ಬೆಂಗಳೂರು: ಅಪರಿಚಿತ ವಾಹನದಿಂದ ಸಂಭವಿಸಿದ ಹಿಟ್ ಆ್ಯಂಡ್ ರನ್‌ಗೆ ದ್ವಿಚಕ್ರ ವಾಹನ ಸವಾರ ಯುವಕ ಬಲಿಯಾದ ಘಟನೆ ಸೋಮವಾರ ರಾತ್ರಿ ಕನ್ನಿಂಗ್ ಹ್ಯಾಂ ರಸ್ತೆಯಲ್ಲಿ ನಡೆದಿದೆ.
ಮೃತನನ್ನು ಆಯುಷ್ ಅಪ್ಪಯ್ಯ (21) ಎಂದು ಗುರುತಿಸಲಾಗಿದೆ. ರಾತ್ರಿ 10:30ರ ಸುಮಾರಿಗೆ ಕಲ್ಪನಾ ಜಂಕ್ಷನ್ ಕಡೆಯಿಂದ ಚಂದ್ರಿಕಾ ಜಂಕ್ಷನ್ ಕಡೆಗೆ ಸಾಗುತ್ತಿದ್ದ ಆಯುಷ್, ವಕ್ಫ್ ಬೋರ್ಡ್ ಬಳಿ ಬರುತ್ತಿದ್ದಂತೆ ಆತನ ಸ್ಕೂಟರ್‌ಗೆ ಅಪರಿಚಿತ ವಾಹನವೊಂದು ಡಿಕ್ಕಿಯಾಗಿದೆ. ಅಪಘಾತದ ಬಳಿಕ ಆರೋಪಿ ವಾಹನ ಚಾಲಕ ಪರಾರಿಯಾಗಿದ್ದಾನೆ. ಅಪಘಾತದಿಂದ ನೆಲಕ್ಕೆ ಬಿದ್ದ ಆಯುಷ್ ತಲೆಗೆ ಗಂಭೀರ ಪೆಟ್ಟಾಗಿತ್ತು.