ಕರ್ನಾಟಕ

karnataka

ETV Bharat / state

ಮೈಸೂರು: ವಿದ್ಯುತ್​​ ತಂತಿ ತುಳಿದು ರೈತ ಮೃತ: ಎರಡು ಜಾನುವಾರುಗಳು ಸಾವು - DEATH DUE TO ELECTRIC WIRE

ಮೈಸೂರಿನಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್​​ ತಂತಿ ತುಳಿದು ರೈತ ಹಾಗೂ 2 ರಾಸುಗಳು ಸಾವನ್ನಪ್ಪಿವೆ.

ವಿದ್ಯುತ್​​ ತಂತಿ ತುಳಿದು ರೈತ ಹಾಗೂ ಎರಡು ಜಾನುವಾರುಗಳು ಸಾವು
ವಿದ್ಯುತ್​​ ತಂತಿ ತುಳಿದು ರೈತ ಹಾಗೂ ಎರಡು ಜಾನುವಾರುಗಳು ಸಾವು (ETV Bharat (ಸಾಂದರ್ಭಿಕ ಚಿತ್ರ))

By ETV Bharat Karnataka Team

Published : Nov 15, 2024, 5:18 PM IST

ಮೈಸೂರು:ತುಂಡಾಗಿ ಬಿದಿದ್ದ ವಿದ್ಯುತ್​ ತಂತಿ ತುಳಿದು, ರೈತ ಹಾಗೂ ಎರಡು ಜಾನುವಾರುಗಳು ಸಾವನ್ನಪ್ಪಿರುವ ದಾರುಣ ಘಟನೆ ಹೆಚ್.ಡಿ. ಕೋಟೆ ತಾಲೂಕಿನ ಮೊತ್ತ ಗ್ರಾಮದಲ್ಲಿ ನಡೆದಿದೆ. ಮೃತಪಟ್ಟ ರೈತ ಹೆಚ್.ಡಿ. ಕೋಟೆ ತಾಲೂಕಿನ ಮೊತ್ತ ಗ್ರಾಮದ ಶೇಖರ್​ (45) ಎಂದು ಗುರುತಿಸಲಾಗಿದೆ.

ಗುರುವಾರ ಸಂಜೆ ತಮ್ಮ ಜಮೀನಲ್ಲಿ 4 ರಾಸುಗಳನ್ನು ಮೇಯಿಸಿಕೊಂಡು ಬರಲು ಶೇಖರ್​ ಹೋಗಿದ್ದರು. ವಾಪಸ್‌ ಮನೆಗೆ ಬರುವಾಗ ತುಂಡಾಗಿ ಬಿದ್ದಿದ್ದ ವಿದ್ಯುತ್​ ತಂತಿ ತುಳಿದು ಎರಡು ರಾಸು ಮತ್ತು ಶೇಖರ್‌ ಸಾವನ್ನಪ್ಪಿದ್ದಾರೆ. ಇನ್ನುಳಿದ ಎರಡು ರಾಸುಗಳು ಮನೆಗೆ ಬಂದಾಗ ಅನುಮಾನಗೊಂಡ ಶೇಖರ್‌ ಅವರ ಅಣ್ಣ ಮಹೇಶ್​​ ಜಮೀನಿನ ಬಳಿ ತೆರಳಿ ನೋಡಿದಾಗ ಸ್ಥಳದಲ್ಲಿ ಶೇಖರ್‌ ಹಾಗೂ ಎರಡು ರಾಸುಗಳು ಸಾವನ್ನಪ್ಪಿರುವುದನ್ನು ಕಂಡಿದ್ದಾರೆ.

ತಕ್ಷಣ ಬೆಸ್ಕಾಂ ಇಲಾಖೆಗೆ ಕರೆ ಮಾಡಿದಾಗ ಸ್ವೀಕರಿಸುವುದಿಲ್ಲ. ನಂತರ ಪೊಲೀಸ್ ಇಲಾಖೆಗೆ ಕರೆ ಮಾಡಿದಾಗ ಸ್ಥಳಕ್ಕೆ ಆಗಮಿಸಿದ ಅಂತರಸಂತೆ ಪೊಲೀಸರು ತುಂಡಾಗಿ ಬಿದಿದ್ದ ವಿದ್ಯುತ್​ ತಂತಿಗಳಿಂದ ವಿದ್ಯುತ್​ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ. ಬಳಿಕ ಮೃತ ಶೇಖರ್​​ ಶವವನ್ನು ಮರಣೋತ್ತರ ಪರೀಕ್ಷೆ ನಡೆಸಿ ಇಂದು ಕುಟುಂಬದವರಿಗೆ ನೀಡಿದ್ದಾರೆ.

ಈ ಸಂಬಂಧ ಬೆಸ್ಕಾಂ ನಿರ್ಲಕ್ಷ್ಯದ ವಿರುದ್ಧ ಕುಟುಂಬಸ್ಥರು ಅಂತರಸಂತೆ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ:ಮೈಸೂರಲ್ಲಿ ಹಿಟ್​ ಅಂಡ್​​ ರನ್​ಗೆ ಮಹಿಳೆ ಬಲಿ: ಐವರಿಗೆ ಗಂಭೀರ ಗಾಯ

ABOUT THE AUTHOR

...view details