ಮೈಸೂರು:ಪತ್ನಿಯ ಶೀಲ ಶಂಕಿಸಿ ಕೊಲೆ ಮಾಡಿದ ಅಪರಾಧಿಗೆ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ, ತೀರ್ಪು ನೀಡಿದೆ.
ನಂಜನಗೂಡು ತಾಲೂಕಿನ ದೇಬೂರು ಗ್ರಾಮದ ಸುಬ್ಬ ಅಲಿಯಾಸ್ ರವಿ ಜೀವಾವಧಿ ಶಿಕ್ಷೆಗೆ ಗುರಿಯಾದ ಅಪರಾಧಿ. ಈತನಿಗೆ 10 ವರ್ಷದ ಹಿಂದೆ ನಂಜನಗೂಡು ಪಟ್ಟಣದ ರಾಜಾಜಿ ಕಾಲೋನಿಯ ನಂಜುಂಡ ಎಂಬುವರ ಮಗಳು ಅಮುದಾ ಅವರನ್ನು ಮದುವೆ ಮಾಡಿಸಲಾಗಿತ್ತು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ಮದುವೆಯಾದ 2-3 ವರ್ಷದ ನಂತರ ಸುಬ್ಬ ತನ್ನ ಪತ್ನಿ ಅಮುದಾ ಅವರ ಶೀಲ ಶಂಕಿಸಿ ಪ್ರತಿದಿನ ಮದ್ಯಪಾನ ಮಾಡಿ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದ. ಹೀಗೆ 2020ರ ಡಿಸೆಂಬರ್ 6 ರಂದು ಸಂಜೆ ಸುಬ್ಬ ಮದ್ಯಪಾನ ಮಾಡಿ ಬಂದು ಪತ್ನಿ ಜತೆ ಇದೇ ವಿಚಾರಕ್ಕೆ ಜಗಳ ತೆಗೆದಿದ್ದ. ಅಂದೇ ಅಮುದಾ ಸಬ್ಬನಿಗೆ ಊಟ ಬಡಿಸುತ್ತಿದ್ದಾಗ ಅವಳ ಮೇಲೆ ಸ್ಯಾನಿಟೈಸರ್ ಸುರಿದು ಬೆಂಕಿ ಹಚ್ಚಿದ್ದ. ಸುಟ್ಟ ಗಾಯಗಳಿಂದ ನರಳುತ್ತಿದ್ದ ಅಮುದಾರನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಕೆ ಮೃತಪಟ್ಟಿದ್ದಳು.