ಕರ್ನಾಟಕ

karnataka

ETV Bharat / state

ದರ್ಶನ್​​ ಭೇಟಿಗಾಗಿ ಟೆಡ್ಡಿಬೇರ್​ ಧರಿಸಿ ಬಳ್ಳಾರಿ ಜೈಲಿಗೆ ಬಂದ ಶಿವಮೊಗ್ಗದ ಅಭಿಮಾನಿ - DARSHAN FAN WAITING FOR HIM

ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ನೋಡಲು ಶಿವಮೊಗ್ಗದಿಂದ ಅಭಿಮಾನಿಯೋರ್ವ ಗೊಂಬೆ ವೇಷ ತೊಟ್ಟು ಬಂದಿದ್ದಾನೆ.

ನಟ ದರ್ಶನ್​​ ಭೇಟಿಗಾಗಿ ಟೆಡ್ಡಿಬೇರ್​ ಧರಿಸಿ ಬಳ್ಳಾರಿ ಜೈಲಿಗೆ ಬಂದ ಅಭಿಮಾನಿ
ನಟ ದರ್ಶನ್​​ ಭೇಟಿಗಾಗಿ ಟೆಡ್ಡಿಬೇರ್​ ಧರಿಸಿ ಬಳ್ಳಾರಿ ಜೈಲಿಗೆ ಬಂದ ಅಭಿಮಾನಿ (ETV Bharat)

By ETV Bharat Karnataka Team

Published : Oct 13, 2024, 12:10 PM IST

ಬಳ್ಳಾರಿ:ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಬಳ್ಳಾರಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ನಟ ದರ್ಶನ್​​​​ ಅವರನ್ನು ನೋಡಲು ಅಭಿಮಾನಿಯೋರ್ವ ಟೆಡ್ಡಿ ಬೇರ್​ ಧರಿಸಿ ಶಿವಮೊಗ್ಗ ಜಿಲ್ಲೆಯ ಸಾಗರದಿಂದ ಆಗಮಿಸಿದ್ದಾನೆ.

ಬಳ್ಳಾರಿ ಕೇಂದ್ರ ಕಾರಾಗೃಹದೆದುರು ಇಂದು ಬೆಳಗ್ಗೆ ಅಭಿಮಾನಿ ಕಾರ್ತಿಕ್ ಎಂಬಾತ ಕಾಣಿಸಿಕೊಂಡಿದ್ದಾನೆ. ಟೆಡ್ಡಿಬೇರ್​ ಉಡುಪು ಧರಿಸಿ, We are waiting you D'BOSS ಎಂಬ ಸಂದೇಶದ ಫಲಕ ಹಿಡಿದು ನಿಂತಿದ್ದ. ದರ್ಶನ್ ಆದಷ್ಟು ಬೇಗ ಜೈಲಿನಿಂದ ಹೊರಬರಲಿ ಎಂದು ಪ್ರಾರ್ಥಿಸುತ್ತಿರುವ ಈತ ಜೈಲು ಸಿಬ್ಬಂದಿಯನ್ನು ಮಾತನಾಡಿಸಿದ್ದಾನೆ. ಈ ವೇಳೆ ಆರೋಪಿಯ ಭೇಟಿಗೆ ಹೊರಗಿನವರಿಗೆ ಅವಕಾಶವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದರ್ಶನ್​​ ಭೇಟಿಗಾಗಿ ಟೆಡ್ಡಿಬೇರ್​ ಧರಿಸಿ ಬಳ್ಳಾರಿ ಜೈಲಿಗೆ ಬಂದ ಶಿವಮೊಗ್ಗದ ಅಭಿಮಾನಿ (ETV Bharat)

ಇನ್ನು, ಜೈಲಿಗೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಹಾಗೂ ವಕೀಲರು ಸೇರಿದಂತೆ ಕುಟುಂಬಸ್ಥರು, ಸ್ನೇಹಿತರು ಈಗಾಗಲೇ ಹಲವು ಬಾರಿ ಭೇಟಿ ನೀಡಿದ್ದಾರೆ. ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಮತ್ತು ನಿರ್ಮಾಪಕಿ ಶೈಲಜಾ ನಾಗ್​ ಕೂಡಾ ಇತ್ತೀಚೆಗೆ ಆಗಮಿಸಿದ್ದರು.

ರೇಣುಕಾಸ್ವಾಮಿ ಹತ್ಯೆ ಪ್ರಕರಣದ 2ನೇ ಆರೋಪಿಯಾಗಿರುವ ದರ್ಶನ್​ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ಪೂರ್ಣಗೊಂಡಿದ್ದು, ಅಂತಿಮ ಆದೇಶ ಸೋಮವಾರ ಹೊರಬೀಳಲಿದೆ. ಸರ್ಕಾರದ ಪರವಾಗಿ ಅಭಿಯೋಜಕ ಪ್ರಸನ್ನ‌ಕುಮಾರ್ ಹಾಗೂ ದರ್ಶನ್ ಪರ ವಕೀಲ ಸಿ.ವಿ.ನಾಗೇಶ್ ವಾದಿಸಿದ್ದರು.

ಇದೇ ಪ್ರಕರಣದಲ್ಲಿ ಆರೋಪಿಗಳಾದ ಪವಿತ್ರಾಗೌಡ, ರವಿ, ನಾಗರಾಜ್, ಲಕ್ಷ್ಮಣ್ ಹಾಗೂ ದೀಪಕ್ ಜಾಮೀನು ಆದೇಶ ಕೂಡಾ ಇದೇ ದಿನ ಹೊರಬರಲಿದೆ.

ಇದನ್ನೂ ಓದಿ:ದರ್ಶನ್​​ ಫ್ಯಾನ್ಸ್​ಗೆ ಗುಡ್​ ನ್ಯೂಸ್: ರೀ ರಿಲೀಸ್​ ಆಗಲಿದೆ ಸೂಪರ್ ಹಿಟ್ 'ನವಗ್ರಹ' ಸಿನಿಮಾ​

'ನೀವು ನನ್ನ ಹೃದಯದಲ್ಲಿದ್ದೀರಿ': ಅಭಿಮಾನಿಗಳಿಗೆ ಸಿಗ್ನಲ್​ ಕೊಟ್ಟ ದರ್ಶನ್​​: ನಟನನ್ನು​​ ಭೇಟಿಯಾದ ಹರಿಕೃಷ್ಣ, ಶೈಲಜಾನಾಗ್

ABOUT THE AUTHOR

...view details