ಕರ್ನಾಟಕ

karnataka

ETV Bharat / state

ಹಾಸನ: ATM ಹೊತ್ತೊಯ್ದ ಖದೀಮರು! - ATM ROBBERY

ದುಷ್ಕರ್ಮಿಗಳು ಎಟಿಎಂ ಹೊತ್ತೊಯ್ದಿರುವ ಘಟನೆ ಹಾಸನದ ಹೊರವಲಯದಲ್ಲಿ ನಡೆದಿದೆ.

ಎಟಿಎಂ ಮಷಿನ್ ಇದ್ದ ಸ್ಥಳದಲ್ಲಿ ಪೊಲೀಸರಿಂದ ಪರಿಶೀಲನೆt
ಎಟಿಎಂ ಇದ್ದ ಸ್ಥಳದಲ್ಲಿ ಪೊಲೀಸರಿಂದ ಪರಿಶೀಲನೆ (ETV Bharat)

By ETV Bharat Karnataka Team

Published : Jan 30, 2025, 9:29 AM IST

ಹಾಸನ: ಎಟಿಎಂ(ಆಟೊಮೆಟೆಡ್‌ ಟೆಲ್ಲರ್ ಮಷಿನ್)ಗೆ ಕನ್ನ ಹಾಕಿ ಹಣ ದೋಚುತ್ತಿದ್ದ ದುಷ್ಕರ್ಮಿಗಳು ಇದೀಗ ಎಟಿಎಂ ಅನ್ನೇ ಹೊತ್ತೊಯ್ದಿದ್ದಾರೆ. ನಗರದ ಹೊರವಲಯದ ಗೊರೂರು ರಸ್ತೆಯ ಹನುಮಂತಪುರದಲ್ಲಿ ಕಳೆದ ರಾತ್ರಿ ಖದೀಮರು ಕೈಚಳಕ ತೋರಿಸಿದ್ದಾರೆ.

ರಾಜ್ಯ ಹೆದ್ದಾರಿ ಬದಿಯಲ್ಲಿರುವ ಇಂಡಿಯಾ ಒನ್ ಬ್ಯಾಂಕ್​ನ ಎಟಿಎಂ ಕಾಣದಿದ್ದಾಗ ಸ್ಥಳಕ್ಕೆ ಬಂದು ಪರಿಶೀಲಿಸಲಾಗಿದೆ. ಈ ವೇಳೆ ಯಂತ್ರ ಕಳ್ಳತನವಾಗಿರುವುದು ಗೊತ್ತಾಗಿದೆ. ಪೊಲೀಸರು, ಬೆರಳಚ್ಚು ತಜ್ಞರು, ಶ್ವಾನದಳ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಎಟಿಎಂ ಇದ್ದ ಸ್ಥಳದಲ್ಲಿ ಪೊಲೀಸರಿಂದ ಪರಿಶೀಲನೆ (ETV Bharat)

"ಇಂಡಿಯಾ ಓನ್ ಎಟಿಎಂ ಕಂಪೆನಿಯವರು ಬೆಂಗಳೂರಲ್ಲಿದ್ದು, ಮಾಹಿತಿ ನೀಡಲಾಗಿದೆ. ಸ್ಥಳದಲ್ಲಿ ಕೆಲವು ಸುಳಿವುಗಳನ್ನು ಖದೀಮರು ಬಿಟ್ಟು ಹೋಗಿದ್ದಾರೆ. ಅದರ ಆಧಾರದ ಮೇಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳುತ್ತೇವೆ. ಆದಷ್ಟು ಬೇಗ ಪ್ರಕರಣ ಬಗೆಹರಿಸಿ ಆರೋಪಿಗಳನ್ನು ಬಂಧಿಸುತ್ತೇವೆ" ಎಂದು ಹಾಸನ ಗ್ರಾಮಾಂತರ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ABOUT THE AUTHOR

...view details