ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ: ಐಷಾರಾಮಿ ಬದುಕಿನ ಆಸೆ ?; ಬೈಕ್ ಕಳ್ಳತನಕ್ಕೆ ಇಳಿದಿದ್ದ ಆರೋಪಿಗಳ ಬಂಧನ, 12 ಬೈಕ್​ ಪೊಲೀಸರ ವಶ - Accused arrested for bike theft

ಹುಬ್ಬಳ್ಳಿ - ಧಾರವಾಡದಲ್ಲಿ ಬೈಕ್​​​ ಕಳ್ಳತನದಲ್ಲಿ ತೊಡಗಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿ, ಅವರಿಂದ ಸುಮಾರು 12 ಬೈಕ್​ಗಳನ್ನು ವಶಪಡಿಸಿಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ACCUSED
ಬೈಕ್ ಕಳವು ಆರೋಪಿಗಳು (ETV Bharat)

By ETV Bharat Karnataka Team

Published : Sep 27, 2024, 8:32 PM IST

ಹುಬ್ಬಳ್ಳಿ :ಹು-ಧಾ ಮಹಾನಗರದಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಇಬ್ಬರು ಮಹಿಳೆಯರು ಸೇರಿ ಐವರನ್ನು ಬಂಧಿಸಿದ್ದು, 12 ವಿವಿಧ ಬೈಕ್​ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ನಗರದ ವಿದ್ಯಾನಗರದ ಪೊಲೀಸ್ ಠಾಣೆಯಲ್ಲಿ ಈ ಕುರಿತು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಪ್ರಕರಣದಲ್ಲಿ ಕೇಶ್ವಾಪೂರದ ರೇಷ್ಮಾ ಗುಡಗೇರಿ, ಗದಗ ರಸ್ತೆಯ ಆಸ್ಮಾಬಾನು, ಬಾಗವಾನ್ ಉರ್ಪ್ ಮುಲ್ಲಾ, ರಾಮನಗರದ ರವಿ ಉರ್ಪ್ ನೀಲೆಶ್ ಬಣಸೋಡೆ, ಗದಗ ರೋಡ್​ನ ಮುಬಾರಕ್ ಬಾಗವಾನ್, ಹುಬ್ಬಳ್ಳಿ ಕೆ ಕೆ ನಗರದ ದಸ್ತಗೀರ್ ಧಾರವಾಡ ಎಂಬವರನ್ನು ಬಂಧಿಸಲಾಗಿದೆ ಎಂದರು.

ಹು-ಧಾ ಪೊಲೀಸ್ ಕಮಿಷನರ್​ ಎನ್ ಶಶಿಕುಮಾರ್ (ETV Bharat)

ಆರೋಪಿಗಳ ವಿರುದ್ಧ ಜಿಲ್ಲೆಯಲ್ಲದೇ ವಿವಿಧ ಜಿಲ್ಲೆಗಳಲ್ಲಿ ವಿವಿಧ ಪ್ರಕರಣಗಳು ದಾಖಲಾಗಿವೆ ಎಂದು ತಿಳಿದು ಬಂದಿದ್ದು, ಸದ್ಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ 7, ಕೇಶ್ವಾಪೂರ ಠಾಣೆಯಲ್ಲಿ 3, ಹುಬ್ಬಳ್ಳಿ ಉಪನಗರ ಹಾಗೂ ಧಾರವಾಡ ಶಹರ ಪೊಲೀಸ್ ಠಾಣೆಯಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ ಎಂದು ಹೇಳಿದರು.

ಆರೋಪಿತರಿಂದ ಸುಮಾರು 6 ಲಕ್ಷ ರೂ. ಮೌಲ್ಯದ 10 ವಿವಿಧ ಕಂಪನಿಯ ಸ್ಕೂಟಿಗಳು ಹಾಗೂ 2 ಬೈಕ್ ವಶಪಡಿಸಿಕೊಳ್ಳಲಾಗಿದೆ. ನಗರದಲ್ಲಿ ದಾಖಲಾದ ಪ್ರಕರಣಗಳನ್ನು ಪತ್ತೆ ಮಾಡುವ ಸಂದರ್ಭದಲ್ಲಿ ಸಿಸಿಟಿವಿ ಕ್ಯಾಮರಾ ಪರಿಶೀಲನೆ ಮಾಡುವ ಸಂದರ್ಭದಲ್ಲಿ ಮಹಿಳೆಯರು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಮಹಿಳೆಯ ಮೂಲಕ ಆರೋಪಿತರು ಬೈಕ್ ಕಳ್ಳತನ ಮಾಡುತ್ತಿದ್ದರು ಎಂಬುದು ಬೆಳಕಿಗೆ ಬಂದಿದೆ ಎಂದು ಅವರು ಮಾಹಿತಿ ನೀಡಿದರು.

ಆರೋಪಿಗಳ ಹಿನ್ನೆಲೆ : ಆರೋಪಿಗಳಾದ ರೇಷ್ಮಾ ಮತ್ತು ರವಿ ಟೀಮ್ ಕಟ್ಟಿಕೊಂಡು ಬೈಕ್ ಕದಿಯುತ್ತಿದ್ದರು. ರೈಲ್ವೆ ಗುತ್ತಿಗೆ ನೌಕರೆ ಆಸ್ಮಾ, ಮುಬಾರಕ್, ದಸ್ತಗಿರಿ ಆರೋಪಿಗಳಿಗೆ ಸಾಥ್ ನೀಡುತ್ತಿದ್ದರು. ರೇಷ್ಮಾಗೆ ಇಪ್ತಿಯಾಜ್ ಎನ್ನುವ ರೈಲ್ವೆ ನೌಕರನ ಜೊತೆಗೆ ಮದುವೆಯಾಗಿತ್ತು. ಹೀಗಿದ್ದರೂ ರವಿ ಎನ್ನುವ ಬಾಯ್ ಫ್ರೆಂಡ್ ಜೊತೆಗೆ ಸುತ್ತಾಡುತ್ತಿದ್ದಳು. ರವಿ ಜೊತೆಗೆ ಸೇರಿ ಸ್ಕೂಟಿ ಮತ್ತು ಬೈಕ್​ನ್ನ ರೇಷ್ಮಾ ಕಳ್ಳತನ ಮಾಡುತ್ತಿದ್ದಳು. ರೇಷ್ಮಾ ಮತ್ತು ರವಿ ಕದ್ದ ಸ್ಕೂಟಿಗಳನ್ನು ಮಾರಾಟ ಮಾಡಲು ಆಸ್ಮಾ, ಮುಬಾರಕ್, ದಸ್ತಗಿರಿ ಸಹಾಯ ಮಾಡುತ್ತಿದ್ದರು.

ಆರೋಪಿಗಳು ರೈಲ್ವೆ ನೌಕರರಾಗಿದ್ದರೂ ಇಂತಹ ಕೃತ್ಯದಲ್ಲಿ ತೊಡಗಿದ್ದರು. ವಿಲಾಸಿ ಜೀವನ ನಡೆಸಲು ಇಂತಹ ಕೃತ್ಯ ಎಸಗಿರಬಹುದು ಎಂಬ ಶಂಕೆ ಇದೆ‌. ಅಲ್ಲದೇ ಇನ್ನೂ ಬೇರೆ ಕಡೆ ಕಳ್ಳತನ ಮಾಡಿರುವ ಕುರಿತಂತೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್‌ ಕಮಿಷನರ್ ಎನ್. ಶಶಿಕುಮಾರ್ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಡಿಸಿಪಿ ಮಹಾನಿಂಗ ನಂದಗಾವಿ, ಎಸಿಪಿ ಶಿವಪ್ರಕಾಶ್ ನಾಯಕ್, ವಿದ್ಯಾನಗರ ಠಾಣೆಯ ಪೊಲೀಸ್ ಇನ್​​​ಸ್ಪೆಕ್ಟರ್​​ ಜಯಂತ ಗೌಳಿ, ಪಿಎಸ್ಐ ಶ್ರೀಮಂತ ಹುಣಸಿಕಟ್ಟಿ ಸೇರಿದಂತೆ ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳು ಇದ್ದರು.

ಇದನ್ನೂ ಓದಿ :ಹಾವೇರಿ: ಹಗಲು ಹೊತ್ತಿನಲ್ಲಿ ಬೈಕ್​ ಕಳ್ಳತನ ಮಾಡುತ್ತಿದ್ದ ಇಬ್ಬರು ಖದೀಮರ ಬಂಧನ

ABOUT THE AUTHOR

...view details