ಬೆಂಗಳೂರು :ಕೆಎಸ್ಆರ್ಟಿಸಿ ಬಸ್ ಹಾಗೂ ಟೋಯಿಂಗ್ ವಾಹನದ ನಡುವೆ ಅಪಘಾತ ಸಂಭವಿಸಿರುವ ಘಟನೆ ತಡರಾತ್ರಿ ತುಮಕೂರು ರಸ್ತೆಯ 8ನೇ ಮೈಲಿ ಬಳಿ ನಡೆದಿದೆ.
ಟೋಯಿಂಗ್ ವಾಹನದ ಟೈರ್ ಕಳಚಿಕೊಂಡ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಬೆಂಗಳೂರಿನಿಂದ ಹೊರಟಿದ್ದ ಕೆಎಸ್ಆರ್ಟಿಸಿ ಬಸ್‌ಗೆ ಢಿಕ್ಕಿಯಾಗಿದೆ. ಘಟನೆ ಸಂದರ್ಭದಲ್ಲಿ ಬಸ್‌ನಲ್ಲಿ ಹೆಚ್ಚು ಪ್ರಯಾಣಿಕರು ಇಲ್ಲದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಪೀಣ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮೆಜೆಸ್ಟಿಕ್ ಬಸ್ ನಿಲ್ದಾಣದ ಬಳಿ ಯುವಕನ ಹೈಡ್ರಾಮ (ETV Bharat) ಮೆಜೆಸ್ಟಿಕ್ ಬಸ್ ನಿಲ್ದಾಣದ ಬಳಿ ಯುವಕನ ಹೈಡ್ರಾಮ : ಅರೆಬೆತ್ತಲೆಯಾಗಿ ನಡುರಸ್ತೆಯಲ್ಲಿ ನಿಂತ ಯುವಕನೊಬ್ಬ ವಾಹನ ಸವಾರರಿಗೆ ಕಿರಿಕಿರಿಯುಂಟುಮಾಡಿದ ಘಟನೆ ತಡರಾತ್ರಿ ಮೆಜೆಸ್ಟಿಕ್ ಬಸ್ ನಿಲ್ದಾಣದ ಬಳಿ ನಡೆದಿದೆ. ರಸ್ತೆಯಲ್ಲಿ ಬರುವ ವಾಹನಗಳಿಗೆ ಅಡ್ಡ ಹಾಕಿ, ಅವಾಚ್ಯವಾಗಿ ನಿಂದಿಸುವ ಮೂಲಕ ಕೆಲಕಾಲ ಹೈಡ್ರಾಮ ಸೃಷ್ಟಿಸಿದ್ದಾನೆ. ಯುವಕನ ಆಟಾಟೋಪಕ್ಕೆ ಸುಸ್ತಾದ ಕೆಲ ವಾಹನ ಸವಾರರು ಕೊನೆಗೆ ಆತನನ್ನು ಆಟೋದಲ್ಲಿ ಕಳಿಸಿದರು.
ಇದನ್ನೂ ಓದಿ :ಅಪಘಾತ: ರಾಮನಗರದಲ್ಲಿ ಟಿಪ್ಪರ್ ಡಿಕ್ಕಿಯಾಗಿ ಬೈಕ್ನಲ್ಲಿದ್ದ ಮೂವರ ಸಾವು, ಮಂಗಳೂರಲ್ಲಿ ಇಬ್ಬರು ಮೃತ - Accident In Ramanagara