ಕರ್ನಾಟಕ

karnataka

ETV Bharat / state

ಅಪರಿಚಿತೆಯ ಫೇಸ್​​ಬುಕ್​ ರಿಕ್ವೆಸ್ಟ್ ಸ್ವೀಕರಿಸಿದ ವ್ಯಕ್ತಿ ಕಳೆದುಕೊಂಡಿದ್ದು ₹54.64 ಲಕ್ಷ! - FACEBOOK FRIEND FRAUD

ಫೇಸ್​​ಬುಕ್​ನಲ್ಲಿ ಅಪರಿಚಿತೆಯ ಮಾತನ್ನು ನಂಬಿದ ಮಂಗಳೂರಿನ ವ್ಯಕ್ತಿಯೊಬ್ಬರು ಲಕ್ಷಾಂತರ ಹಣ ಕಳೆದುಕೊಂಡಿದ್ದಾರೆ. ಈ ಬಗ್ಗೆ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾರೆ.

fraud
ಸಂಗ್ರಹ ಚಿತ್ರ (ETV Bharat)

By ETV Bharat Karnataka Team

Published : Nov 28, 2024, 10:45 PM IST

ಮಂಗಳೂರು:ಫೇಸ್​​ಬುಕ್​ನಲ್ಲಿ ಅಪರಿಚಿತೆಯ ಫ್ರೆಂಡ್‌ ರಿಕ್ವೆಸ್ಟ್ ಸ್ವೀಕರಿಸಿದ ಪರಿಣಾಮ ಮಂಗಳೂರಿನ ವ್ಯಕ್ತಿಯೊಬ್ಬರು 54,64,000 ರೂ. ಹಣವನ್ನು ಕಳೆದುಕೊಂಡಿದ್ದಾರೆ. ವಂಚನೆಗೊಳಗಾದ ವ್ಯಕ್ತಿ ಇದೀಗ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮಂಗಳೂರಿನ ವ್ಯಕ್ತಿಯ ಫೇಸ್​​ಬುಕ್ ಖಾತೆಗೆ 2024ರ ಜುಲೈನಲ್ಲಿ ಆದಿತಿ ಕಪೂರ್ ಎಂಬ ಹೆಸರಿನ ಫ್ರೇಂಡ್ ರಿಕ್ವೆಸ್ಟ್ ಬಂದಿತ್ತು. ಇವರು ಫ್ರೇಂಡ್ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಿಕೊಂಡು ಮೆಸೆಂಜರ್​​ನಲ್ಲಿ ಕಾಂಟ್ಯಾಕ್ಟ್ ನಲ್ಲಿದ್ದರು. ಬಳಿಕ ಆರೋಪಿ ಆದಿತಿ ಕಪೂರ್ ಮೆಸೆಂಜರ್​​ನಲ್ಲಿ +1 (623) 273-9277 ನೇ ನಂಬರ್​​ ಕಳುಹಿಸಿ, ಇದು ನನ್ನ ಪರ್ಸನಲ್ ನಂಬರ್, ಇದರಲ್ಲಿ ವಾಟ್ಸ್​ಆ್ಯಪ್ ​ಇದ್ದು, ಕಾಲ್ ಮತ್ತು ಮೆಸೇಜ್ ಮಾಡಬಹುದು ಎಂದು ತಿಳಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಅದರಂತೆ, ಚಾಟ್ ಮಾಡುತ್ತಿದ್ದ ವೇಳೆ 'Century Global Gold Capital'' ಎಂಬ ಇನ್ವೆಸ್ಟಮೆಂಟ್ ಫ್ಲಾನ್ ಇದೆ. ತಾನು ಕೂಡ ಇದರಲ್ಲಿ ಹೂಡಿಕೆ ಮಾಡಿದ್ದೇನೆ. ಒಳ್ಳೆಯ ರಿಟರ್ನ್ಸ್ ಬರುತ್ತದೆ ಎಂದು ತಿಳಿಸಿದ್ದಾಳೆ. ನೀವು ಹೂಡಿಕೆ ಮಾಡಿದ ಹಣವನ್ನು ಕೆಲವೇ ದಿನಗಳಲ್ಲಿ ನೀವು ಹೂಡಿಕೆ ಮಾಡಿದ ಹಣವನ್ನು 3 ಪಟ್ಟು ಜಾಸ್ತಿ ಮಾಡಿಕೊಡುವುದಾಗಿ ನಂಬಿಸಿ, ಹಣವನ್ನು ಹೂಡಿಕೆ ಮಾಡುವಂತೆ ಪ್ರಚೋದಿಸಿದ್ದಾರೆ.

ಬಳಿಕ ಆದಿತಿ ಕಪೂರ್ ಜುಲೈ ತಿಂಗಳಿನಲ್ಲಿ 'm.goldstradeapp.com' ಎಂಬ ಲಿಂಕ್ ಅನ್ನು ಕಳುಹಿಸಿ, ವಾಟ್ಸ್​ಆ್ಯಪ್ ವಿಡಿಯೋ ಕಾಲ್ ಮಾಡಿ 'm.goldstradeapp.com'ನಲ್ಲಿ ರಿಜಿಸ್ಟ್ರೇಷನ್ ಮಾಡಲು ತಿಳಿಸಿದ್ದಾಳೆ. ಅದರಂತೆ ಇವರು ರಿಜಿಸ್ಟ್ರೇಷನ್ ಮಾಡಿದ್ದಾರೆ. ಈ ವ್ಯಕ್ತಿಗೆ ಸೈಟ್​​ನಿಂದ UID:68043 ನೀಡಿದ್ದು, ಬಳಿಕ ಆರೋಪಿ ಆದಿತಿ ಕಪೂರ್, ಆನ್​ಲೈನ್​ನಲ್ಲಿ ಸೈಟ್ ಹೋಗಿ ಹಣವನ್ನು ವರ್ಗಾವಣೆ ಮಾಡಲು ತಿಳಿಸಿದಂತೆ, ಇವರು ಬೇರೆ ಬೇರೆ ದಿನಾಂಕಗಳಂದು ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 54,64,000 ರೂ. ಹಣ ವರ್ಗಾವಣೆ ಮಾಡಿರುವುದಾಗಿ ವ್ಯಕ್ತಿಯು ದೂರಿನಲ್ಲಿ ತಿಳಿಸಿದ್ದಾರೆ.

ಆರೋಪಿಯು ಹಣವನ್ನು 3 ಪಟ್ಟು ಜಾಸ್ತಿ ಮಾಡಿಕೊಡುವುದಾಗಿ ನಂಬಿಸಿ, ಹಣ ಹಾಕಲು ಪ್ರೇರೇಪಿಸಿ, ಹಣವನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡ್ಡಿದ್ದಾಳೆ. ಹೂಡಿಕೆ ಮಾಡಿದ ಹಣವನ್ನು ವಾಪಸ್​​ ನೀಡದೇ ವಂಚನೆ ಮತ್ತು ಮೋಸ ಮಾಡಿದ್ದಾರೆ ಎಂದು ವಂಚನೆಗೊಗಾದ ವ್ಯಕ್ತಿ ದೂರು ನೀಡಿದ್ದಾರೆ.

ಇದನ್ನೂ ಓದಿ:ಸೈಬರ್​ ಕ್ರೈಂ ಅಪರಾಧಗಳಲ್ಲಿ ತೆಲಂಗಾಣ, ಕರ್ನಾಟಕ ಮತ್ತು ಮಹಾರಾಷ್ಟ್ರವೇ ಟಾಪ್​: ರಾಜ್ಯದಲ್ಲಿ ಅರೆಸ್ಟ್​ ಆಗಿದ್ದು 3, ಶಿಕ್ಷೆ ಶೂನ್ಯ!

ABOUT THE AUTHOR

...view details