ಬೆಂಗಳೂರು: ಬೆಂಗಳೂರು ನಗರದ ಅಂತರ್ಜಲ ಮಟ್ಟವನ್ನು ನಿರಂತರಾಗಿ ಮಾನಿಟರಿಂಗ್ ಮಾಡಲು ಐಐಎಸ್‌ಸಿ ವಿಜ್ಞಾನಿಗಳು, ಸಿಜಿಡಬ್ಲೂಬಿ ಜೊತೆಗೂಡಿ ಎಐ ಬೇಸ್ಡ್ ಅಡ್ವಾನ್ಸ್‌ಡ್ ಗ್ರೌಂಡ್ ವಾಟರ್ ಮಾನಿಟರಿಂಗ್ ಸಿಸ್ಟಮ್ ಅಳವಡಿಸಿಕೊಳ್ಳಾಗುತ್ತದೆ ಎಂದು ಜಲಮಂಡಳಿ ಅಧ್ಯಕ್ಷ ಡಾ. ವಿ ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.
ಸೋಮವಾರ ಜಲಮಂಡಳಿಯ ಕೇಂದ್ರ ಕಚೇರಿಯಲ್ಲಿ ಐಐಎಸ್‌ಸಿ ವಿಜ್ಞಾನಿಗಳು ಮತ್ತು ಸೆಂಟ್ರಲ್ ಗ್ರೌಂಡ್ ವಾಟರ್ ಬೋರ್ಡ್‌ನ ಅಧಿಕಾರಿಗಳೊಂದಿನ ಸಭೆಯ ನಂತರ ಮಾತನಾಡಿದ ಅವರು, ಐಐಎಸ್‌ಸಿ ವಿಜ್ಞಾನಿಗಳು, ಸಿಡಬ್ಲೂಜಿಬಿ ಮತ್ತು ಕರ್ನಾಟಕ ಅಂತರ್ಜಲ ಪ್ರಾಧಿಕಾರದ ಜೊತೆಗೂಡಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ ಗ್ರೌಂಡ್ ವಾಟರ್ ಟಾಸ್ಕ್ ಫೋರ್ಸ್ ರಚಿಸಲಾಗುವುದು. ಈ ಟಾಸ್ಕ್ ಫೋರ್ಸ್ ಮೂಲಕ ನಗರದ ಅಂತರ್ಜಲ ಮಟ್ಟವನ್ನು ನಿರಂತರವಾಗಿ ಮಾನಿಟರಿಂಗ್ ಮಾಡಲಾಗುವುದು. ನಿರಂತರವಾಗಿ ದತ್ತಾಂಶಗಳ ಕ್ರೋಢೀಕರಣ ವಿಶ್ಲೇಷಣೆ ಮೂಲಕ ಉತ್ತಮ ನಿರ್ಧಾರಗಳನ್ನು ಕೈಗೊಳ್ಳಲು ಈ ಟಾಸ್ಕ್ ಫೋರ್ಸ್ ಸಹಾಯ ಮಾಡಲಿದೆ ಎಂದರು.
ಎಐ ಆಧಾರಿತ ಅಡ್ವಾನ್ಸ್‌ಡ್ ಗ್ರೌಂಡ್ ವಾಟರ್ ಮಾನಿಟರಿಂಗ್ ಸಿಸ್ಟಮ್: ಬೆಂಗಳೂರು ನಗರದಲ್ಲಿ ನೀರಿನ ಕೊರತೆ ಎದುರಾಗಲು ಅಂತರ್ಜಲ ಮಟ್ಟ ಕಡಿಮೆಯಾಗಿರುವುದೇ ಪ್ರಮುಖ ಕಾರಣವಾಗಿದೆ. ಅಂತರ್ಜಲ ಮಟ್ಟ ಯಾವ ಹಂತದಲ್ಲಿದೆ, ಯಾವ ಪ್ರದೇಶಗಳಲ್ಲಿ ನೀರಿನ ಲಭ್ಯತೆ ವಿಫುಲವಾಗಿದೆ. ಸಾಂಪ್ರದಾಯಿಕ ವ್ಯವಸ್ಥೆಯಿಂದ ಸರಿಯಾದ ಮಾಹಿತಿ ಲಭ್ಯವಾಗದೇ ಇರುವುದರಿಂದ ಬಹಳಷ್ಟು ತೊಂದರೆಯಾಗುತ್ತಿದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ತಂತ್ರಜ್ಞಾನ ಆಧಾರಿತ ಮಾನಿಟರಿಂಗ್ ಸಿಸ್ಟಮ್ ಅಳವಡಿಕೆ ಅಗತ್ಯವಿದೆ. ಇದನ್ನು ಮನಗಂಡಿರುವ ಜಲಮಂಡಳಿ ಐಐಎಸ್‌ಸಿ ವಿಜ್ಞಾನಿಗಳು, ಸಿಡಬ್ಲೂಜಿಬಿ ಮತ್ತು ಕರ್ನಾಟಕ ಅಂತರ್ಜಲ ಪ್ರಾಧಿಕಾರದ ಜೊತೆಗೂಡಿ ಎಐ ಬೇಸ್ಡ್ ಅಡ್ವಾನ್ಸ್‌ಡ್ ಗ್ರೌಂಡ್ ವಾಟರ್ ಮಾನಿಟರಿಂಗ್ ಸಿಸ್ಟಮ್ ಅಳವಡಿಸಿಕೊಳ್ಳಲು ಮುಂದಾಗಿದೆ ಎಂದು ತಿಳಿಸಿದರು.
ಅಂತರ್ಜಲ ಮಾನಿಟರಿಂಗ್ ವ್ಯವಸ್ಥೆ ನಿರ್ಮಾಣದಲ್ಲಿ ಅಳವಡಿಸಿಕೊಳ್ಳಲಾಗುವ ಎಐ ಮತ್ತು ಐಓಟಿ ತಂತ್ರಜ್ಞಾನ ನಿರ್ಮಾಣ ಮತ್ತು ಅಳವಡಿಕೆಯ ಮುಂದಾಳತ್ವವನ್ನು ದೇಶದ ಪ್ರಮುಖ ಸಂಸ್ಥೆಯಾಗಿರುವ ಐಐಎಸ್‌ಸಿ ವಿಜ್ಞಾನಿಗಳು ವಹಿಸಿಕೊಳ್ಳಲಿದ್ದಾರೆ. ಮಾಹಿತಿಯ ಸಂಗ್ರಹಣೆ, ದತ್ತಾಂಶದ ವಿಶ್ಲೇಷಣೆ ಸೇರಿದಂತೆ ಅಗತ್ಯ ಮಾಹಿತಿಯ ಕ್ರೋಢೀಕರಣ ಹಾಗೂ ವರದಿಯನ್ನು ನೀಡುವ ನಿಟ್ಟಿನಲ್ಲಿ ಈ ತಂತ್ರಜ್ಞಾನ ಬಳಕೆಯಾಗಲಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ:ವಾಹನ ತೊಳೆಯಲು, ಗಿಡಗಳಿಗೆ ಕುಡಿಯುವ ನೀರು ಬಳಕೆ: ₹20.25 ಲಕ್ಷ ದಂಡ ವಸೂಲಿ - Drinking Water Wastage