ಕರ್ನಾಟಕ

karnataka

ETV Bharat / state

ಜಲಸಿರಿ ಯೋಜನೆ: ನೀರು ಬೇಕಾಬಿಟ್ಟಿ ವ್ಯರ್ಥ ಮಾಡ್ತಿದ್ರೆ ಈಗಲೇ ಎಚ್ಚೆತ್ತುಕೊಳ್ಳಿ, ನಿಮ್ಮ ಮನೆಗೆ ಬರಲಿದೆ ಭಾರಿ ಬಿಲ್! - Jalasiri Project

ಜಲಸಿರಿ ಯೋಜನೆಯ ನೀರಿನ ಬಿಲ್ ನೋಡಿದ ಜನಸಾಮಾನ್ಯರು ಹುಬ್ಬೇರಿಸಿದ್ದು, ಈ ಬಗ್ಗೆ ಹಲವು ಆರೋಪಗಳು ಕೇಳಿ ಬಂದಿವೆ.

Davanagere Palike
ದಾವಣಗೆರೆ ಪಾಲಿಕೆ (ETV Bharat)

By ETV Bharat Karnataka Team

Published : Jun 28, 2024, 8:27 AM IST

ಜಲಸಿರಿ ಯೋಜನೆ ಬಗ್ಗೆ ಪ್ರತಿಕ್ರಿಯೆ (ETV Bharat)

ದಾವಣಗೆರೆ: ಬೆಣ್ಣೆನಗರಿಯಲ್ಲಿ ಜಲಸಿರಿ ಯೋಜನೆ ಕಾರ್ಯಪ್ರವೃತ್ತಿಯಲ್ಲಿದೆ. ನಗರದ ಕೆಲ ಭಾಗಗಲ್ಲಿ ಮೀಟರ್ ನಲ್ಲಿ ಮೂಲಕ ಮನೆಗಳಿಗೆ ಪಾಲಿಕೆ ನೀರು ಸರಬರಾಜು ಮಾಡುತ್ತಿದೆ. ಆದರೆ ಬಿಲ್ ಬಗ್ಗೆ ಯಾವುದೇ ಅರಿವಿಲ್ಲದಂತೆ ಜ‌ನ ಬೇಕಾಬಿಟ್ಟಿ ನೀರನ್ನು ವರ್ಥ ಮಾಡುತ್ತಿದ್ದಾರೆ. ಪಾಲಿಕೆ ಈಗ ಏಕಾಏಕಿ ನೀರಿನ ಬಿಲ್ ನೀಡುತ್ತಿದ್ದು, ಆ ಬಿಲ್ ಜನರ ಜೇಬು ಸುಡ್ತಿದೆ.

ಜಲಸಿರಿ ಯೋಜನೆಯ ನೀರಿನ ಬಿಲ್ ಬರುವುದಿಲ್ಲ. ಆ ಬಿಲ್ ಕೊಡಲು ಇನ್ನೂ ಹಲವು ದಿನಗಳು ಬೇಕೆಂದುಕೊಂಡು ತಮಗಿಷ್ಟಬಂದಂತೆ ಜನರು ನೀರನ್ನು ಬಳಕೆ ಮಾಡುತ್ತಿದ್ದರು. ಆದರೆ ಮೀಟರ್ ನಳದ ಮೂಲಕ ಸರಬರಾಜು ಆಗುವ ಹನಿಹನಿ ನೀರಿನ ದರವನ್ನು ಲೆಕ್ಕಾ ಹಾಕಲಾಗುತ್ತಿದೆ. ಜಲಸಿರಿ ಯೋಜನೆ ಮೂಲಕ ಹರಿಸುತ್ತಿರುವ ನೀರನ್ನು ಬಳಕೆ ಮಾಡಿದರೆ ಬಿಲ್ ಬರಲ್ಲ ಎಂದು ಅದೆಷ್ಟೋ ಜನರು ನೀರನ್ನು ವ್ಯರ್ಥ ಮಾಡ್ತಿದ್ದಾರೆ ಎಂಬ ಆರೋಪವಿದೆ. ಆದರೆ ಇದೀಗ ದಾವಣಗೆರೆ ‌ನಗರದ ಕೆಲ ಭಾಗಗಳಲ್ಲಿ ಪಾಲಿಕೆ ನೀರಿನ ಬಿಲ್ ಕೊಡುತ್ತಿದೆ.

ಒಂದು ತಿಂಗಳಿಗೆ 1,600 ರೂಪಾಯಿ ನೀರಿನ ಬಿಲ್​ ಬರುತ್ತಿರುವುದರಿಂದ ಜನ ಹೌಹಾರಿದ್ದಾರೆ. ಅಲ್ಲದೇ ಪಾಲಿಕೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಐದು ವರ್ಷಗಳ ಹಿಂದೆ ಜಲಸಿರಿ ಯೋಜನೆ ಜಾರಿಗೆ ತರಲಾಗಿದೆ. 24x7 ಪ್ರತಿ ಮನೆಗೆ ನೀರನ್ನು ಸರಬರಾಜು ಮಾಡುವ ದೃಷ್ಟಿಯಿಂದ ಈ ಯೋಜನೆ ಜಾರಿಗೆ ತರಲಾಗಿದೆ. ಇದನ್ನು ಕೆಯುಐಡಿಎಫ್ ನಿರ್ವಹಣೆ ಮಾಡ್ತಿದೆ. ಈಗಾಗಲೇ ದಾವಣಗೆರೆ ಪಾಲಿಕೆ ವ್ಯಾಪ್ತಿಯಲ್ಲಿ ಪಿಜೆ ಬಡಾವಣೆ, ಎಸ್ಎಸ್ ಬಡಾವಣೆ, ವಿದ್ಯಾನಗರ, ಕೆಟಿಜೆ ನಗರದ ಕೆಲ ಭಾಗಗಳಲ್ಲಿ ಹೆಚ್ಚಿನ ಮೊತ್ತದ ಬಿಲ್ ಬರುತ್ತಿದೆ ಎಂಬ ಆರೋಪವಿದೆ.

ಇದನ್ನೂ ಓದಿ:ಹಾವೇರಿಯಲ್ಲಿ ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ: 13 ಜನರ ದಾರುಣ ಸಾವು, ಬಾಲಕನಿಗೆ ಗಾಯ - ROAD ACCIDENT IN HAVERI

ಪಾಲಿಕೆ ಆಯುಕ್ತೆ ರೇಣುಕಾ ಹೇಳಿದ್ದೇನು? "ದಾವಣಗೆರೆ ಪಾಲಿಕೆ ವ್ಯಾಪ್ತಿಯಲ್ಲಿ 50 ಜಲಸಿರಿ ವಲಯಗಳಿದ್ದು, 32ರ ಕಾಮಗಾರಿ ಪೂರ್ಣಗೊಳಿಸಲಾಗಿದೆ. 18 ವಲಯಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಈಗಾಗಲೇ ಪಾಲಿಕೆ 14 ವಲಯದಲ್ಲಿ ಟ್ರೈಲರ್ ಬೇಸ್ ಮೇಲೆ ಬಿಲ್ ನೀಡಲು ಆರಂಭಿಸಿದೆ. 2011ರ ಗೈಡ್ ಲೈನ್ಸ್ ಪ್ರಕಾರ, ಬಿಲ್ಲಿಂಗ್​​ ದರವನ್ನು ನಿಗದಿ ಮಾಡಲಾಗಿದೆ. 10 ಸಾವಿರ ಲೀಟರ್ ನೀರು ಉಪಯೋಗ ಮಾಡಿದ್ರೆ 54 ರೂಪಾಯಿ ಬಿಲ್ ಬರಲಿದೆ. 10 ಸಾವಿರ ಲೀಟರ್ ಮೇಲೆ ಅನಗತ್ಯವಾಗಿ ನೀರು ಬಳಕೆ ಮಾಡಿದ್ರೆ ದರ ಏರಿಕೆ ಆಗುವ ಸಾಧ್ಯತೆ ಇರುತ್ತದೆ. ಬಿಲ್ ಹೆಚ್ಚು ಬರುತ್ತಿರುವ ಕಾರಣ ಜಲಸಿರಿ ಅಭಿಯಂತರರಿಗೆ ಆಯಾಯ ವಾರ್ಡ್ಸ್​​​ಗೆ ತೆರಳಿ ಪರಿಶೀಲನೆ ನಡೆಸಲು ಸೂಚಿಸಲಾಗಿದೆ'' ಎಂದು ಪಾಲಿಕೆ ಆಯುಕ್ತೆ ರೇಣುಕಾ ಮಾಹಿತಿ ನೀಡಿದರು.

ಇದನ್ನೂ ಓದಿ:'ನನ್ನ ಕುಟುಂಬದ ಯಾವುದೇ ಸದಸ್ಯರು ಚುನಾವಣಾ ರಾಜಕೀಯಕ್ಕೆ ಬರುವ ಪ್ರಶ್ನೆಯೇ ಇಲ್ಲ': ಡಿಕೆಶಿ - DK Shivakumar

ನೀರಿನ ವೇಗಕ್ಕೆ ಮೀಟರ್ ಓಡ್ತಿದೆ ಎಂಬ ಆರೋಪ: ದಾವಣಗೆರೆ ನಗರದಲ್ಲಿ ಜಲಸಿರಿ ಕಾಮಗಾರಿ ಪೂರ್ಣ ಮಾಡದೇ ಇದ್ರೂ ಪಾಲಿಕೆ ಬಿಲ್ ನೀಡಿ ಹಣ ವಸೂಲಿಗೆ ಮುಂದಾಗಿರುವುದು ಜನರ ಕೆಂಗ್ಗೆಣಿಗೆ ಗುರಿಯಾಗಿದೆ. ಬಿಲ್ ವಸೂಲಿ ಮಾಡುತ್ತಾ ಪಾಲಿಕೆ ಹಗಲು ದರೋಡೆ ಮಾಡುತ್ತಿದೆ. ಹೆಚ್ಚು ಬಿಲ್ ಬರುತ್ತಿರುವುದರಿಂದ ಜನ ದೂರು ನೀಡ್ತಿದ್ದಾರೆ. ಈಗಾಗಲೇ 1,800ರಷ್ಟು ಬಿಲ್ ಬರುತ್ತಿದ್ದು, ನೀರಿನ ವೇಗಕ್ಕೆ ಮೀಟರ್ ಓಡ್ತಿದೆ ಎಂಬ ಆರೋಪ ಇದೆ. ಮೀಟರ್ ಮತ್ತು ನೀರಿನ ಗುಣಮಟ್ಟ ಪರಿಶೀಲನೆ ಮಾಡಬೇಕಾಗಿದೆ. ಈ ಎಲ್ಲ ಪರಿಶೀಲನೆ ನಡೆಸಿದ ಬಳಿಕ ಬಿಲ್ ಕೊಡುವುದು ಸರಿ. ಇದ್ಯಾವುದನ್ನು ಮಾಡದ ಪಾಲಿಕೆ ಕಾನೂನು ಬಾಹಿರವಾಗಿ ಬಿಲ್ ನೀಡುತ್ತಿದೆ. ಒಟ್ಟು 14 ವಲಯಗಳಲ್ಲಿ ಈ ರೀತಿಯ ಬಿಲ್ ಸಮಸ್ಯೆ ಆಗಿದೆ. ಪಿಜೆ ಬಡಾವಣೆ, ಎಸ್ಎಸ್ ಬಡಾವಣೆ, ವಿದ್ಯಾನಗರ, ಕೆಟಿಜೆ ನಗರದ ಕೆಲ ಭಾಗದಲ್ಲಿ ಬಿಲ್ ಹೆಚ್ಚು ಬಂದಿದೆ ಎಂದು ಪಾಲಿಕೆ ಸದಸ್ಯ ಪ್ರಸನ್ನ ಕುಮಾರ್ ತಿಳಿಸಿದ್ದಾರೆ.

ABOUT THE AUTHOR

...view details