ಹುಬ್ಬಳ್ಳಿ:ಸಾಮಾನ್ಯವಾಗಿ ಮನುಷ್ಯರಿಗೆ ಕೃತಕ ಕಾಲು ಜೋಡಿಸುವುದನ್ನು ನೋಡಿದ್ದೇವೆ. ಆದರೆ ಪ್ರಾಣಿಗಳಿಗೆ ಅದರಲ್ಲೂ ಅತೀ ಹೆಚ್ಚು ತೂಕದ ಪ್ರಾಣಿಗಳಿಗೂ ಕೃತಕ ಕಾಲು ಜೋಡಣೆ ಅಸಾಧ್ಯವೆನ್ನಬಹುದು. ಹುಬ್ಬಳ್ಳಿಯಲ್ಲಿ ಆಕಳ ಕರುವಿಗೆ ಕೃತಕ ಕಾಲು ಜೋಡಣೆ ಮಾಡಿರುವ ಅಪರೂಪದ ಘಟನೆ ನಡೆದಿದೆ.
ರೈಲು ಅಪಘಾತದಲ್ಲಿ ತಾಯಿಯ ಜೊತೆಗೆ ತನ್ನ ಒಂದು ಕಾಲು ಕಳೆದುಕೊಂಡಿದ್ದ ಆಕಳ ಕರುವಿಗೆ ಕೃತಕ ಕಾಲು ಜೋಡಿಸಲಾಗಿದೆ. ವಿಶ್ವ ಹಿಂದೂ ಪರಿಷತ್ ನಡೆಸುವ ಗೋಶಾಲೆ ಇಂಥದ್ದೊಂದು ಅಪರೂಪದ ಕೆಲಸ ಮಾಡಿದೆ. ಅಪಘಾತದಲ್ಲಿ ಒಂದು ಕಾಲು ತುಂಡಾಗಿ ಓಡಾಡಲೂ ಆಗದೇ ಇರುವ ಆಕಳನ್ನು ಗೋ ಶಾಲೆ ಸಿಬ್ಬಂದಿ ಆರೈಕೆ ಮಾಡಿದ್ದಾರೆ. ಅಲ್ಲದೆ ಮಹಾವೀರ್ ಲಿಂಬ್ ಸೆಂಟರ್ನಿಂದ ಕೃತಕ ಕಾಲು ಜೋಡಿಸಿದ್ದಾರೆ.