ ಹಿಂದೂಗಳು ಈ ಧರ್ಮವಿರೋಧಿ ಕೃತ್ಯದ ವಿರುದ್ಧ ನಡೆಯುವ ಅಭಿಯಾನದಲ್ಲಿ ತಾವುಗಳು ಮನೆಗಳಿಗೆ ಹನುಮಧ್ವಜ ಹಾಕುವ ಮೂಲಕ ಬೆಂಬಲಿಸುವಂತೆ ವಿನಂತಿಸಲಾಗಿದೆ.

ಹಾಗೆಯೇ ಫೆಬ್ರವರಿ 9 ರಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿ ಕಚೇರಿಯ ಎದುರು ಕೆರಗೋಡು ಗ್ರಾಮದಲ್ಲಿ ಹನುಮಧ್ವಜಕ್ಕೆ ಆಗ್ರಹಿಸಿ ಸಾಮೂಹಿಕ ಹನುಮಾನ್ ಚಾಲೀಸಾ ಪಠಣ, ಧರಣಿ ಸತ್ಯಾಗ್ರಹ ನಡೆಯಲಿದ್ದು ಮತ್ತೊಮ್ಮೆ ಅದೇ ಜಾಗದಲ್ಲಿ ಹನುಮಧ್ವಜ ಹಾಕುವಂತೆ ಆಗ್ರಹಿಸಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ:ನಾವು ಹಿಂದೂಗಳ ರಕ್ಷಣೆಗೆ ಸಿದ್ಧ: ಆರ್.ಅಶೋಕ್‌

ABOUT THE AUTHOR

...view details