ಕರ್ನಾಟಕ

karnataka

ETV Bharat / state

ಉದ್ಯೋಗದ ಆಸೆ ತೋರಿಸಿ ಯವತಿಗೆ ಆನ್​ಲೈನ್​ನಲ್ಲಿ ಲಕ್ಷಾಂತರ ರೂ ಮೋಸ: ಹಣಕ್ಕಾಗಿ ಕಣ್ಣೀರಿಡುತ್ತಿರುವ ಸಂತ್ರಸ್ತೆ - Cyber Crime - CYBER CRIME

ಉದ್ಯೋಗದ ಆಸೆ ತೋರಿಸಿ ಯವತಿಗೆ ಆನ್​ಲೈನ್​ನಲ್ಲಿ ಲಕ್ಷಾಂತರ ರೂ ಮೋಸ ಮಾಡಿರುವುದು ಬೆಳಕಿಗೆ ಬಂದಿದ್ದು, ಈಗ ಹಣಕ್ಕಾಗಿ ಸಂತ್ರಸ್ತೆ ಕಣ್ಣೀರಿಡುತ್ತಿದ್ದಾರೆ.

YOUNG WOMAN  CHEATED OF MILLIONS  ONLINE JOB  SHIVAMOGGA
ಹಣಕ್ಕಾಗಿ ಕಣ್ಣಿರಿಡುತ್ತಿರುವ ಸಂತ್ರಸ್ತೆ (ಕೃಪೆ: ETV Bharat)

By ETV Bharat Karnataka Team

Published : May 15, 2024, 6:47 PM IST

ಶಿವಮೊಗ್ಗ:ಎಲ್ಲಿವರೆಗೆ ಈ ಮೋಸ ಮಾಡೋರು ಇರ್ತಾರೋ ಅಲ್ಲಿವರೆಗೆ ಮೋಸ ಹೋಗುವವರು ಕೂಡ ಇದ್ದೆ ಇರ್ತಾರೆ ಎಂಬ ಮಾತಿದೆ. ಆದರೆ, ಸಾವಿರಾರು ಜನರು ನಿತ್ಯ ಮೋಸ ಹೋಗುತ್ತಲೇ ಇದ್ದು, ಈ ಬಗ್ಗೆ ಪೊಲೀಸ್ ಇಲಾಖೆ ಜಾಗೃತಿ ಮೂಡಿಸುತ್ತಿದ್ದರೂ ಮತ್ತೆ ಮತ್ತೆ ಆನ್​ಲೈನ್ ಮೋಸ ಹೋಗಿ ಹಣ ಕಳೆದುಕೊಳ್ಳುತ್ತಲೇ ಇದ್ದಾರೆ. ಇಲ್ಲೊಬ್ಬಳು ಯುವತಿ ಕೂಡ ಆನ್​ಲೈನ್ ಮೋಸಕ್ಕೆ ಬಲಿಯಾಗಿದ್ದಾಳೆ.

ಟೆಲಿಗ್ರಾಂ ಆ್ಯಪ್ ಮೂಲಕ ಬಂದ ಉದ್ಯೋಗದ ಭರವಸೆ ಅರಸಿಕೊಂಡು ಹೋಗಿ ಲಕ್ಷಾಂತರ ರೂ. ಕಳೆದುಕೊಂಡಿದ್ದಾಳೆ. ಉದ್ಯೋಗ ಅರಸಿ ಆನ್​ಲೈನ್ ಮೊರೆ ಹೋದ ಯುವತಿಯೊಬ್ಬಳು ಬರೋಬ್ಬರಿ 11,82,208 ರೂ. ಕಳೆದುಕೊಂಡಿದ್ದಾಳೆ. ಇದೆನಪ್ಪಾ ಹೀಗೆ ಅಂತಾ ಹುಬ್ಬೇರಿಸಬೇಡಿ. ಇದು ಆಶ್ಚರ್ಯವಾದರೂ ಸತ್ಯ.

ಡ್ರೀಮ್ ಹೊಟೆಲ್ ಗ್ರೂಪ್ ಸಂಸ್ಥೆಯನ್ನು ಪ್ರಮೋಷನ್ ಮಾಡಲು ತಿಳಿಸಿದ್ದ ಆಗಂತುಕರು, ಶಿವಮೊಗ್ಗದ ಈ ಯುವತಿಯಿಂದ ಲಕ್ಷಾಂತರ ಹಣವನ್ನು ಪೀಕಿ ಮರೆಯಾಗಿದ್ದಾರೆ. ಅಂದಹಾಗೆ, ಆನ್​ಲೈನ್​ನಲ್ಲಿ ಮೋಸ ಹೋದ ಯುವತಿಯ ಹೆಸರು ದಿವ್ಯಾ ಎಂದು ತಿಳಿದು ಬಂದಿದೆ. ಶಿವಮೊಗ್ಗದ ಗಾಂಧಿ ಬಜಾರ್​ನ ತುಳಜಾ ಭವಾನಿ ರಸ್ತೆಯ ನಿವಾಸಿಯಾಗಿದ್ದು, ಈ ಕುರಿತು ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣಾ ದಾಖಲಾಗಿದೆ.

ನಡೆದಿದ್ದೇನು?:ಇಂಜಿನಿಯರಿಂಗ್ ಮುಗಿಸಿರುವ ದಿವ್ಯಾ ಅನೇಕ ಕಡೆ ಉದ್ಯೋಗಕ್ಕಾಗಿ ಪ್ರಯತ್ನಪಟ್ಟರು ಅದು ಯಶಸ್ಸು ನೀಡಿರಲಿಲ್ಲ. ಉದ್ಯೋಗಕ್ಕಾಗಿ ಆನ್​ಲೈನ್ ನಲ್ಲಿ ಕೆಲಸ ಸರ್ಚ್ ಮಾಡುತ್ತಿದ್ದ ಇವರಿಗೆ ಟೆಲಿಗ್ರಾಂನಲ್ಲಿ ಸ್ವಾತಿ ಮಿಶ್ರಾ ಎಂಬವರಿಂದ ಸಂದೇಶ ಬಂದಿದ್ದು, ಬಳಿಕ ಅರಬೆಲ್ಲಾ ಎಂಬ ಅಕೌಂಟ್​ನಿಂದ ಡ್ರೀಮ್ ಹೊಟೆಲ್ ಗ್ರೂಪ್​ನ ಪ್ರಮೋಟರ್ ಆಗಿ ಕರ್ತವ್ಯ ನಿರ್ವಹಿಸಲು ಹೇಳಿದ್ದರಂತೆ. ವೆಬ್​ಸೈಟ್​ನ ಅಡ್ರೆಸ್ ಹಾಗೂ ಅದರ ಐಡಿ, ಪಾಸ್​ವರ್ಡ್ ನೀಡಿದ್ದು, ಅದರಲ್ಲಿನ ಹೊಟೆಲ್​ನ್ನು ಪ್ರಮೋಟ್ ಮಾಡಿ ಎಂದಿದ್ದರು.

ಇನ್ನು ಮಾಡಿದ ಕೆಲಸಕ್ಕೆ 700 ರೂಪಾಯಿ ಕೂಡ ನೀಡಿದ್ದರಂತೆ. ಬಳಿಕ ಇವರಿಗೆ ಕಸ್ಟಮರ್ ಸರ್ವಿಸ್ ಫಾರ್ ಯೂ ಎಂಬ ಟೆಲಿಗ್ರಾಂ ಐಡಿಯಿಂದ 10 ಸಾವಿರ ರೂ. ಹಣ ಹಾಕಲು ತಿಳಿಸಿದ್ದರಿಂದ ಹಣ ಹಾಕಿದ್ದರಂತೆ. ಆ ಬಳಿಕ ಆಗಿದ್ದೇ ಬೇರೆ. ನಿಮಗೆ ಕೆಲಸ ಬೇಕು ಎಂದಾದರೆ ಹಣ ಹಾಕಿ ಎಂಬ ಸಂದೇಶ ಬಂದಿದೆ. ಈ ವೇಳೆ 15 ಸಾವಿರ, 40 ಸಾವಿರ, 80 ಸಾವಿರ 1 ಲಕ್ಷ ರೂ. ಹಣ ಹೀಗೆ ಬರೋಬ್ಬರಿ 11,57,208 ರೂ. ಹಣ ಪೀಕಿದ್ದು, ಆ ಬಳಿಕವಷ್ಟೇ ಈ ಯುವತಿಗೆ ತಾನು ಮೋಸ ಹೋಗಿರುವ ಬಗ್ಗೆ ಅರಿವಾಗಿದೆ.

ತನ್ನ ಖಾತೆಯಲ್ಲಿರುವ 20,86,000 ಹಣ ವಿತ್ ಡ್ರಾ ಮಾಡಲು ಕೂಡ ಶೇ. 30 ರಷ್ಟು ಹಣ ಟ್ಯಾಕ್ಸ್ ಕಟ್ಟಲು ಹೇಳಿದಾಗ ದಿವ್ಯ ತನ್ನ ಸ್ನೇಹಿತರಿಗೆ ತಿಳಿಸಿದ್ದಾರೆ. ಈ ವೇಳೆ, ಮೋಸ ಮಾಡಿರುವ ಬಗ್ಗೆ ಕುಟುಂಬಸ್ಥರಿಗೆ ತಿಳಿದಿದೆ. ಬರೋಬ್ಬರಿ 11,82,208 ರೂ. ಹಣ ಪೀಕಿದ್ದು, ಆ ಬಳಿಕವಷ್ಟೇ ಈ ಯುವತಿಗೆ ತಾನು ಮೋಸ ಹೋಗಿರುವ ಬಗ್ಗೆ ಅರಿವಾಗಿದೆ.

ಸಂತ್ರಸ್ತೆ ಹೇಳಿದ್ದಿಷ್ಟು:ಅನ್ ಲೈನ್ ಮೋಸದ ಕುರಿತು ಮಾತನಾಡಿದ ದಿವ್ಯಾ ಅವರು ತಾನು ಅನೇಕ ಕಡೆ ಉದ್ಯೋಗಕ್ಕಾಗಿ ಹುಡುಕಾಟ ನಡೆಸಿದೆ. ಅನೇಕ ಕಡೆ ತನ್ನ ರೆಸ್ಯೂಮ್ ಅನ್ನು ಕಳುಹಿಸಿದೆ. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ನಂತರ ಟೆಲಿಗ್ರಾಂನಲ್ಲಿ ಡ್ರಿಮ್ ಹೋಟೆಲ್ ಗ್ರೂಪ್​ನಿಂದ ಸಂದೇಶ ಬಂದಿತು. ತಮ್ಮ ಹೋಟೆಲ್ ಅನ್ನು ಪ್ರಮೋಟ್ ಮಾಡಿದರೆ ಕಮಿಷನ್ ರೂಪದಲ್ಲಿ ಹಣ ನೀಡಲಾಗುವುದು ಎಂದು ತಿಳಿಸಿದ್ದಾರೆ. ಮೊದಲು ಹಣ ಬಂದಿದೆ. ನಂತರ ಕಮಿಷನ್ ನೀಡಬೇಕಾದರೆ ತಮಗೆ ಇಷ್ಟು ಹಣ ಮೊದಲೇ ಪಾವತಿ ಮಾಡಬೇಕು ಎಂದು ತಿಳಿಸಿದಾಗ ಹಣ ಪಾವತಿ ಮಾಡಿದೆ. ನಂತರ ಗ್ರೂಪ್​ನಲ್ಲಿ ಇರುವವರು ನನ್ನನ್ನು ನಂಬಿಸಿ‌ ಮೋಸ ಮಾಡಿದ್ದಾರೆ. ನಾನು ತನ್ನ ಮುಂದಿನ ಭವಿಷ್ಯಕ್ಕಾಗಿ ಸಂಗ್ರಹಿಸಿಟ್ಟಿದ್ದ ಹಣ ಹಾಗೂ ಸ್ನೇಹಿತರ ಬಳಿ ಸಾಲ ಮಾಡಿ ಹಣ ವರ್ಗಾವಣೆ ಮಾಡಿದ್ದೇನೆ. ದಯವಿಟ್ಟು ನನ್ನ ಹಣ ವಾಪಸ್ ಕೊಡಿಸಿ ಎಂದು ಅಂಗಲಾಚಿದ್ದಾರೆ.

ಇನ್ನೂ ಮೋಸ ಕುರಿತು ಮಾತನಾಡಿದ ದಿವ್ಯಾ ತಾಯಿ ಶಶಿಕಲಾ ಅವರು, ನನ್ನ ಮಗಳು ಇಂಜಿನಿಯರಿಂಗ್ ಓದಿದರೂ ಸಹ ಕೆಲಸ ಸಿಕ್ಕಿಲ್ಲ. ಇದರಿಂದ ಮನೆಯಲ್ಲೆ ಕುಳಿತು ಆನ್​ಲೈನ್​ನಲ್ಲಿ ಹಣ ಗಳಿಸಬಹುದು ಎಂಬ ಆಸೆ ತೋರಿಸಿ, ತಮ್ಮ‌ ಖಾತೆಗೆ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಬಡವರಾದ ನಾವು ಹಣ ಕಳೆದುಕೊಂಡಿದ್ದೇವೆ. ನಮಗೆ ನ್ಯಾಯ ಒದಗಿಸಿ ಎಂದು‌ ವಿನಂತಿ ಮಾಡಿಕೊಂಡಿದ್ದಾರೆ.

ಓದಿ:ಪ್ರಜ್ವಲ್​ ಅಶ್ಲೀಲ ವಿಡಿಯೋ ಪ್ರಕರಣ: ಹಾಸನದಲ್ಲಿ 18 ಕಡೆ ಎಸ್​ಐಟಿ ಶೋಧ - PRAJWAL REVANNA CASE

ABOUT THE AUTHOR

...view details