ಗಣಪತಿ ದೇವಸ್ಥಾನ (ETV Bharat) ಕಾರವಾರ (ಉತ್ತರ ಕನ್ನಡ) :ತಾಲೂಕಿನ ಅಮದಳ್ಳಿ ವೀರ ಗಣಪತಿ ದೇವಸ್ಥಾನಕ್ಕೆ ನುಗ್ಗಿದ ಮೂವರು ಕಳ್ಳರು ದೇವರ ಮುಖವಾಡ ಕದ್ದು ಪರಾರಿಯಾದ ಘಟನೆ ಸೋಮವಾರ ಬೆಳಕಿಗೆ ಬಂದಿದೆ.
ಅಮದಳ್ಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66ಕ್ಕೆ ಹೊಂದಿಕೊಂಡಿರುವ ವೀರ ಗಣಪತಿ ದೇವಸ್ಥಾನಕ್ಕೆ ಭಾನುವಾರ ತಡರಾತ್ರಿ ದೇವಸ್ಥಾನದ ಹಿಂಬದಿಯ ಮದುವೆ ಹಾಲ್ ಗೇಟ್ ಮುರಿದು ಮೂವರು ಮುಸುಕುದಾರಿ ಖದೀಮರು ಒಳ ನುಗ್ಗಿದ್ದಾರೆ. ಬಳಿಕ ಗರ್ಭಗುಡಿ ಸಮೀಪದ ಸಿಸಿ ಕ್ಯಾಮರಾದ ಸಂಪರ್ಕ ಕಟ್ ಮಾಡಿ, ಗರ್ಭಗುಡಿ ಲಾಕ್ ಒಡೆದು ದೇವರಿಗೆ ಅಳವಡಿಸಿದ್ದ 5 ಕೆಜಿ ತೂಕದ ಬೆಳ್ಳಿ ಮುಖವಾಡವನ್ನ ಹೊತ್ತೊಯ್ದಿದ್ದಾರೆ.
ದೇವರ ಬೆಳ್ಳಿ ಮುಖವಾಡ ಕದ್ದಿರುವುದು (ETV Bharat) ಆದರೆ, ಇನ್ನೊಂದು ಸಿಸಿ ಕ್ಯಾಮರಾದಲ್ಲಿ ಮೂವರು ಖದೀಮರ ಕೃತ್ಯ ಸೆರೆಯಾಗಿದೆ. 1984ರಲ್ಲಿ ವೀರ ಗಣಪತಿಗೆ ಮಾಡಿಸಿದ್ದ ಮುಖವಾಡ ಇದಾಗಿತ್ತು. ಆದರೆ ಉಳಿದಂತೆ ದೇವರ ಕಾಣಿಕೆ ಹುಂಡಿ, ಬಾಕಿ ಎಲ್ಲ ವಸ್ತುಗಳು ಯಥಾಸ್ಥಿತಿಯಲ್ಲಿ ಇರುವುದಾಗಿ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಇನ್ನು ಘಟನೆ ಸಂಬಂಧ ಸ್ಥಳಕ್ಕೆ ತೆರಳಿದ ಪೊಲೀಸರು, ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಪರಿಶೀಲನೆ ನಡೆಸಿದೆ. ಕಳೆದ ಕೆಲ ದಿನಗಳಿಂದ ಪ್ಯ್ಲಾನ್ ಮಾಡಿ ಈ ಕೃತ್ಯ ಎಸಗಲಾಗಿದೆ. ಅಲ್ಲದೇ ಸೆಕ್ಯೂರಿಟ್ ಗಾರ್ಡ್ ಇದ್ದರೂ ಮುಂಭಾಗದಲ್ಲಿ ಮಲಗಿದ್ದ ಎಂಬುದು ತಿಳಿದು ಬಂದಿದೆ. ಆತನಿಗೂ ತಿಳಿಯದಂತೆ ಈ ಕೃತ್ಯ ಎಸಗಲಾಗಿದೆ ಎಂದು ಕಮೀಟಿಯ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ :ದೇವಸ್ಥಾನದಲ್ಲಿ ಕಳ್ಳತನವೆಸಗಿ ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ - BENGALURU CRIME