ಕರ್ನಾಟಕ

karnataka

ETV Bharat / state

ದೇಶದ ಎಲ್ಲಾ ರಾಜಭವನಗಳು ಬಿಜೆಪಿ ಕಚೇರಿಗಳಾಗಿವೆ: ಬಿ.ಕೆ.ಹರಿಪ್ರಸಾದ್ - B K Hariprasad

ಎಂಎಲ್​ಸಿ ಬಿ. ಕೆ ಹರಿಪ್ರಸಾದ್ ಅವರು ದೇಶದ ಎಲ್ಲಾ ರಾಜಭವನಗಳು ಭಾರತೀಯ ಜನತಾ ಪಾರ್ಟಿ ಕಚೇರಿಗಳಾಗಿವೆ ಎಂದಿದ್ದಾರೆ.

MLC B K Hariprasad
ಕಾಂಗ್ರೆಸ್‌ ಎಂಎಲ್​ಸಿ ಬಿ.ಕೆ.ಹರಿಪ್ರಸಾದ್ (ETV Bharat)

By ETV Bharat Karnataka Team

Published : Aug 8, 2024, 9:56 PM IST

ಕಾಂಗ್ರೆಸ್‌ ಎಂಎಲ್​ಸಿ ಬಿ.ಕೆ.ಹರಿಪ್ರಸಾದ್ ಹೇಳಿಕೆ (ETV Bharat)

ಬೆಂಗಳೂರು: ರಾಜ್ಯ ರಾಜಭವನವೂ ಸೇರಿ ದೇಶದ ಎಲ್ಲಾ ರಾಜಭವನಗಳು ಭಾರತೀಯ ಜನತಾ ಪಾರ್ಟಿ ಕಚೇರಿಗಳಾಗಿವೆ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ವ್ಯಂಗ್ಯವಾಡಿದರು‌.

ವಿಧಾನಸೌಧದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಭಾಗಿಯಾಗಿದ್ದಾರೆ ಎಂದು ರಾಜ್ಯಪಾಲರಿಗೆ ದೂರು ನೀಡಿರುವ ಸಂಬಂಧ ಶೋಕಾಸ್ ನೀಡಿದ ಹಿನ್ನೆಲೆಯಲ್ಲಿ ಈಗಾಗಲೇ ಸಮಗ್ರ ಉತ್ತರ ನೀಡಲಾಗಿದೆ. ರಾಜಕಾರಣಕ್ಕಾಗಿ ರಾಜಭವನ ಬಳಸಿಕೊಳ್ಳುವುದು ಹೊಸದೇನಲ್ಲ‌‌‌ ಎಂದರು.

ನಮ್ಮಲ್ಲಿ ಮತಭೇದವಿರಬಹುದು, ಮನಭೇದವಿಲ್ಲ: ನಿನ್ನೆ ಸಿಎಂ ಭೇಟಿ ಬಗ್ಗೆ ಮಾಡಿರುವ ಪ್ರಶ್ನೆಗೆ ಉತ್ತರಿಸಿದ ಹರಿಪ್ರಸಾದ್, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ. ಮೈಸೂರಿನಲ್ಲಿ‌ ನಡೆಯುವ ಸಾರ್ವಜನಿಕ ಸಭೆಗೆ ಆಹ್ವಾನಿಸಿದ್ದರು‌‌‌. ಹೀಗಾಗಿ ಭೇಟಿ ಮಾಡಿ ಮಾತನಾಡಿ ಬಂದಿದ್ದೇನೆ. ನಮ್ಮಲ್ಲಿ ಮತಭೇದವಿರಬಹುದು. ಆದರೆ ಮನಭೇದವಿಲ್ಲ. ನಾಳೆ ಮೈಸೂರಿನಲ್ಲಿ ನಡೆಯುವ ಸಮಾವೇಶದಲ್ಲಿ ಭಾಗವಹಿಸುತ್ತೇನೆ ಎಂದು ಹೇಳಿದರು.

ಸರ್ಕಾರದ ಬಗ್ಗೆ ಇಲ್ಲಸಲ್ಲದ ಆರೋಪವನ್ನು ಮೈತ್ರಿ ಪಕ್ಷಗಳು ಮಾಡುತ್ತಿವೆ. ಈ ಆರೋಪಗಳಿಗೆ ಮೈಸೂರಲ್ಲೇ ಉತ್ತರಿಸುತ್ತೇವೆ. ರಾಜ್ಯ ರಾಜಕಾರಣದಲ್ಲಿ ಬೆಳವಣಿಗೆಯಾದಾಗ ಹೈಕಮಾಂಡ್ ನಾಯಕರು ಬರುವುದು ಸಹಜ. ಕೆಲವು ನಿರ್ದೇಶನಗಳನ್ನು ನೀಡಿರುವುದು ನಿಜ. ಸರ್ಕಾರ ಕೆಡಹುವುದು ಪ್ರತಿಪಕ್ಷಗಳಿಗೆ ಸುಲಭವಲ್ಲ. ಮಾಜಿ ಪ್ರಧಾನಿ ದೇವೇಗೌಡರಾಗಲೀ, ವಿಪಕ್ಷ ನಾಯಕರಾಗಲೀ ಯಾರೂ ಸನ್ಯಾಸಿಗಳಲ್ಲ. ಅವರ ರಾಜಕಾರಣ ಅವರು ಮಾಡಲಿ. ನಾವೂ ನಮ್ಮ ರಾಜಕಾರಣ ಮಾಡುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ:ಮುಡಾ ಹಗರಣದ ವಿಚಾರಣೆ ಬಳಿಕ ಹಾಲು ಯಾವುದು, ನೀರು ಯಾವುದೆಂದು ಗೊತ್ತಾಗುತ್ತದೆ: ಬಿ.ಕೆ. ಹರಿಪ್ರಸಾದ್ - B K Hariprasad

ABOUT THE AUTHOR

...view details