ಕರ್ನಾಟಕ

karnataka

ETV Bharat / state

ಯಲಹಂಕ: ಗೆಳತಿಗೆ ಪದೇ ಪದೇ ಮೆಸೇಜ್, ವಿಡಿಯೋ ಕಾಲ್ ಮಾಡಿದ್ದಕ್ಕೆ ಬಿತ್ತು ಎರಡು ಹೆಣ - YALAHANKA DOUBLE MURDER CASE

ಯಲಹಂಕ ಜೋಡಿ ಕೊಲೆ​ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ACCUSED
ಕೊಲೆ ಆರೋಪಿಗಳು (ETV Bharat)

By ETV Bharat Karnataka Team

Published : Dec 12, 2024, 5:05 PM IST

ಯಲಹಂಕ(ಬೆಂಗಳೂರು): ಗೆಳತಿಗೆ ಪದೇ ಪದೇ ಮೆಸೇಜ್ ಹಾಗೂ ವಿಡಿಯೋ ಕರೆ ಮಾಡಿ ಕಿರುಕುಳ ನೀಡುತ್ತಿದ್ದುದಕ್ಕೆ ಇಬ್ಬರು ಸೆಕ್ಯೂರಿಟಿ ಗಾರ್ಡ್​ಗಳನ್ನು ಕೊಲೆಗೈದು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ.

ಯಲಹಂಕ ನ್ಯೂಟೌನ್​ನ ಬಯಲು ಬಸವೇಶ್ವರ ದೇವಸ್ಥಾನದ ಸಮೀಪದ ಫ್ಯಾಕ್ಟರಿಯಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗೋಷ್ಠಿ ನಡೆಸಿದ ಈಶಾನ್ಯ ವಿಭಾಗ ಡಿಸಿಪಿ ಸಜೀತ್ ವಿ.ಜೆ. ಮಾಹಿತಿ ನೀಡಿದರು.

ಈಶಾನ್ಯ ವಿಭಾಗದ ಡಿಸಿಪಿ ಸಜೀತ್ ವಿ.ಜೆ. ಮಾಹಿತಿ (ETV Bharat)

''ದಿನಾಂಕ ಡಿ.9ರಂದು ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಜೋಡಿ ಕೊಲೆ ನಡೆದಿತ್ತು. ಬಿಕ್ರಂ ಸಿಂಗ್‌ ಮತ್ತು ಚೋಟೋ ತೂರಿ ಕೊಲೆಗೀಡಾಗಿದ್ದರು. ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದೇವೆ. ಆರೋಪಿಗಳ ಗೆಳತಿಗೆ ಇವರು ಮೆಸೇಜ್​ ಹಾಗೂ ವಿಡಿಯೋ ಕಾಲ್ ಮಾಡುತ್ತಿದ್ದರಿಂದ ಮನನೊಂದು ಇವರಿಬ್ಬರನ್ನು ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಮೊದಲ ಆರೋಪಿಯ ಗೆಳತಿಗೆ ಕೊಲೆಯಾದ ಬಿಕ್ರಂ ಸಿಂಗ್ ಆಗಾಗ ಮೆಸೇಜ್ ಹಾಗೂ ವಿಡಿಯೋ ಕಾಲ್ ಮಾಡುತ್ತಿದ್ದ. ಇವರೆಲ್ಲರೂ ಪರಿಚಯಸ್ಥರು ಹಾಗೂ ನೇಪಾಳದವರು. ರಕೂನ್ ಸಂಸ್ಥೆಯಲ್ಲಿ ಬಿಕ್ರಂ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡ್ತಿದ್ದ. ಅಲ್ಲಿಯೇ ಹಳೆಯ ಕಟ್ಟಡದಲ್ಲಿ ತನ್ನ ವಸತಿ ಪಡೆದುಕೊಂಡಿದ್ದ. ಇನ್ನೊಬ್ಬ ಚೋಟೋ ತೂರಿ ಎಂಬಾತ ವೆಂಕಟೇಶ್ವರ ಟೆಕ್ಸ್​​ಟೈಲ್ಸ್​ನಲ್ಲಿ ಡ್ರೈವಿಂಗ್​ ಕೆಲಸ ಮಾಡುತ್ತಿದ್ದ'' ಎಂದು ಹೇಳಿದರು.

''ಅಂದು ಭಾನುವಾರವಾದ್ದರಿಂದ ಬಿಕ್ರಂ ಸಿಂಗ್ ತನ್ನ ಸ್ನೇಹಿತ​ ಚೋಟೋ ತೂರಿಯೊಂದಿಗೆ ರಾತ್ರಿ ಚಿಕನ್ ತರಿಸಿ ಅಡುಗೆ ಮಾಡಿಕೊಂಡು ಊಟ ಮಾಡುವಾಗ ಆರೋಪಿಗಳಿಬ್ಬರು ಗಲಾಟೆ ಮಾಡಿ ಮಾರಣಾಂತಿಕವಾಗಿ ಹಲ್ಲೆಗೈದಿದ್ದಾರೆ. ಪ್ರಕರಣದಲ್ಲಿ ಇನ್ನೊಬ್ಬ ಮೃತವ್ಯಕ್ತಿ ಚೋಟೋ ತೂರಿ ಅಮಾಯಕ. ಈ ಪ್ರಕರಣಕ್ಕೂ ಅವನಿಗೂ ಯಾವುದೇ ಸಂಬಂಧವಿಲ್ಲ. ಆದರೆ ಬಿಕ್ರಂ ಸಿಂಗ್ ಮೇಲಿನ ಹಲ್ಲೆ ತಡೆದು ಜಗಳ ಬಿಡಿಸಲು ಮುಂದಾಗಿದ್ದಾನೆ. ಚೋಟೋ ತೂರಿ ಬದುಕಿದ್ದರೆ ಪೊಲೀಸರಿಗೆ ವಿಷಯ ತಿಳಿಸುತ್ತಾನೆ ಮತ್ತು ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗುತ್ತಾನೆ ಎಂದು ಆತನ ಮೇಲೂ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ'' ಎಂದರು.

ಇದನ್ನೂ ಓದಿ:ಯಲಹಂಕ: ಕಾರ್ಖಾನೆ ಕಾವಲಿಗಿದ್ದ ಇಬ್ಬರು ಸೆಕ್ಯೂರಿಟಿ ಗಾರ್ಡ್​​ಗಳ ಕೊಲೆ

ABOUT THE AUTHOR

...view details