ಬೆಂಗಳೂರು:ರಸ್ತೆಯಲ್ಲಿ ಸಂಚರಿಸುವಾಗನಿರಂತರವಾಗಿ ಹಾರ್ನ್ ಮಾಡಿ ಸಂದೇಶ ರವಾನಿಸಿದರೂ ಆಂಬ್ಯುಲೆನ್ಸ್ಗೆ ದಾರಿ ಬಿಡದೆ, ಮೊಂಡಾಟ ತೋರಿದ್ದ ಆರೋಪಿ ಆಟೋ ಚಾಲಕನನ್ನು ಬೆಳ್ಳಂದೂರು ಸಂಚಾರ ಠಾಣೆ ಪೊಲೀಸರು ಬಂಧಿಸಿ, ಠಾಣಾ ಜಾಮೀನಿನ ಮೇರೆಗೆ ಬಿಡುಗಡೆ ಮಾಡಿದ್ದಾರೆ.
ಪರಮೇಶ್ ಎಂಬಾತನೆ ಬಂಧಿತನಾಗಿದ್ದ ಆಟೋ ಚಾಲಕ. ಕೂಡ್ಲುನಲ್ಲಿ ವಾಸವಾಗಿರುವ ಈತ ನೆರೆಮನೆಯ ವ್ಯಕ್ತಿಯೋರ್ವರಿಂದ ಆಟೋ ಪಡೆದು ಜ.21ರಂದು ಹರಳೂರು ಮಾರ್ಗವಾಗಿ ಚಲಾಯಿಸುತ್ತಿದ್ದ. ಈ ವೇಳೆ ಹಿಂಬದಿಯಿಂದ ಸೈರನ್ ಮೊಳಗಿಸಿ ಆಂಬ್ಯುಲೆನ್ಸ್ ಬಂದರೂ ಚಾಲಕ ದಾರಿ ಬಿಟ್ಟಿರಲಿಲ್ಲ. ತುರ್ತಾಗಿ ಆಸ್ಪತ್ರೆಗೆ ಹೋಗಬೇಕಾಗಿದ್ದರಿಂದ ದಾರಿ ಮಾಡಿಕೊಡುವಂತೆ ವಾಯ್ಸ್ ಸಂದೇಶ ಮೂಲಕ ತಿಳಿಸಿದರೂ ಕ್ಯಾರೆ ಅನ್ನದೆ ಆಟೊ ಚಾಲನೆ ಮುಂದುವರೆಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಬೆಂಗಳೂರು: ಶಾಪಿಂಗ್ ಮಾಲ್ನ ಎರಡನೇ ಮಹಡಿಯಿಂದ ಜಿಗಿದು ವ್ಯಕ್ತಿ ಸಾವು