ತುಮಕೂರು:ಜೂಜಾಟದಲ್ಲಿ ತೊಡಗಿದ್ದ 291 ಜನರನ್ನು ಪೊಲೀಸರು ಬಂಧಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಯುಗಾದಿ ಮತ್ತು ಮಾರನೇ ದಿನ ಜೂಜಾಟ ನಡೆಯುತ್ತಿದ್ದ ಅಡ್ಡದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ, 3 ಲಕ್ಷಕ್ಕೂ ಹೆಚ್ಚಿನ ಮೊತ್ತದ ನಗದು ವಶಕ್ಕೆ ಪಡೆದಿದ್ದಾರೆ. ತುಮಕೂರು ಜಿಲ್ಲಾ ಉಪವಿಭಾಗದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಯುಗಾದಿ ಹಬ್ಬದಂದು ಜೂಜಾಟದಲ್ಲಿ ತೊಡಗಿದ್ದ 291 ಜನರ ಬಂಧನ: 3 ಲಕ್ಷ ರೂ ವಶಕ್ಕೆ - 291 People Arrested - 291 PEOPLE ARRESTED
ತುಮಕೂರಿನಲ್ಲಿ ಜೂಜಾಟದಲ್ಲಿ ತೊಡಗಿದ್ದ 291 ಜನರನ್ನು ಪೊಲೀಸರು ಬಂಧಿಸಿದ್ದಾರೆ.
Published : Apr 11, 2024, 12:57 PM IST
|Updated : Apr 11, 2024, 1:27 PM IST
ತುಮಕೂರು ನಗರ ಉಪವಿಭಾಗದಲ್ಲಿ 15 ಪ್ರಕರಣಗಳು ದಾಖಲಾಗಿದ್ದು 77 ಜನರನ್ನು ಬಂಧಿಸಿ, 1,15,350 ರೂ ವಶಪಡಿಸಿಕೊಳ್ಳಲಾಗಿದೆ. ತಿಪಟೂರು ಉಪವಿಭಾಗದಲ್ಲಿ 11 ಪ್ರಕರಣಗಳು ದಾಖಲಾಗಿದ್ದು 63 ಜನರನ್ನು ಬಂಧಿಸಿ, 94,095 ರೂ. ವಶಪಡಿಸಿಕೊಳ್ಳಲಾಗಿದೆ. ಶಿರಾ ಉಪವಿಭಾಗದಲ್ಲಿ 20 ಪ್ರಕರಣಗಳು, 108 ಜನರ ಬಂಧಿಸಿ, 83,050 ರೂ ವಶಪಡಿಸಿಕೊಳ್ಳಲಾಗಿದೆ. ಮಧುಗಿರಿ ಉಪ ವಿಭಾಗದಲ್ಲಿ 07 ಪ್ರಕರಣಗಳು ದಾಖಲಾಗಿದ್ದು, 43 ಜನರನ್ನು ದಸ್ತಗಿರಿ ಮಾಡಿ, 29,340 ರೂ ವಶಪಡಿಸಿಕೊಳ್ಳಲಾಗಿದೆ. ಒಟ್ಟಾರೆ ತುಮಕೂರು ಜಿಲ್ಲಾದ್ಯಂತ 53 ಪ್ರಕರಣಗಳು ದಾಖಲಾಗಿದ್ದು, 291 ಜನರನ್ನು ಬಂಧಿಸಿ, ಒಟ್ಟು 3,21,835 ರೂ ವಶಪಡಿಸಿಕೊಳ್ಳಲಾಗಿದೆ.