ಕಲಬುರಗಿ:ಜಿಲ್ಲೆಯ ದೇವಸ್ಥಾನವೊಂದರ ನಂದಿ ಮೂರ್ತಿಗಳನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಮುತ್ತುಗಾ ಗ್ರಾಮದ ನಿವಾಸಿ ಬಸವರಾಜ್ ಕೋರೆ ಬಂಧಿತ ಆರೋಪಿ.
ಸಂಪೂರ್ಣ ಮಾಹಿತಿ:ಶಹಬಾದ ತಾಲೂಕಿನ ಮುತ್ತಗಾ ಗ್ರಾಮದಲ್ಲಿ ಕಂಠಿ ಬಸವೇಶ್ವರ ದೇವಸ್ಥಾನವಿದೆ. ಈ ದೇಗುಲದ ಟ್ರಸ್ಟ್‌ನ ಅಧ್ಯಕ್ಷರನ್ನು ಬಸವರಾಜ್ ಕೋರೆ ಕೆಳಗಿಸಿದ್ದ. ಬಳಿಕ ತಾನೇ ಅಧ್ಯಕ್ಷನಾಗಿ ಟ್ರಸ್ಟ್ ಅಡಿಯಲ್ಲಿರುವ 20 ಎಕರೆ ಜಮೀನಿನ ಲಾಭ ಪಡೆಯುವ ದುರುದ್ದೇಶದಿಂದ ಹಲವು ಬಾರಿ ಬಸವೇಶ್ವರ ದೇವರ ಮೂರ್ತಿ ವಿರೂಪಗೊಳಿಸಿದ್ದಾನೆ. ಫೆ.7ರಂದು ದೇವಸ್ಥಾನದ ಬೀಗ ಒಡೆದು ಎರಡು ನಂದಿ ಮೂರ್ತಿಗಳನ್ನು ಕದ್ದೊಯ್ದಿದ್ದಾನೆ.
ನಂದಿ ಮೂರ್ತಿ ಕದ್ದು ಗ್ರಾಮದಲ್ಲಿ ಜಾತಿ ಜಾತಿಗಳ ಮಧ್ಯೆ ಅಶಾಂತಿ ಉಂಟು ಮಾಡಿದ್ದಲ್ಲದೆ, ಪೊಲೀಸರಿಗೆ ಪದೇ ಪದೆ ಕರೆ ಮಾಡಿ ಆರೋಪಿಗಳನ್ನು ಪತ್ತೆ ಮಾಡಬೇಕು. ಇಲ್ಲದಿದ್ದರೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆಯನ್ನೂ ನೀಡಿದ್ದನಂತೆ. ಆರೋಪಿಗಳ ಪತ್ತೆಗೆ ಮೂರು ಪ್ರತ್ಯೇಕ ತಂಡ ರಚಿಸಿ ಕಾರ್ಯಾಚರಣೆಗಿಳಿದ ಪೊಲೀಸರು, ದೇವಸ್ಥಾನದಲ್ಲಿ ರಹಸ್ಯವಾಗಿ ಸಿಸಿ ಕ್ಯಾಮೆರಾ ಫಿಕ್ಸ್ ಮಾಡಿದ್ದರು. ಇದರ ಅರಿವಿಲ್ಲದ ಬಸವರಾಜ್ ತಾನು ಕದ್ದಿದ್ದ ನಂದಿ ಮೂರ್ತಿಗಳನ್ನು ದೇವಾಲಯದಲ್ಲಿ ವಾಪಸ್ ತಂದಿಟ್ಟಿರುವ ದೃಶ್ಯ ಸೆರೆಯಾಗಿದೆ. ಇದರ ಆಧಾರದ ಮೇಲೆ ಬಸವರಾಜ್ನನ್ನು ವಶಕ್ಕೆ ಪಡೆದು ತನಿಖೆ ನಡೆಸಿದಾಗ ತನ್ನ ತಪ್ಪೊಪ್ಪಿಕೊಂಡಿದ್ದಾನೆ ಎಂದು ಎಸ್ಪಿ ಅಕ್ಷಯ್ ಹಾಕೆ ಮಾಹಿತಿ ನೀಡಿದರು.
ಇದನ್ನೂ ಓದಿ:ನಕಲಿ ಪಿಸ್ತೂಲ್ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್: ಯುವಕರ ವಿರುದ್ಧ ಪ್ರಕರಣ - Fake pistol