ಕರ್ನಾಟಕ

karnataka

ETV Bharat / state

'ಕಾವೇರಿ ನೀರು ಅಥವಾ ಕೊಳವೆ ಬಾವಿ ನೀರು ಬಳಸಿ ರೈನ್ ಡ್ಯಾನ್ಸ್ ಆಯೋಜಿಸಿದ್ದರೆ ಕ್ರಮ' - Water Board Alert - WATER BOARD ALERT

ಕಾವೇರಿ ನೀರು ಅಥವಾ ಕೊಳವೆ ಬಾವಿ ನೀರು ಬಳಸಿ ರೈನ್ ಡ್ಯಾನ್ಸ್ ಆಯೋಜಿಸಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಎಚ್ಚರಿಕೆ ನೀಡಿದ್ದಾರೆ.

WATER BOARD ALERT
WATER BOARD ALERT

By ETV Bharat Karnataka Team

Published : Mar 25, 2024, 8:40 PM IST

ಬೆಂಗಳೂರು:ಜಲಮಂಡಳಿಯ ಎಚ್ಚರಿಕೆಯ ನಡುವೆಯೂ ಹೋಳಿ ಹಬ್ಬದ ನಿಮಿತ್ತ ಕಾವೇರಿ ಹಾಗೂ ಕೊಳವೆಬಾವಿ ನೀರನ್ನು ಬಳಸಿ ರೈನ್ ಡ್ಯಾನ್ಸ್ ಆಯೋಜಿಸಿದ್ದರೆ ಅಂತಹ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಲಮಂಡಳಿ ಅಧ್ಯಕ್ಷ ಡಾ.ರಾಮ್ ಪ್ರಸಾತ್ ಮನೋಹರ್ ಹೇಳಿದ್ದಾರೆ.

ಜಲಮಂಡಳಿ ಅಧ್ಯಕ್ಷ ಡಾ.ರಾಮ್ ಪ್ರಸಾತ್ ಮನೋಹರ್ ಪರಿಶೀಲನೆ

ಹೋಳಿ ಹಬ್ಬ ನಮ್ಮ ಧಾರ್ಮಿಕ ಹಾಗೂ ಸಾಂಸ್ಕೃತಿಕ ಹಬ್ಬವಾಗಿದ್ದು, ಹಬ್ಬ ಆಚರಿಸುವುದು ತಪ್ಪಲ್ಲ. ಬದಲಿಗೆ ಹಬ್ಬವನ್ನು ವಾಣಿಜ್ಯೀಕರಣ ಮಾಡಿ, ರೈನ್ ಡ್ಯಾನ್ಸ್, ಪೂಲ್ ಡ್ಯಾನ್ಸ್ ಆಯೋಜಿಸಿ ನೀರು ಪೋಲು ಮಾಡುವುದು ಸರಿಯಲ್ಲ. ಎರಡು ಹೋಟೆಲ್​​ನವರು ರೈನ್ ಡ್ಯಾನ್ಸ್ ಆಯೋಜನೆಗೆ ಸಿದ್ಧತೆ ನಡೆಸಿದ್ದರು. ಆದರೆ ನಮ್ಮ ಅಧಿಕಾರಿಗಳು ಭೇಟಿ ನೀಡಿದ ಬಳಿಕ ರೈನ್ ಡ್ಯಾನ್ಸ್ ಆಯೋಜನೆ ಕೈಬಿಟ್ಟಿದ್ದಾರೆ ಎಂದಿದ್ದಾರೆ.

ನೀರಿನ ಅಭಾವದ ನಡುವೆಯೂ ಕಾರು ಸೇರಿದಂತೆ ಇನ್ನಿತರ ವಾಹನಗಳನ್ನು ಸ್ವಚ್ಛಗೊಳಿಸುವ ಸಲುವಾಗಿ ಕುಡಿಯುವ ನೀರು ಬಳಸಿದ ಸಂಬಂಧ ಇದುವರೆಗೂ 22 ದೂರು ದಾಖಲಾಗಿದ್ದು, 1.10 ಲಕ್ಷ ರೂಪಾಯಿ ದಂಡ ಸಂಗ್ರಹಿಸಲಾಗಿದೆ ಎಂದು ಹೇಳಿದ್ದಾರೆ. ಆಗ್ನೇಯ ಭಾಗದಲ್ಲಿ ಅತಿಹೆಚ್ಚು ದೂರುಗಳು ಕೇಳಿ ಬರುತ್ತಿದ್ದು, ದೂರು ದಾಖಲಿಸುವುದರ ಜೊತೆಗೆ ಮಿತವಾಗಿ ನೀರು ಬಳಸುವಂತೆ ಎಚ್ಚರಿಕೆ ಹಾಗೂ ಮನವಿ ಮಾಡಲಾಗುತ್ತಿದೆ ಎಂದು ರಾಮ್ ಪ್ರಸಾತ್ ತಿಳಿಸಿದ್ದಾರೆ.

ಜಲಮಂಡಳಿ ಅಧ್ಯಕ್ಷ ಡಾ.ರಾಮ್ ಪ್ರಸಾತ್ ಮನೋಹರ್ ಪರಿಶೀಲನೆ

ಇದನ್ನೂ ಓದಿ:ಕಾರ್ ವಾಶ್, ಗಾರ್ಡನ್‌ಗೆ ನೀರು ಬಳಸಿದ್ದಕ್ಕೆ ಜಲಮಂಡಳಿಯಿಂದ 22 ಮನೆಗಳಿಗೆ ದಂಡ - 22 Houses Fined By Water Board

ಇನ್ನು ನಗರದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಈ ನಿಟ್ಟಿನಲ್ಲಿ ನೀರಿನ ಬಳಕೆಯನ್ನು ಮಿತವಾಗಿಸಬೇಕು ಹಾಗೂ ಅನಗತ್ಯವಾಗಿ ಕುಡಿಯುವ ನೀರಿನ ಪೋಲು ಮಾಡಬಾರದು ಎಂದು ಜಲಮಂಡಳಿ ಆದೇಶಿಸಿದೆ. ಈ ಆದೇಶವನ್ನು ನಗರದ ಹಲವು ಭಾಗಗಳಲ್ಲಿ ಉಲ್ಲಂಘಿಸುತ್ತಿರುವುದು ಕಂಡು ಬಂದಿದೆ. ಈ ಹಿನ್ನೆಲೆ 22 ಮನೆಗಳಿಗೆ ದಂಡ ವಿಧಿಸಲಾಗಿದೆ.

ಜಲಮಂಡಳಿ ಅಧ್ಯಕ್ಷ ಡಾ.ರಾಮ್ ಪ್ರಸಾತ್ ಮನೋಹರ್ ಪರಿಶೀಲನೆ

ಕಾವೇರಿ ನೀರು ಮತ್ತು ಬೋರ್‌ವೆಲ್ ನೀರನ್ನು ಕುಡಿಯುವ ಉದ್ದೇಶ ಹೊರತುಪಡಿಸಿ ಅನ್ಯ ಉದ್ದೇಶಕ್ಕೆ ಬಳಸಿದ ಹಿನ್ನೆಲೆ ಜಲಮಂಡಳಿಯ ಅಧಿಕಾರಿಗಳು ಒಟ್ಟು 22 ಕುಟುಂಬಗಳಿಗೆ ದಂಡ ವಿಧಿಸಿದ್ದಾರೆ. ನಗರದ ಹಲವು ಭಾಗಗಳಲ್ಲಿ ಕುಡಿಯುವ ನೀರನ್ನು ಬಳಸಿಕೊಂಡು ವಾಹನಗಳನ್ನು ತೊಳೆಯುವುದು, ಅಂಗಳವನ್ನು ತೊಳೆಯುವ ಮೂಲಕ ಅನಗತ್ಯವಾಗಿ ಪೋಲು ಮಾಡಲಾಗುತ್ತಿದೆ. ಕಾರು, ಬೈಕ್‌ಗಳನ್ನು ತೊಳೆದರೆ ದಂಡ ವಿಧಿಸುವುದಾಗಿ ಈ ಹಿಂದೆಯೇ ಜಲಮಂಡಳಿ ಸೂಚನೆ ನೀಡಿತ್ತು. ಆದರೂ ನಿಯಮ ಉಲ್ಲಂಘಿಸಿ ವಾಹನ ತೊಳೆಯುತ್ತಿದ್ದವರಿಗೆ ಜಲಮಂಡಳಿಯು 5000 ರೂಪಾಯಿ ದಂಡ ವಿಧಿಸಿದೆ.

ಜಲಮಂಡಳಿ ಅಧ್ಯಕ್ಷ ಡಾ.ರಾಮ್ ಪ್ರಸಾತ್ ಮನೋಹರ್ ಪರಿಶೀಲನೆ

ಕಾವೇರಿ ನೀರು ವ್ಯರ್ಥ ಮಾಡದಂತೆ ಜಲಮಂಡಳಿ ಈಗಾಗಲೇ ಸೂಚನೆ ನೀಡಿತ್ತು. ಕಾರ್ ತೊಳೆಯುವುದು, ಹೂ ತೋಟಕ್ಕೆ ಕಾವೇರಿ ನೀರು ಬಳಸದಂತೆ ಸೂಚಿಸಿದೆ. ಇದರ ಹೊರತಾಗಿಯೂ ಕಾರ್ ವಾಶ್‌ಗೆ ಕಾವೇರಿ ನೀರು ಬಳಕೆ ಮಾಡಿದ್ದಕ್ಕೆ ದಂಡ ವಿಧಿಸಲಾಗಿದೆ. ಸದಾಶಿವನಗರದಲ್ಲಿ ಕಾವೇರಿ ನೀರಿನಿಂದ ಕಾರ್ ವಾಶ್ ಮಾಡುತ್ತಿದ್ದ ಮಹಿಳೆಗೆ ಸ್ಥಳದಲ್ಲಿಯೇ 5,000 ರೂಪಾಯಿ ದಂಡ ವಿಧಿಸಲಾಗಿದೆ. ಮಹಾದೇವಪುರ, ಡಾಲರ್ಸ್ ಕಾಲೋನಿಯಲ್ಲಿ ಇಬ್ಬರಿಗೆ ಸ್ಥಳದಲ್ಲೇ ಜಲಮಂಡಳಿಯ ಅಧಿಕಾರಿಗಳು ದಂಡ ವಿಧಿಸಿದ್ದಾರೆ.

ABOUT THE AUTHOR

...view details