ಕರ್ನಾಟಕ

karnataka

ETV Bharat / state

48 ಮೊಟ್ಟೆಗಳಿಗೆ 49 ರೂಪಾಯಿ; ಆಫರ್​ನಲ್ಲಿ ಖರೀದಿಗೆ ಮುಂದಾದ ಮಹಿಳೆ ಕಳೆದುಕೊಂಡಿದ್ದು 48 ಸಾವಿರ ರೂ.! - ಆನ್​ಲೈನ್ ಶಾಪಿಂಗ್

ಆನ್​ಲೈನ್ ಶಾಪಿಂಗ್ ಮಾಡುವಾಗ ಹುಷಾರಾಗಿರಿ. ಏಕೆಂದ್ರೆ ಸೈಬರ್ ಕಳ್ಳರು, ನಿಮ್ಮ ಅಕೌಂಟ್​ನಿಂದ ಹಣ ಎಗರಸ್ತಾರೆ. ಈ ರೀತಿಯ ಪ್ರಕರಣವೊಂದು ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Etv Bharat
Etv Bharat

By ETV Bharat Karnataka Team

Published : Feb 25, 2024, 5:59 PM IST

Updated : Feb 25, 2024, 7:26 PM IST

ಬೆಂಗಳೂರು: ಇಂದಿನ ಹೈಟೆಕ್ ಯುಗದಲ್ಲಿ ಎಲ್ಲವೂ ಆನ್ ಲೈನ್ ಮಯ. ಗೃಹೋಯೋಪಯೋಗಿ ವಸ್ತುಗಳಿಂದ ಹಿಡಿದು ದಿನಸಿ ವಸ್ತುಗಳವರೆಗೆ ಎಲ್ಲವನ್ನೂ ಆನ್ ಲೈನ್​​ನಲ್ಲೇ ಖರೀದಿ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಆರ್ಡರ್ ಮಾಡಿದಷ್ಟೇ ವೇಗವಾಗಿ ವಸ್ತುಗಳನ್ನು ಮನೆಗೆ ತಲುಪಿಸಲಾಗುತ್ತಿದೆ. ಜೊತೆಗೆ ಶಾಪಿಂಗ್ ಸಂಸ್ಥೆಗಳು ಗ್ರಾಹಕರಿಗೆ ಆಕರ್ಷಕ ರೀತಿಯ ಆಫರ್​​ಗಳನ್ನು ನೀಡಿ ತಮ್ಮತ್ತು ಸೆಳೆಯುವುದು ಕಾಮನ್ ಆಗಿದೆ. ಕೆಲವೊಮ್ಮೆ ಆಫರ್​ಗಳ ಹೆಸರಲ್ಲಿ ಸೈಬರ್ ಖದೀಮರು, ಗ್ರಾಹಕರಿಗೆ ಮೊಬೈಲ್​ ಮೆಸೇಜ್ ಕಳಿಸಿ ಮೋಸ ಮಾಡುತ್ತಿರುವ ಪ್ರಕರಣಗಳು ಕೂಡ ಆಗಾಗ ಬೆಳಕಿಗೆ ಬರುತ್ತಿವೆ. ಇದೇ ರೀತಿಯ ಪ್ರಕರಣ ಇದೀಗ ಬೆಂಗಳೂರಲ್ಲಿ ನಡೆದಿದೆ.

49 ರೂಪಾಯಿಗೆ 48 ಮೊಟ್ಟೆ ಸಿಗಲಿದೆ ಎಂದು ಬಂದ ಆಫರ್ ಮೆಸೇಜ್ ಲಿಂಕ್​ ಒತ್ತಿ ಗ್ರಾಹಕರೊಬ್ಬರು 48,199 ರೂ. ಕಳೆದುಕೊಂಡಿರುವ ಪ್ರಕರಣ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ವಸಂತನಗರದ ನಿವಾಸಿಯಾಗಿರುವ ಮಹಿಳೆಯೊಬ್ಬರ ಇ-ಮೇಲ್​ಗೆ ಇದೇ ತಿಂಗಳು ಫೆ.17ರಂದು ಆನ್​ಲೈನ್ ಶಾಪಿಂಗ್ ಕಂಪನಿಯೊಂದರಿಂದ ಸಂದೇಶ ಬಂದಿತ್ತು. ಮಹಿಳೆ ಕ್ಲಿಕ್ ಮಾಡಿ ನೋಡಿದಾಗ 48 ಮೊಟ್ಟೆಗಳಿಗೆ ಕೇವಲ 49 ರೂಪಾಯಿ ಆಫರ್ ಇರುವುದನ್ನ ಕಂಡು ಬುಕ್ ಮಾಡಲು ಮುಂದಾಗಿದ್ದರು. ಡೆಲಿವರಿ ವಿಳಾಸ ಹಾಗೂ ಮೊಬೈಲ್ ನಂಬರ್ ಸೇರಿ ಎಲ್ಲಾ ವಿವರಗಳನ್ನ ಭರ್ತಿ ಮಾಡಿ ಕೊನೆಗೆ ಫೇಮೆಂಟ್ ಆಪ್ಶನ್​​ನಲ್ಲಿ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸುವಂತೆ ಸೂಚಿಸಿತ್ತು. ಹೀಗಾಗಿ ಹಣ ಪಾವತಿಸಲು ಕ್ರೆಡಿಟ್ ಕಾರ್ಡ್​​ನ ಡಿಟೇಲ್ಸ್ ಭರ್ತಿ ಮಾಡಿ ಬಳಿಕ ಮೊಬೈಲ್​​ಗೆ ಬಂದ ಒಟಿಪಿ ನಂಬರ್ ನಮೂದಿಸಿ 49 ರೂಪಾಯಿ ಪಾವತಿಸಿದ್ದರು. ಇದಾದ ಕೆಲ ಕ್ಷಣಗಳಲ್ಲಿ ಮಹಿಳೆಯ ಅಕೌಂಟ್​​ನಿಂದ 48,199 ರೂಪಾಯಿ ಕಡಿತಗೊಂಡಿರುವ ಸಂದೇಶ ಮೊಬೈಲ್​​ಗೆ ಬಂದಿತ್ತು.

ಮಹಿಳೆ ಆಶ್ಚರ್ಯಗೊಂಡು ಪರಿಶೀಲಿಸಿದಾಗ 48,199 ಸಾವಿರ ರೂಪಾಯಿ ಹಣ ಕಡಿತವಾಗಿರುವುದು ದೃಢವಾಗಿತ್ತು. ವಂಚನೆಗೊಳಗಾಗಿರುವುದು ಗೊತ್ತಾಗಿ ತಕ್ಷಣವೇ ಬ್ಯಾಂಕ್​​ಗೆ ಮಾಹಿತಿ ನೀಡಿ ಕ್ರೆಡಿಟ್ ಕಾರ್ಡ್ ಅಕೌಂಟ್ ಬ್ಲಾಕ್ ಮಾಡಿಸಿದ್ದರು. ಈ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ದಾಖಲಿಸಿದ್ದಾರೆ. ಪೊಲೀಸರು ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಪದೇ ಪದೆ ನಿಯಮ‌ ಉಲ್ಲಂಘಿಸುವ ವಾಹನ ಸವಾರರೇ ಎಚ್ಚರ: ವಾಹನ ನಾಶಪಡಿಸಲು ಸರ್ಕಾರಕ್ಕೆ ಪ್ರಸ್ತಾವನೆ

Last Updated : Feb 25, 2024, 7:26 PM IST

ABOUT THE AUTHOR

...view details