ಕರ್ನಾಟಕ

karnataka

ETV Bharat / state

ಆಕ್ಸಿಜನ್ ಕಾನ್ಸಂಟ್ರೇಟರ್​ ಮೇಲಿದ್ದರೂ ಮತಗಟ್ಟೆಗೆ ಬಂದು ವೋಟ್ ಮಾಡಿದ 83ರ ಹರೆಯದ ವೃದ್ಧೆ! - Lok Sabha Election

ರಾಜಾಜಿನಗರದ 83ರ ವಯೋವೃದ್ಧೆಯೊಬ್ಬರು ಆಕ್ಸಿಜನ್ ಕಾನ್ಸಂಟ್ರೇಟರ್​ ಮೇಲೆ ಬದುಕುತ್ತಿದ್ದರೂ ಮತಗಟ್ಟೆಗೆ ಬಂದು ವೋಟ್ ಮಾಡಿದ್ದಾರೆ.

83 year old Geeta casts her vote at a polling booth despite being on an oxygen concentrator
83 year old Geeta casts her vote at a polling booth despite being on an oxygen concentrator

By ETV Bharat Karnataka Team

Published : Apr 26, 2024, 4:03 PM IST

Updated : Apr 26, 2024, 5:00 PM IST

ಬೆಂಗಳೂರು: ಲೋಕಸಭಾ ಚುನಾವಣೆಗಾಗಿ ಶುಕ್ರವಾರ ಬೆಳಗ್ಗೆಯಿಂದಲೇ ಜನ ಉತ್ಸಾಹದಿಂದ ಮತ ಚಲಾಯಿಸುತ್ತಿರುವುದು ಕಂಡು ಬಂದಿದೆ. ರಾಜಾಜಿನಗರದ 83 ವಯಸ್ಸಿನ ವಯೋವೃದ್ಧೆಯೊಬ್ಬರು ಆಕ್ಸಿಜನ್ ಕಾನ್ಸಂಟ್ರೇಟರ್​ ಮೇಲಿದ್ದರೂ ಮತಗಟ್ಟೆಗೆ ಬಂದು ಮತ ಚಲಾಯಿಸಿದ್ದು ಬಹಳ ವಿಶೇಷವಾಗಿತ್ತು.

ರಾಜಾಜಿನಗರ 2ನೇ ಬ್ಲಾಕ್ ನಿವಾಸಿ ಗೀತಾ ಅವರಿಗೆ ಈಗ 83 ವರ್ಷ. ಆದರೆ ಇವರ ಜೀವನೋತ್ಸಾಹ ಮಾತ್ರ ಬಹಳ ದೊಡ್ಡದು. ಕೋವಿಡ್​ನಲ್ಲಿ ಅನಾರೋಗ್ಯಕ್ಕೀಡಾದ ಇವರು ಕಳೆದ ಮೂರು ವರ್ಷಗಳಿಂದ ಆಕ್ಸಿಜನ್ ಕಾನ್ಸಂಟ್ರೇಟರ್ ಬಳಸುತ್ತಿದ್ದಾರೆ. ಆದರೆ ಮತದಾನ ದಿನದಂದು ಮತ ಹಾಕಲೇಬೇಕೆಂದು ಇವರು ಪಣ ತೊಟ್ಟಿದ್ದರು.

ಇತ್ತೀಚೆಗೆ ಚುನಾವಣಾ ಪ್ರಚಾರವನ್ನು ನೋಡಿದ್ದ ಅವರು ತಾವು ಈ ಬಾರಿಯೂ ಮತಗಟ್ಟೆಗೆ ಹೋಗಿ ಮತದಾನ ಮಾಡಬೇಕೆಂದು ಕುಟುಂಬಸ್ಥರ ಬಳಿ ಹೇಳಿಕೊಂಡಿದ್ದರು. ಅದಕ್ಕಾಗಿ ಆಕ್ಸಿಜನ್ ಸಿಲಿಂಡರ್ ಇರುವ ಆ್ಯಂಬುಲೆನ್ಸ್​ ವ್ಯವಸ್ಥೆ ಮಾಡುವಂತೆ ಕೇಳಿಕೊಂಡಿದ್ದರು. ಅದರಂತೆ ಅವರು ಇಂದು ಆಕ್ಸಿಜನ್ ಸಿಲಿಂಡರ್​ನೊಂದಿಗೆಯೇ ಮತಗಟ್ಟೆಗೆ ಬಂದು ಮತ ಚಲಾಯಿಸಿ ಪ್ರಜಾಪ್ರಭುತ್ವದ ರಾಯಭಾರಿಯಾಗಿ ಕಂಗೊಳಿಸಿದರು.

ಈ ವಯಸ್ಸಿನಲ್ಲಿಯೂ ಗೀತಾ ಅವರ ಅಧ್ಯಯನ ಆಸಕ್ತಿ ಕುಂದಿಲ್ಲ. ಸದ್ಯ ಅವರು ಹರಿದಾಸ ಸಾಹಿತ್ಯದ ಬಗ್ಗೆ ಪಿಎಚ್​ಡಿ ಮಾಡುತ್ತಿದ್ದಾರೆ. ಕಳೆದ ತಿಂಗಳು ಉತ್ತರಾದಿ ಮಠದವರು ನಡೆಸಿದ ಹರಿದಾಸ ಸಾಹಿತ್ಯ ಪರೀಕ್ಷೆಯಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಹರಿದಾಸ ಸಾಹಿತ್ಯ ಕುರಿತು ಪಾಠ ಕೂಡ ಮಾಡುತ್ತಾರೆ.

ಇದನ್ನೂ ಓದಿ : ಸೆಂಚುರಿ ದಾಟಿದರೂ ಬತ್ತದ ಉತ್ಸಾಹ: ಮತಗಟ್ಟೆಗೆ ಬಂದು ಮತದಾನದ ಹಕ್ಕು ಚಲಾಯಿಸಿದ ಹಿರಿಯ ನಾಗರಿಕರು - Lok Sabha election 2024

Last Updated : Apr 26, 2024, 5:00 PM IST

ABOUT THE AUTHOR

...view details