ಕರ್ನಾಟಕ

karnataka

ETV Bharat / state

ರಾಯಚೂರು: ಮಗಳಿಗೆ ರಕ್ಷಣೆ ನೀಡಿದ ಪೋಷಕರು, ಸಂಬಂಧಿಕರ ಮೇಲೆ ಹಲ್ಲೆ - Attack On Parents - ATTACK ON PARENTS

ಯುವಕರ ಗ್ಯಾಂಗ್​ವೊಂದು ಯುವತಿಯ ಪೋಷಕರ ಮೇಲೆ ಹಲ್ಲೆ ನಡೆಸಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.

RAICHUR  YOUNG WOMAN  GANG OF YOUTHS
ಪೋಷಕರು, ತಂದೆ, ತಾಯಿ, ಸಬಂಧಿಕರ ಮೇಲೆ ಹಲ್ಲೆ

By ETV Bharat Karnataka Team

Published : Apr 21, 2024, 1:35 PM IST

ರಾಯಚೂರು: ಯುವಕನಿಂದ ಮಗಳಿಗೆ ರಕ್ಷಣೆ ನೀಡಿರುವುದಕ್ಕೆ ಹೆತ್ತವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಆರ್​.ಎಚ್ ಕ್ಯಾಂಪ್ 3ರಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆಯಿಂದಾಗಿ ಕುಟುಂಬಸ್ಥರು ಆತಂಕಕ್ಕೊಳಗಾಗಿದ್ದಾರೆ.

ಏಪ್ರಿಲ್ 14ರಂದು ಈ ಘಟನೆ ನಡೆದಿದೆ. ಏಪ್ರಿಲ್ 17ರಂದು ಆರೋಪಿಗಳ ವಿರುದ್ಧ ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹಲ್ಲೆಯಿಂದಾಗಿ ಯುವತಿ ತಂದೆಯ ಕಾಲು ಮುರಿದಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಯುವತಿ ತಂದೆ ಹೀರಾ ಮಹಾನ್, ತಾಯಿ, ಸಹೋದರ ಮತ್ತು ಸಂಬಂಧಿ ಮೇಲೆ ಹಲ್ಲೆ ನಡೆಸಲಾಗಿದೆ. ಅಷ್ಟೇ ಅಲ್ಲ, ಯುವತಿ ತಾಯಿಯ ಸೀರೆ ಎಳೆದಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ನಡೆದಿದ್ದೇನು?:ಹೀರಾ ಮಹಾನ್ ಅವರ ಮಗಳಿಗೆ ಪ್ರೀತಿ, ಪ್ರೇಮ ಅಂತ ಪ್ರಣವ್ ಎಂಬ ಯುವಕ ಸತಾಯಿಸುತ್ತಿದ್ದ. ಇದರಿಂದ ಬೇಸರಗೊಂಡ ಯುವತಿ ನಡೆದ ಘಟನೆಯನ್ನು ಪೋಷಕರಿಗೆ ತಿಳಿಸಿದ್ದರು. ವಿಷಯ ತಿಳಿದ ಪೋಷಕರು ಆಕೆಯನ್ನು ತಮ್ಮ ಸಂಬಂಧಿಕರ ಬಳಿ ಕಳುಹಿಸಿದ್ದರು. ಯುವತಿ ಸಂಪರ್ಕಕ್ಕೆ ಸಿಗದೇ ಇದ್ದಾಗ ಪ್ರಣವ್​ ಹೈಡ್ರಾಮಾ ಸೃಷ್ಟಿಸಿದ್ದಾನೆ.

"ಆಕೆಯನ್ನು ಏಕೆ ಬೇರೆಡೆ ಕಳುಹಿಸಿದ್ರಿ. ಮತ್ತೆ ಮನೆಗೆ ಕರೆತನ್ನಿ" ಅಂತ ಆರೋಪಿ ಪ್ರಣವ್ ಸೇರಿ ಮೂವರು ಯುವಕರು ಪೋಷಕರಿಗೆ ಕಿರುಕುಳ ನೀಡಿ, ದಾಳಿ ನಡೆಸಿದ್ದಾರೆ. ಬಳಿಕ ಮನೆಗೆ ಬಂದು ಆಕೆ ತಾಯಿ, ಸಹೋದರ, ಸಂಬಂಧಿ ಮೇಲೂ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಸದ್ಯ ಯುವತಿ ತಂದೆಗೆ ಸಿಂಧನೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಆರೋಪಿಗಳಾದ ಪ್ರಣವ್ ಬಿಸ್ವಾಸ್, ಪಿಯೂಸ್ ಬಿಸ್ವಾಸ್, ಮಧು ಬಿಸ್ವಾಸ್ ವಿರುದ್ಧ ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ:ಬೆಂಗಳೂರು: ಮದ್ಯದ ಅಮಲಿನಲ್ಲಿ ನಿಂದಿಸಿದ ಸ್ನೇಹಿತನ ಹತ್ಯೆ, ಐವರ ಬಂಧನ - Murder Case

ABOUT THE AUTHOR

...view details