ಬೆಂಗಳೂರು:ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ವ್ಯಕ್ತಿಯನ್ನು ರಾತ್ರೋರಾತ್ರಿ ಮನೆಗೆ ಕರೆಯಿಸಿಕೊಂಡು ಆತನನ್ನ ಹಣಕ್ಕೆ ಒತ್ತಾಯಿಸಿ, ನಾಲ್ವರು ಹಲ್ಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಸಂಬಂಧ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಮಮೂರ್ತಿನಗರ ಎನ್ಐಆರ್ ಲೇಔಟ್ ಯುವಕನೊಬ್ಬ ನೀಡಿದ ದೂರಿನ ಮೇರೆಗೆ ಮಡಿವಾಳ ಪೊಲೀಸರು ನಾಲ್ವರ ವಿರುದ್ಧ ಹಲ್ಲೆ ಪ್ರಕರಣ ದಾಖಲಿಕೊಂಡು, ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ. ಹಲ್ಲೆಗೊಳಗಾಗಿರುವ ಯುವಕ ಸಲಿಂಗಕಾಮಿಯಾಗಿದ್ದು, ಡೇಟಿಂಗ್ ಆ್ಯಪ್ವೊಂದರಲ್ಲಿ ನೋಂದಾಯಿಸಿದ್ದ. ಇದೇ ಆ್ಯಪ್ನಲ್ಲಿ ಯುವಕನೊಬ್ಬನನ್ನು ಪರಿಚಯಿಸಿಕೊಂಡಿದ್ದ. ಫೋನ್ ನಂಬರ್ ಪಡೆದು ತಾವರೆಕೆರೆಯಲ್ಲಿರುವ ಮನೆಗೆ ಬರುವಂತೆ ಜನವರಿ 10 ರಂದು ಅಪರಿಚಿತ ಆರೋಪಿಯೊಬ್ಬ ಆಹ್ವಾನಿಸಿದ್ದ.