ಕರ್ನಾಟಕ

karnataka

18-20 ವರ್ಷದ ಹುಡುಗರು ನನ್ನನ್ನು ಹೊಡೆಯೋಕೆ ಪ್ಲಾನ್ ಮಾಡಿದ್ದಾರೆ: ಇಸ್ಮಾಯಿಲ್ ತಮಟಗಾರ - Ismail Tamatagar

By ETV Bharat Karnataka Team

Published : Aug 11, 2024, 4:17 PM IST

Updated : Aug 11, 2024, 5:04 PM IST

ನಮಗೆ ಜೀವ ಬೆದರಿಕೆ ಹಾಕಿದ್ದಾರೆ. ನಿನ್ನೆ ಮಣಕಿಲ್ಲಾ, ರಸೂಲಪುರ ಗಲ್ಲಿಯಲ್ಲಿ ಕೆಲ ಹುಡುಗರು ಚಾಕು ಹಿಡಿದುಕೊಂಡು ಓಡಾಡಿದ್ದಾರೆ. ಪೊಲೀಸರು ಮತ್ತು ಪೊಲೀಸ್ ಕಮಿಷನರ್ ಮೇಲೆ ನಂಬಿಕೆ ಇದೆ. ಇದರ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು ಎಂದು ಅಂಜುಮನ್ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಒತ್ತಾಯಿಸಿದ್ದಾರೆ.

ಅಂಜುಮನ್ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ
ಅಂಜುಮನ್ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ (ETV Bharat)

ಅಂಜುಮನ್ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ (ETV Bharat)

ಧಾರವಾಡ:ಅಂಜುಮನ್​​​ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್​ ತಮಟಗಾರ ಮೇಲೆ ಹಲ್ಲೆಗೆ ಯತ್ನ ನಡೆಸಿದ ಗಂಭೀರ ಆರೋಪ ಕೇಳಿಬಂದಿದೆ. ಈ ಬಗ್ಗೆ ಕುಟುಂಬಸ್ಥರು ಇಲ್ಲಿನ ಶಹರ್​​ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಘಟನೆ ಬಗ್ಗೆ ಮಾಧ್ಯಮದವರೊಂದಿಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಸ್ಲಿಂ ಹುಡುಗರಿಂದಲೇ ಮುಸ್ಲಿಂ ನಾಯಕರನ್ನು ಹೊಡೆಸುವ ಪ್ಲಾನ್ ಇದು. ನಮಗೆ ಜೀವ ಬೆದರಿಕೆ ಹಾಕಿದ್ದಾರೆ. 18-20 ವರ್ಷದ ಹುಡುಗರು ನನ್ನನ್ನು ಹೊಡೆಯೋಕೆ ಪ್ಲಾನ್ ಮಾಡಿದ್ದಾರೆ. ಮಣಕಿಲ್ಲಾ, ರಸೂಲಪುರ ಗಲ್ಲಿಯಲ್ಲಿ ಚಾಕು ಹಿಡಿದುಕೊಂಡು ನಿನ್ನೆ ಓಡಾಡಿದ್ದಾರೆ. ಪೊಲೀಸರು ಮತ್ತು ಪೊಲೀಸ್ ಕಮಿಷನರ್ ಮೇಲೆ ನಂಬಿಕೆ ಇದೆ. ಇದರ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು ಎಂದು ಹೇಳಿದ್ದಾರೆ.

ಧಾರವಾಡ ವಿದ್ಯಾಕಾಶಿ. ಇಲ್ಲಿ ಶಾಂತಿ ಕಾಪಾಡುವುದು ಎಲ್ಲರ ಕರ್ತವ್ಯ. ಪೊಲೀಸರು ಸೂಕ್ತ ತನಿಖೆ ಮಾಡಬೇಕು. ಯಾರ ಜೊತೆಯೂ ವೈಯಕ್ತಿಕ ದ್ವೇಷ ಇಲ್ಲ. 18-20 ವರ್ಷದ ಹುಡುಗರು ಬೆದರಿಕೆ ಹಾಕಿದ್ದಾರೆ. ಅವರ ತಂದೆ ಆಟೋ ಓಡಿಸುತ್ತಾರೆ. ಇಂತಹ ‌ಹುಡುಗರಿಗೆ ಪ್ರಚೋದನೆ ಕೊಟ್ಟವರು ಯಾರು?. ನಾನು ಅವರೆಲ್ಲರ ಕುಟುಂಬಗಳಿಗೆ ಕಷ್ಟ ಇದ್ದಾಗ ಸಹಾಯ ಮಾಡಿದ್ದೇನೆ. ಆ ಹುಡುಗರ ತಪ್ಪಿಲ್ಲದೇ ಇರಬಹುದು. ಆದರೆ ಹಿಂದೆ ಇರೋರು ಯಾರು ಇದ್ದಾರೆ ಅಂತಾ ಪತ್ತೆ ಮಾಡಬೇಕು. ಯಾರು ಯಾರು ಪ್ಲಾನ್ ಮಾಡಿದ್ದಾರೆ ಎಲ್ಲ ನನಗೆ ಗೊತ್ತಿದೆ. ಕಾಲ್ ರೆಕಾರ್ಡ್ಸ್​, ವಿಡಿಯೋ ಎಲ್ಲಾ ಇವೆ. ಅದನ್ನೆಲ್ಲಾ ಪೊಲೀಸರಿಗೆ ಒಪ್ಪಿಸುವೆ ಎಂದರು.

ಒಂದು ವರ್ಷದ ಹಿಂದೆಯೇ ನನ್ನ ಮುಗಿಸಲು ಪ್ಲಾನ್ ನಡೆದಿದೆ. ಮುಸ್ಲಿಂ ಹುಡುಗರೇ ನನ್ನನ್ನು ಹೊಡೆಯುವಂತೆ ಪ್ಲಾನ್ ಮಾಡಿದ್ದಾರೆ. ಈ ಹಿಂದೆ ಮುಸ್ಲಿಂ ಹುಡುಗರನ್ನೇ 8-10 ಜನರನ್ನು ಅಪ್ರೋಚ್ ಮಾಡಿದ್ದರು. ಈ ವಿಷಯವನ್ನು ಅದೇ ಹುಡುಗರು ನಮ್ಮ ಮನೆಗೆ ಬಂದು ಹೇಳಿದ್ದಾರೆ. ಈಗ ನಾವು ಹೊಡೆಯದೇ ಇರಬಹುದು. ಮುಂದೆ ಯಾರಾದ್ರೂ ಹೊಡೆಯಬಹುದು ಅಂತಾ ಎಚ್ಚರಿಕೆ ಕೊಟ್ಟಿದ್ದಾರೆ ಎಂದು ತಮಟಗಾರ ಆತಂಕ ವ್ಯಕ್ತಪಡಿಸಿದರು.

ಸಣ್ಣ ಸಣ್ಣ ಮುಸ್ಲಿಂ ಹುಡುಗರಿಂದ ನನ್ನನ್ನು ಹೊಡೆಸಬೇಕು? ನಶೆಯಲ್ಲಿರುವ ಹುಡುಗರಿಂದ ಹೊಡೆಸಬೇಕು. ಬಳಿಕ ಆ ಹುಡುಗರನ್ನು ಎನ್‌ಕೌಂಟರ್ ಮಾಡಿಸಬೇಕು ಅಂತಾ ಪ್ಲಾನ್ ನಡೆದಿದೆ. ನನಗೇನಾದರೂ ಆದರೆ ಇಂಥವರೇ ಕಾರಣ ಅಂತಾ ನಾನು ಮನೆಯಲ್ಲಿ ಹೇಳಿದ್ದೇನೆ. ವರ್ಷದ ಹಿಂದೆಯೇ ಮನೆಯವರಿಗೆ ಹೇಳಿದ್ದೇನೆ. ನಾನು ಸಂಶಯ ಇದ್ದವರ ಬಗ್ಗೆ ಪೊಲೀಸ್ ಕಮಿಷನರ್​ಗೆ ಮಾಹಿತಿ ಕೊಟ್ಟಿದ್ದೇನೆ. ಇದರಲ್ಲಿ ರಾಜಕೀಯವಾಗಿ ಮುಗಿಸುವ ಷಡ್ಯಂತ್ರ ಇದೆ. ನನ್ನ ಮುಗಿಸುವ ಪ್ಲಾನ್​ದಲ್ಲಿ ರಾಜಕೀಯವೇ ಇದೆ ಎಂದು ದೂರಿದರು.

ಅಂಜುಮನ್ ಚುನಾವಣೆ, ಎಂಎಲ್ಎ ಚುನಾವಣೆ, ಪಾಲಿಕೆ ಚುನಾವಣೆ ಯಾವುದೋ ಒಂದು ರಾಜಕೀಯವೇ ಇದೆ. ಈ ಸಂಬಂಧ ನಾನು ಕಮಿಷನರ್​ಗೆ ದೂರು ಕೊಡಲಿದ್ದೇನೆ. ಮುಸ್ಲಿಂರೇ ಹೊಡೆಯಬೇಕು ಅಂತಾ ಪ್ಲಾನ್ ಮಾಡಿದ್ದಾರೆ. ಮುಸ್ಲಿಂರನ್ನು ಬಿಟ್ಟರೆ ಬೇರೆಯವರಿಗೆ ಕೊಟ್ಟರೆ ನನ್ನನ್ನು ಯಾವಾಗ್ಲೋ ಹೊಡೆಯುತ್ತಿದ್ದರು. ಇಷ್ಟು ದಿನ ರಕ್ಷಣೆ ಕೇಳಬೇಕು ಅನಿಸಿರಲಿಲ್ಲ ಆದರೆ ಈಗ ಪೊಲೀಸ್ ರಕ್ಷಣೆ ಬೇಕಾಗಿದೆ. ಈ ಸಂಬಂಧ ನಾನು ಪೊಲೀಸ್ ರಕ್ಷಣೆ ಕೇಳುವೆ. ಈ ಹಿಂದೆಯೂ ನನ್ನ ವಿರುದ್ಧ ಪ್ಲಾನ್ ಆಗಿದ್ದರ ಬಗ್ಗೆ ಪೊಲೀಸ್ ಕಮಿಷನರ್​ಗೆ ಮಾಹಿತಿ ಕೊಟ್ಟಿದ್ದೇನು ಎಂದು ತಿಳಿಸಿದರು.

ಹುಬ್ಬಳ್ಳಿ - ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್​ ದರೂರ ಓಣಿಗೆ ಭೇಟಿ ನೀಡಿ ಸಿಸಿಟಿವಿ ಪರಿಶೀಲನೆ ಮಾಡಿ ಮಾಹಿತಿ ಪಡೆದುಕೊಂಡರು.

ಪೊಲೀಸ್​ ಕಮಿಷನರ್​ ಹೇಳಿದ್ದೇನು?:ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿನ್ನೆ‌ ರಾತ್ರಿ 10 ಗಂಟೆಗೆ 7 ಜನ ನಿಂತು ಗಲಾಟೆ ಮಾಡುತ್ತಿದ್ದರು. ಜಮಾಲ ತಮಟಗಾರ, ಅವರಿಗೆ ಗಲಾಟೆ ಮಾಡಬೇಡಿ ಎಂದು ಹೇಳಿದ್ದಾರೆ. ರಸ್ತೆ ಮೇಲೆ ಗಲಾಟೆ ಮಾಡುತ್ತಿದ್ದವರು ಪ್ರಶ್ನೆ ಮಾಡಿದ್ದಕ್ಕೆ ಚಾಕುವಿನಿಂದ ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆ. ಸದ್ಯ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ನಾನು ವಿಚಾರಣೆ ಮಾಡುತ್ತೇನೆ. ನಮ್ಮ ಇಲಾಖೆ ಸೂಕ್ತ ತನಿಖೆ ನಡೆಸುತ್ತದೆ. ಪ್ರಕರಣದಲ್ಲಿ ಯಾರ‍್ಯಾರು ಭಾಗಿಯಾಗಿದ್ದಾರೆ ಅನ್ನೋದು ತನಿಖೆಯಲ್ಲಿ ಬೆಳಕಿಗೆ ಬರುತ್ತದೆ. ಸದ್ಯ ಸಿಸಿಟಿವಿಯಲ್ಲಿ ವಿಡಿಯೋ ಪರಿಶೀಲನೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ:ಧಾರವಾಡ: ಅಂಜುಮನ್ ಸಂಸ್ಥೆ ಅಧ್ಯಕ್ಷನ ಮೇಲೆ ಹಲ್ಲೆಗೆ ಯತ್ನ ಆರೋಪ: ದೂರು ದಾಖಲು - Attempt To Assault

Last Updated : Aug 11, 2024, 5:04 PM IST

ABOUT THE AUTHOR

...view details