ಭಕ್ತರ ಮೊಬೈಲ್ ಕಿತ್ತುಕೊಂಡು ಮರವೇರಿದ ಕೋತಿ (Mysuru) ಮೈಸೂರು : ಚಾಮುಂಡಿ ಬೆಟ್ಟದ ಮೆಟ್ಟಿಲುಗಳ ತಪ್ಪಲಿನಲ್ಲಿ ಭಕ್ತರು ಚಾಮುಂಡಿ ವಿಗ್ರಹಕ್ಕೆ ಪೂಜೆ ಸಲ್ಲಿಸುವಾಗ ಕೋತಿಯೊಂದು ಅವರ ಪರ್ಸ್ ಕಸಿದುಕೊಂಡು ಮರವನ್ನೇರಿದ ಘಟನೆ ನಡೆದಿದೆ.
ಹಾಸನದಿಂದ ಚಾಮುಂಡಿ ತಾಯಿಯ ದರ್ಶನಕ್ಕೆ ಬಂದ ಭಕ್ತರು ಚಾಮುಂಡಿ ಬೆಟ್ಟಕ್ಕೆ ಮೆಟ್ಟಿಲುಗಳ ಮೂಲಕ ಹೋಗುವ ಸಂದರ್ಭದಲ್ಲಿ ಮೆಟ್ಟಿಲಿನ ಪಕ್ಕದಲ್ಲಿರುವ ಚಾಮುಂಡಿ ವಿಗ್ರಹಕ್ಕೆ ಪೂಜೆ ಸಲ್ಲಿಸಲು ಮುಂದಾಗಿದ್ದಾರೆ. ಆಗ ತಮ್ಮ ಕೈಯಲ್ಲಿದ್ದ ಪರ್ಸ್‌ನ್ನು ಪಕ್ಕಕ್ಕೆ ಇಟ್ಟಿದ್ದಾರೆ. ಇದನ್ನ ನೋಡಿದ ಕೋತಿಯೊಂದು ಪರ್ಸ್ ತೆಗೆದುಕೊಂಡು ಮರವನ್ನೇರಿದೆ. ಆ ಪರ್ಸ್ನಲ್ಲಿ ಮೊಬೈಲ್ ಇದ್ದಿದ್ದರಿಂದ ಭಕ್ತರು ಕೊಂಚ ಗಾಬರಿಯಾಗಿದ್ದಾರೆ.
ಮರದ ಮೇಲೆ ಏರಿದ ಕೋತಿ ನಂತರ ಪರ್ಸ್ನಲ್ಲಿ ಏನೇನಿದೆ ಎಂಬುದನ್ನ ನೋಡಿದೆ. ನಂತರ ಪರ್ಸ್ ಹಿಡಿದುಕೊಂಡು ಒಂದು ಕೊಂಬೆಯಿಂದ ಮತ್ತೊಂದು ಕೊಂಬೆಗೆ ಜಿಗಿಯುತ್ತಾ ಪರ್ಸ್ನಲ್ಲಿದ್ದ ವಸ್ತುಗಳನ್ನು ಕೆಳಗೆ ಬೀಳಿಸಿದೆ. ಆದರೆ ಮೊಬೈಲ್ ಮಾತ್ರ ಕೆಳಗೆ ಎಸೆದಿಲ್ಲ.
ಕೊನೆಗೆ ಭಕ್ತರು ಮರದ ಕೆಳಗೆ ನಿಂತು ಬಾಳೆಹಣ್ಣು ಆಸೆ ತೋರಿಸಿದ್ದಾರೆ. ಎಷ್ಟು ಕರೆದರೂ ಕೋತಿ ಮೊಬೈಲ್ ಕೊಟ್ಟಿಲ್ಲ. ಕೊನೆಗೆ ಮೊಬೈಲ್ ಅನ್ನು ಕೆಳಗೆ ಬೀಳಿಸಿದೆ. ಮೊಬೈಲ್ ಪಡೆದ ಭಕ್ತರು ಕೋತಿಗೆ ನಮಸ್ಕರಿಸಿದ್ದಾರೆ. ನೆಲಕ್ಕೆ ಬಿದ್ದದ್ದರಿಂದ ಮೊಬೈಲ್ಗೆ ಸ್ವಲ್ಪ ಡ್ಯಾಮೇಜ್ ಆಗಿತ್ತು. ಹೀಗಾಗಿ ಅದನ್ನು ರಿಪೇರಿಗೆ ತೆಗೆದುಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ :Watch... ಚಾಮುಂಡಿ ಬೆಟ್ಟದಲ್ಲಿ ಕೋತಿಗಳ ಹಾವಳಿ