ಧಾರವಾಡ: ವ್ಯಕ್ತಿಯೊಬ್ಬರ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಕೋತಿಯೊಂದು ಚಿತೆ ಏರಿ ಕುಳಿತ ಅಚ್ಚರಿಯ ಘಟನೆ ಜಿಲ್ಲೆಯ ನವಲಗುಂದದಲ್ಲಿ ನಡೆದಿದೆ. ನವಲಗುಂದ ಪಟ್ಟಣದ ಬಸವೇಶ್ವರ ನಗರ ನಿವಾಸಿ ರವಿ ಮಾಗ್ರೆ (35) ಎಂಬವರು ಶುಕ್ರವಾರ ಹೃದಯಾಘಾತದಿಂದ ಮೃತಪಟ್ಟಿದ್ದರು. ಶುಕ್ರವಾರ ಮಧ್ಯಾಹ್ನ ಇವರ ಮೃತದೇಹದ ಅಂತ್ಯಸಂಸ್ಕಾರ ನಡೆಯುತ್ತಿದ್ದಾಗ ಈ ವಿಚಿತ್ರ ಘಟನೆ ನಡೆದಿದೆ.
ಅಂತ್ಯಕ್ರಿಯೆ ವೇಳೆ ಚಿತೆ ಏರಿ ಕುಳಿತ ಕೋತಿ! ವಿಡಿಯೋ - Monkey Funeral Pyre - MONKEY FUNERAL PYRE
ಹೃದಯಾಘಾತದಿಂದ ಮೃತಪಟ್ಟ ರವಿ ಮಾಗ್ರೆ ಎಂಬವರ ಅಂತ್ಯಕ್ರಿಯೆ ವೇಳೆ ಕೋತಿಯೊಂದು ಚಿತೆ ಏರಿ ಕುಳಿತ ಘಟನೆ ನವಲಗುಂದದಲ್ಲಿ ನಡೆದಿದೆ.
ಚಿತೆ ಏರಿ ಕುಳಿತ ಕೋತಿ (ETV Bharat)
Published : Jun 9, 2024, 10:33 AM IST
ಇನ್ನೇನು ಅಂತ್ಯಕ್ರಿಯೆ ನಡೆಯಬೇಕು ಎಂಬ ವೇಳೆಗೆ ಸ್ಥಳಕ್ಕೆ ಬಂದ ಕೋತಿ ಚಿತೆ ಏರಿತು. ಎಷ್ಟೇ ಓಡಿಸಿದರೂ ಕೋತಿ ಕೆಳಗೆ ಇಳಿಯಲಿಲ್ಲ. ಕೊನೆಗೆ ಮೃತದೇಹಕ್ಕೆ ಅಗ್ನಿ ಸ್ಪರ್ಶ ಮಾಡಿದಾಗ ಕೆಳಗಿಳಿದಿದೆ. ಮೃತದೇಹಕ್ಕೆ ಬೆಂಕಿ ಹಚ್ಚಿದ ನಂತರವೂ ಚಿತೆ ಸಮೀಪವೇ ಕುಳಿತುಕೊಂಡು ಮತ್ತಷ್ಟು ಕುತೂಹಲ ಕೆರಳಿಸಿತು. ಈ ಎಲ್ಲಾ ದೃಶ್ಯಗಳು ಸ್ಥಳದಲ್ಲಿದ್ದ ಜನರ ಮೊಬೈಲ್ನಲ್ಲಿ ಸೆರೆಯಾಗಿವೆ.