ಕರ್ನಾಟಕ

karnataka

ETV Bharat / state

ವಿಜಯಪುರ: 3 ಕಣ್ಣು, 2 ಮೂಗು, 2 ನಾಲಿಗೆಯ ವಿಚಿತ್ರ ಕರು ಜನನ - STRANGE CALF BIRTH

ವಿಜಯಪುರದ ತಿಕೋಟಾ ತಾಲೂಕಿನ ರೈತ ಮಹಿಳೆಯೊರ್ವರ ಮನೆಯ ಹಸು ವಿಚಿತ್ರ ಕರುವಿಗೆ ಜನ್ಮ ನೀಡಿದೆ.

ಒಂದೇ ಮುಖದಲ್ಲಿ ಮೂರು ಕಣ್ಣು, ಎರಡು ಮೂಗು, ಎರಡು ನಾಲಿಗೆಯ ಕರು ಜನನ
ವಿಚಿತ್ರ ಕರು ಜನನ! (ETV Bharat)

By ETV Bharat Karnataka Team

Published : Oct 20, 2024, 11:14 AM IST

ತಿಕೋಟಾ(ವಿಜಯಪುರ): ಒಂದೇ ಮುಖದಲ್ಲಿ ಮೂರು ಕಣ್ಣು, ಎರಡು ಮೂಗು, ಎರಡು ನಾಲಿಗೆಯ ವಿಚಿತ್ರ ಕರುವಿಗೆ ಹಸು ಜನ್ಮ ನೀಡಿದ್ದು, ಅಚ್ಚರಿಗೆ ಕಾರಣವಾಗಿದೆ.

ತಿಕೋಟಾ ತಾಲೂಕಿನ ಬಾಬಾನಗರ ಗ್ರಾಮದ ರೈತ ಮಹಿಳೆ ಸಾವಿತ್ರಿ ಬಸವರಾಜ ನಾಗೂರಿ ಎಂಬವರ ಜರ್ಸಿ ಹಸು ಶನಿವಾರ ಸಂಜೆ 4 ಗಂಟೆಯ ಸುಮಾರಿಗೆ ಈ ಕರುವಿಗೆ ಜನ್ಮ ನೀಡಿತು. ಸ್ಥಳಕ್ಕೆ ಪಶು ವೈದ್ಯರು ಆಗಮಿಸಿ ತಪಾಸಣೆ ನಡೆಸಿದ್ದಾರೆ. ಹಸು ಮತ್ತು ಕರು ಆರೋಗ್ಯವಾಗಿದೆ, ಯಾವುದೇ ತೊಂದರೆ ಇಲ್ಲ ಎಂದು ಅವರು ತಿಳಿಸಿದ್ದಾರೆ.

3 ಕಣ್ಣು, 2 ಮೂಗು, 2 ನಾಲಿಗೆಯ ವಿಚಿತ್ರ ಕರು ಜನನ (ETV Bharat)

ವಿಚಿತ್ರ ಮೂಖ ಪ್ರಾಣಿಯನ್ನು ನೋಡಲು ಸುತ್ತಮುತ್ತಲಿನ ಜನರು ಆಗಮಿಸುತ್ತಿದ್ದಾರೆ. ಮೊಬೈಲ್​ನಲ್ಲಿ ಫೋಟೋ ಹಾಗೂ ವಿಡಿಯೋ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಇಂಥ ಕರುಗಳ ಜನನ ಇದೇ ಮೊದಲಲ್ಲ. ಅಂತಹ ಕೆಲವು ಘಟನಾವಳಿಗಳ ಸುದ್ದಿಯ ಲಿಂಕುಗಳು​ ಇಲ್ಲಿವೆ ನೋಡಿ.

ABOUT THE AUTHOR

...view details