ಕರ್ನಾಟಕ

karnataka

ETV Bharat / state

ಎಲೆಕ್ಟ್ರಿಕ್,​ ಮೆಥನಾಲ್,​ ಎಥೆನಾಲ್ ಬಳಸುವ ರಿಕ್ಷಾಗಳಿಗೆ ದ.ಕನ್ನಡ ಜಿಲ್ಲೆಯಲ್ಲಿ ಸಂಚರಿಸಲು ಅನುಮತಿ - Electric Auto - ELECTRIC AUTO

ಎಲೆಕ್ಟ್ರಿಕ್ ರಿಕ್ಷಾಗಳಿಗೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸಂಚರಿಸಲು ಅನುಮತಿಸಲಾಗಿದೆ. ಈ ಹಿಂದೆ ಹೊರಡಿಸಲಾಗಿದ್ದ ಅಧಿಸೂಚನೆಗಳು ರದ್ದುಗೊಂಡಿವೆ.

ಎಲೆಕ್ಟ್ರಿಕ್ ಆಟೋಗಳಿಗೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸಂಚರಿಸಲು ಅನುಮತಿ
ಎಲೆಕ್ಟ್ರಿಕ್ ಆಟೋ (ETV Bharat)

By ETV Bharat Karnataka Team

Published : Aug 7, 2024, 2:50 PM IST

ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಎಲೆಕ್ಟ್ರಿಕ್ ರಿಕ್ಷಾಗಳು ಹಾಗೂ ಮೆಥನಾಲ್,​ ಎಥೆನಾಲ್ ಬಳಸಿ ಸಂಚರಿಸುವ ಆಟೋಗಳಿಗೆ ಮುಕ್ತವಾಗಿ ಸಂಚರಿಸಲು ಅನುಮತಿ ನೀಡಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶಿಸಿದ್ದಾರೆ.

ಈ ನಿಟ್ಟಿನಲ್ಲಿ ಎಲ್ಲ ರಿಕ್ಷಾಗಳೊಂದಿಗೆ ಇ-ರಿಕ್ಷಾಗಳು ಹಾಗೂ ಮೆಥನಾಲ್, ಎಥೆನಾಲ್ ಬಳಸಿ ಸಂಚರಿಸುವ ರಿಕ್ಷಾಗಳಿಗೆ ವಲಯ 1ರಲ್ಲಿ ನೀಲಿ ಬಣ್ಣದ ಹಾಗೂ ವಲಯ 2ರಲ್ಲಿ ಹಳದಿ ಬಣ್ಣದ ಸ್ಟಿಕ್ಕರ್/ಗುರುತಿನ ಸಂಖ್ಯೆಗಳನ್ನು ಪೊಲೀಸ್ ಇಲಾಖೆಯಿಂದ ಪಡೆದು ಅಂಟಿಸಲು ಹೊರಡಿಸಲಾಗಿದ ಅಧಿಸೂಚನೆ ರದ್ದುಪಡಿಸಲಾಗಿದೆ. ದಿನಾಂಕ 24-11-2022ರ ಅಧಿಸೂಚನೆ ಮತ್ತು 23-01-2023ರ ಮಾರ್ಪಾಡು ಅಧಿಸೂಚನೆಗಳು ರದ್ದಾಗಿವೆ.

ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲು ಆರ್.ಟಿ.ಒ. ಅಧಿಕಾರಿಗಳಿಗೆ ಆದೇಶಿಸಲಾಗಿದೆ. ಅಲ್ಲದೇ, ಈ ಸಂಬಂಧ ಅವಶ್ಯವಿರುವ ಸೂಚನಾ ಫಲಕಗಳನ್ನು ಅಳವಡಿಸಲು ಮಂಗಳೂರು ನಗರ ಡಿಸಿಪಿ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಅಧಿಕಾರ ನೀಡಲಾಗಿದೆ. ಮೋಟಾರು ವಾಹನ ಕಾಯಿದೆಯಂತೆ ಪಾರ್ಕಿಂಗ್ ಸ್ಥಳಗಳನ್ನು ಮತ್ತು ನಿಲುಗಡೆ ನಿಲ್ದಾಣಗಳಿಗೆ ಸ್ಥಳಗಳನ್ನು ನಿರ್ಧರಿಸಲು ಮಂಗಳೂರು ನಗರದಲ್ಲಿ ಮಹಾನಗರಪಾಲಿಕೆ ಆಯುಕ್ತರು ಹಾಗೂ ಇತರೆ ಪ್ರದೇಶಗಳಲ್ಲಿ ಸಂಬಂಧಿಸಿದ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಅಧಿಕಾರ ನೀಡಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

ಇದನ್ನೂ ಓದಿ:ಬೆಂಗಳೂರು ನಗರ ವಿಶ್ವವಿದ್ಯಾಲಯದಿಂದ ವಿದೇಶಿ ಭಾಷೆಗಳ ಕಲಿಕೆಗೆ ಅವಕಾಶ - Benglauru City University

ABOUT THE AUTHOR

...view details