ಕರ್ನಾಟಕ

karnataka

ETV Bharat / state

ಧಾರವಾಡ: ರಾತ್ರಿ ಒಟ್ಟಿಗೆ ಕುಳಿತು ಊಟ ಮಾಡಿ ಬೆಳಗಾಗುವ ಮುನ್ನ ಕೊನೆಯುಸಿರೆಳೆದ ವೃದ್ಧ ದಂಪತಿ - ELDERLY COUPLE DIED

ರೈತ ಕುಟುಂಬದ ದಂಪತಿ ರಾತ್ರಿ ಜೊತೆಗೆ ಊಟ ಮಾಡಿ ಮಲಗಿದವರು ಇಂದು ಬೆಳಗ್ಗೆ ಸಾವನ್ನಪ್ಪಿದ್ದಾರೆ.

DHARWAD  ELDERLY COUPLE UNITED IN DEATH  ಸಾವಿನಲ್ಲೂ ಒಂದಾದ ದಂಪತಿ  DEATH TOGETHER
ಸಾವಿನಲ್ಲೂ ಒಂದಾದ ವೃದ್ಧ ದಂಪತಿ (ETV Bharat)

By ETV Bharat Karnataka Team

Published : Feb 17, 2025, 12:35 PM IST

ಧಾರವಾಡ:ಧಾರವಾಡ ಸಮೀಪದ ದೇವರ ಹುಬ್ಬಳ್ಳಿ ಗ್ರಾಮದ ರೈತ ಕುಟುಂಬದ ದಂಪತಿಗಳಾದ ಈಶ್ವರ ಆರೇರ (82) ಹಾಗೂ ಪತ್ನಿ ಪಾರವ್ವಾ ಆರೇರ (73) ಇಬ್ಬರೂ ಇಂದು ಬೆಳಗಿನ ಜಾವ ತಮ್ಮ‌ ನಿವಾಸದಲ್ಲಿ ಮೃತಪಟ್ಟಿದ್ದಾರೆ. ನಾಲ್ವರು ಪುತ್ರಿಯರು 12 ಮೊಮ್ಮಕ್ಕಳು ಸೇರಿದಂತೆ ಬಂಧು ವರ್ಗದವರನ್ನು ಮೃತರು ಅಗಲಿದ್ದಾರೆ.

ಕಳೆದ ಕೆಲವು ತಿಂಗಳಿಂದ ಪಾರವ್ವಾ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ.

ಭಾನುವಾರ ರಾತ್ರಿ ಇಬ್ಬರೂ ಒಟ್ಟಿಗೆ ಊಟ ಮಾಡಿದ್ದಾರೆ. ಆದರೆ ಬೆಳಗಾಗುವಷ್ಟರಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಕುಟುಂಬ ಮೂಲಗಳು ಮಾಹಿತಿ ನೀಡಿವೆ.

ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಇಂದು ಸಂಜೆ ಅಂತ್ಯಕ್ರಿಯೆ ನಡೆಸಲು ವ್ಯವಸ್ಥೆ ಮಾಡಿದ್ದಾರೆ.

ಇದನ್ನೂ ಓದಿ:ಮೈಸೂರು: ಅಪಾರ್ಟ್​ಮೆಂಟ್​ನಲ್ಲಿ ಒಂದೇ ಕುಟುಂಬದ ನಾಲ್ವರು ಶವವಾಗಿ ಪತ್ತೆ

ABOUT THE AUTHOR

...view details