ಕರ್ನಾಟಕ

karnataka

ETV Bharat / state

ಆಸ್ಪತ್ರೆಗೆ ದಾಖಲಾದ ದರ್ಶನ್​: 2 ದಿನ ಹಾಸ್ಪಿಟಲ್​ನಲ್ಲೇ ಚಿಕಿತ್ಸೆ

ದರ್ಶನ್​ ಅವರು ಕೆಂಗೇರಿಯ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದು, ಬೆನ್ನು ನೋವಿಗೆ ಸಂಬಂಧಿಸಿದ ಪರೀಕ್ಷೆಗಳು ನಡೆಯುತ್ತಿವೆ.

Darshan admitted to Hospital
ಆಸ್ಪತ್ರೆಗೆ ದಾಖಲಾದ ನಟ ದರ್ಶನ್​ (ETV Bharat)

By ETV Bharat Karnataka Team

Published : Nov 1, 2024, 7:55 PM IST

ಬೆಂಗಳೂರು: ಹೈಕೋರ್ಟ್ ಆರು ವಾರಗಳ ಕಾಲ ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಅವರು ಜೈಲಿನಿಂದ ಹೊರಬಂದಿದ್ದು, ಇಂದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಟನ ಶೀಘ್ರ ಚೇತರಿಕೆಗೆ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

ಹೊಸಕೆರೆಹಳ್ಳಿಯ ಅಪಾರ್ಟ್ಮೆಂಟ್​ನಿಂದ ಕೆಂಗೇರಿಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದರ್ಶನ್ ತೆರಳಿದ್ದಾರೆ. ನಟನ ಜೊತೆ ಪತ್ನಿ ವಿಜಯಲಕ್ಷ್ಮಿ ಹಾಗೂ ನಟ ಧನ್ವೀರ್ ಉಪಸ್ಥಿತರಿದ್ದರು. ಹಿರಿಯ ತಜ್ಞ ವೈದ್ಯ ಡಾ.ನವೀನ್ ಚಿಕಿತ್ಸೆ ನೀಡಲಿದ್ದಾರೆ. ಇವರು ನರರೋಗ ತಜ್ಞರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಿನ್ನೆ ಸಂಜೆ ಈ ಕುರಿತು ಕನಸಲ್ಟ್ ಮಾಡಿದ್ದರು.

ಮೊಬೈಲ್​​ನಲ್ಲಿ ಎಂಆರ್​ಐ ಸ್ಕ್ಯಾನ್ ಕಾಪಿ ಕಳುಹಿಸಿ ತಜ್ಞ ವೈದ್ಯರ ಅಭಿಪ್ರಾಯವನ್ನು ದರ್ಶನ್ ಕುಟುಂಬ ಪಡೆದುಕೊಂಡಿತ್ತು. ಇದೀಗ ಕೆಂಗೇರಿಯ ಬಿಜಿಎಸ್ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದಾರೆ. ಬೆನ್ನು ನೋವು ಕಾರಣದಿಂದ ಮಧ್ಯಂತರ ಜಾಮೀನಿನ ಮೇಲೆ ದರ್ಶನ್ ಹೊರಬಂದಿದ್ದು, ಆಸ್ಪತ್ರೆಯಲ್ಲಿ ಎಷ್ಟು ದಿನ ಚಿಕಿತ್ಸೆ ಮುಂದುವರಿಯಲಿದೆ ಎಂಬುದು ಇನ್ನಷ್ಟೇ ತಿಳಿಯಲಿದೆ. ಸದ್ಯದ ಮಾಹಿತಿ ಪ್ರಕಾರ ಎರಡು ದಿನ ಆಸ್ಪತ್ರೆಯಲ್ಲಿರಲಿದ್ದಾರೆ.

ಮೊದಲಿಗೆ ದರ್ಶನ್ ಅವರ ಬಿಪಿ, ಶುಗುರ್, ಇಸಿಜಿ ಸ್ಕ್ಯಾನಿಂಗ್ ಸೇರಿದಂತೆ ಕೆಲ ಟೆಸ್ಟ್​ಗಳನ್ನು ಮಾಡುತ್ತಿದ್ದಾರೆ. ನಂತರ, ಬೆನ್ನು ನೋವಿಗೆ ಸಂಬಂಧಿಸಿದ ಫಿಸಿಯೋಥೆರಪಿ ಮಾಡಲಾಗುತ್ತದೆ. ಎಲ್ಲಾ ಟೆಸ್ಟ್​ಗಳ ರಿಪೋರ್ಟ್​ ಬಂದ ಬಳಿಕ ದರ್ಶನ್ ಅವರಿಗೆ ಶಸ್ತ್ರ ಚಿಕಿತ್ಸೆ ಮಾಡಬೇಕೋ? ಬೇಡವೋ ಎಂಬುದರ ಬಗ್ಗೆ ಗೊತ್ತಾಗುತ್ತದೆ.

ಇದನ್ನೂ ಓದಿ:ರಿಷಬ್​ ಶೆಟ್ಟಿ ಸಮರ್ಪಣೆ, ರೂಪಾಂತರ, ಪರಿಪೂರ್ಣತೆ, ಬದ್ಧತೆಗೆ ಸಾಟಿಯಿಲ್ಲ: 'ಜೈ ಹನುಮಾನ್'​​ ನಿರ್ದೇಶಕನಿಂದ ಪ್ರಶಂಸೆ

ದರ್ಶನ್​ ಆಗಮನ ಹಿನ್ನೆಲೆ ಕೆಂಗೇರಿಯ ಆಸ್ಪತ್ರೆ ಮುಂಭಾಗದಲ್ಲಿ ದರ್ಶನ್ ಅಭಿಮಾನಿಗಳು ಬಂದು ಸೇರಿದ್ದರು. ಆಸ್ಪತ್ರೆಯ ಬಳಿ ಡಿ ಬಾಸ್, ಡಿ ಬಾಸ್ ಅನ್ನೋ ಘೋಷನೆಗಳನ್ನು ಕೂಗಿದ್ದಾರೆ.

ಇದನ್ನೂ ಓದಿ:ಯಶ್​​ ಕನ್ನಡ ಪ್ರೇಮ ಮತ್ತೊಮ್ಮೆ ಸಾಬೀತು: ಮಕ್ಕಳೊಂದಿಗೆ ಮಗುವಾದ ರಾಕಿ ಭಾಯ್​; ಮುದ್ದಾದ ವಿಡಿಯೋಗಳಿಲ್ಲಿವೆ​

ಬಿಜಿಎಸ್ ಆಸ್ಪತ್ರೆಯ ನ್ಯೂರೋ ಸರ್ಜನ್ ನವೀನ್ ಅವರು ದರ್ಶನ್​ ಹೆಲ್ತ್​ ಬಗ್ಗೆ ಹೇಳಿಕೆ ನೀಡಿದ್ದು, ದರ್ಶನ್ ಅಡ್ಮಿಟ್ ಆಗಿದ್ದಾರೆ. ಬೆನ್ನು ನೋವಿನ ಹಿನ್ನೆಲೆ ದಾಖಲಾಗಿದ್ದಾರೆ. ಕಾಲಿನ ನೋವು ಸಹ ಹೆಚ್ಚಾಗಿದೆ. ಎಲ್ಲಾ ರೀತಿಯ ಟೆಸ್ಟ್ ಮಾಡುತ್ತಿದ್ದೇವೆ. ಸದ್ಯ ಎಡಗಾಲಿನ ನೋವು ಹೆಚ್ಚಿದೆ. ಬೆನ್ನು ನೋವಿಗೆ ಪರೀಕ್ಷೆ ನಡೆಸುತ್ತಿದ್ದೇವೆ. 48 ಗಂಟೆಗಳಲ್ಲಿ ಎಲ್ಲಾ ವರದಿಗಳು ಬರಲಿವೆ. ಎಡಗಾಲು ಸ್ವರ್ಶ ಕಡಿಮೆ ಆಗಿದೆ. ಕಾಲು ನೋವಿನ ಜೊತೆಗೆ ಎಡಗಾಲಿನ ಸೆಳೆತವೂ ಇದೆ. ರಕ್ತಪರೀಕ್ಷೆ, ಎಂಆರ್​ಐ ಸ್ಕ್ಯಾನಿಂಗ್ ಸೇರಿ ಕೆಲ ಪರೀಕ್ಷೆಗಳನ್ನು ನಡೆಸಲಾಗತ್ತದೆ. ಸದ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮುಂದಿನ ಎರಡು ದಿನಗಳ ಕಾಲ ದರ್ಶನ್ ಆಸ್ಪತ್ರೆಯಲ್ಲೇ ಇರಲಿದ್ದಾರೆ ಎಂದು ತಿಳಿಸಿದರು.

ABOUT THE AUTHOR

...view details