ಬೆಂಗಳೂರು: ಅಚಾನಕ್ಕಾಗಿ ಬೈಕ್‌ಗೆ ಟಚ್ ಆಗಿದ್ದಕ್ಕೆ ಯುವಕನಿಗೆ ಚಾಕು ತೋರಿಸಿ ಮನಬಂದಂತೆ ಹಲ್ಲೆ ಮಾಡಿರುವ ಘಟನೆ ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಈ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಹಲ್ಲೆಗೊಳಗಾದ ವಿಕ್ರಮ್ ಎಂಬವರು ನೀಡಿದ ದೂರು ಆಧರಿಸಿ ನಿತಿನ್, ಮದನ್ ಹಾಗೂ ಪ್ರಕಾಶ್ ಎಂಬುವರನ್ನು ಅರಸ್ಟ್ ಮಾಡಲಾಗಿದೆ.
ಬೆಳಗ್ಗೆ ಸುಮಾರು 11.30ರ ವೇಳೆಗೆ ಬೈಕ್ನಲ್ಲಿ ವಿಕ್ರಮ್ ಬರುವಾಗ ಆರೋಪಿಗಳ ಬೈಕ್‌ಗೆ ಟಚ್ ಆಗಿದೆ. ಅವರು ಕುಪಿತಗೊಂಡು ಪ್ರಶ್ನಿಸಿದ್ದಾರೆ. ಏಕಾಏಕಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ವಿಕ್ರಮ್ ಮೇಲೆ ಆರೋಪಿಗಳು ಕೈಯಿಂದ ಹಲ್ಲೆ ಮಾಡಿದ್ದು, ಅಂಗಡಿಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಬಂಧಿತರು ಹೆಬ್ಬಾಳ ಠಾಣಾ ವ್ಯಾಪ್ತಿಯ ಚಾಮುಂಡಿನಗರ ಹಾಗೂ ಕನಕನಗರದಲ್ಲಿ ವಾಸವಾಗಿದ್ದು, ಎಸ್ಸೆಸ್ಸೆಲ್ಸಿ ಮುಗಿಸಿ ಸಣ್ಣಪುಟ್ಟ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಚಿಕ್ಕಬಳ್ಳಾಪುರ: ಪಿತ್ರಾರ್ಜಿತ ಆಸ್ತಿಗಾಗಿ ಅಣ್ಣನ ಕೊಲೆಗೈದ ತಮ್ಮ - Murder Over Property Dispute