ಕರ್ನಾಟಕ

karnataka

ETV Bharat / state

77ನೇ ಸ್ವಾತಂತ್ರ್ಯೋತ್ಸವ: ಪ್ರಧಾನಿ ಕಾರ್ಯಕ್ರಮಕ್ಕೆ ಬೆಳಗಾವಿಯ ಮೂವರು ವಿದ್ಯಾರ್ಥಿಗಳು, ಓರ್ವ ಉಪನ್ಯಾಸಕಿ ಆಯ್ಕೆ - PM Modi Independence Day Program

77ನೇ ಸ್ವಾತಂತ್ರ್ಯೋತ್ಸವ ದಿನದಂದು ನಡೆಯುವ ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಬೆಳಗಾವಿಯ ಮೂವರು ವಿದ್ಯಾರ್ಥಿಗಳು ಮತ್ತು ಉಪನ್ಯಾಸಕಿಯೊಬ್ಬರು ಆಯ್ಕೆ ಆಗಿದ್ದಾರೆ.

BELAGAVI STUDENT AND LECTURER  77TH INDEPENDENCE DAY  BELAGAVI
ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಬೆಳಗಾವಿಯ ಮೂವರು ವಿದ್ಯಾರ್ಥಿಗಳು ಆಯ್ಕೆ (ETV Bharat)

By ETV Bharat Karnataka Team

Published : Aug 12, 2024, 7:54 PM IST

ಬೆಳಗಾವಿ:77ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಜೊತೆಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬೆಳಗಾವಿ ಜಿಲ್ಲೆಯ ಮೂವರು ವಿದ್ಯಾರ್ಥಿಗಳು ಮತ್ತು ಓರ್ವ ಉಪನ್ಯಾಸಕಿ ಆಯ್ಕೆಯಾಗುವ ಮೂಲಕ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ.

ಆಜಾದಿ ಕಾ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಶ್ರಮದಾನದ ಮೂಲಕ ‘ಮೇರಿ ಮಿಟ್ಟಿ, ಮೇರಾ ದೇಶ’ ಅಭಿಯಾನ ಹಾಗೂ ಅಮೃತ ವಾಟಿಕಾ ನಿರ್ಮಾಣಕ್ಕೆ ಶ್ರಮಿಸಿದ ಸೇವೆ ಪರಿಗಣಿಸಿ ಪದವಿಪೂರ್ವ ಶಿಕ್ಷಣ ವಿಭಾಗದಲ್ಲಿ ರಾಜ್ಯದಿಂದ ಪ್ರಧಾನಿ ಮೋದಿ ಜೊತೆಗೆ ಸಂವಾದಕ್ಕೆ ಒಟ್ಟು 6 ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ಈ ಪೈಕಿ ಬೆಳಗಾವಿ ಜಿಲ್ಲೆಯ ಮೂವರು ಮತ್ತು ಗದಗ ಜಿಲ್ಲೆಯ ಓರ್ವ ಮತ್ತು ರಾಯಚೂರು ಜಿಲ್ಲೆ ಇಬ್ಬರು ಆಯ್ಕೆಯಾಗಿದ್ದಾರೆ.

ಬೆಳಗಾವಿ ನಗರದ ಸರ್ಕಾರಿ ಸರಸ್ವತಿ ಬಾಲಕಿಯರ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಸಂಜನಾ ಮಂಜುನಾಥ ಮುದಿಗೌಡರ ಮತ್ತು ಕಲಾ ವಿಭಾಗದ ಕೀರ್ತಿ ಅರ್ಜುನ್ ಜಟಗನ್ನವರ ಮತ್ತು ಇದೇ ಕಾಲೇಜಿನ ಉಪನ್ಯಾಸಕಿ ಅನಸೂಯಾ ಹಿರೇಮಠ ಹಾಗೂ ಚಿಕ್ಕೋಡಿ ತಾಲೂಕಿನ ಕೆರೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಾಗರ ಮಲ್ಲಪ್ಪ ಬೆಕ್ಕೇರಿ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಪ್ರಧಾನಿ ಜೊತೆಗೆ ಸಂವಾದಕ್ಕೂ ಅವರಿಗೆ ಅವಕಾಶ ಕಲ್ಪಿಸಲಾಗಿದೆ. ಈ ಮೂವರು ವಿದ್ಯಾರ್ಥಿಗಳು ಎನ್ಎಸ್​ಎಸ್ ಘಟಕದಲ್ಲಿ ಸ್ವಯಂ ಸೇವಕರಾಗಿದ್ದಾರೆ. ಅಜಾದಿ ಕಾ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಪಿಯುಸಿ ವಿಭಾಗದ ಎನ್ಎಸ್​ಎಸ್ ಘಟಕದ ಸ್ವಯಂ ಸೇವಕರು ಶ್ರಮಿಸಿದ್ದಾರೆ. ಬೆಳಗಾವಿಯ ಸಂಜನಾ ಮತ್ತು ಕೀರ್ತಿ ಅವರು ಎಸ್ಎಸ್‌ಎಸ್ ಅಧಿಕಾರಿ ಅನಸೂಯಾ ಹಿರೇಮಠ ಮತ್ತು ಪ್ರಾಚಾರ್ಯ ವಿ.ಬಿ.ಶೀಲವಾಡ ಮಾರ್ಗದರ್ಶನದಲ್ಲಿ ಶ್ರಮಿಸಿದ್ದಾರೆ. ಇನ್ನು ಚಿಕ್ಕೋಡಿಯ ಕೆರೂರಿನ ಸಾಗರ, ಬೆಕ್ಕೇರಿ ಕಾಲೇಜಿನ ಎನ್‌ಎಸ್‌ಎಸ್‌ ಅಧಿಕಾರಿ ಶ್ರೀಶೈಲ ಕೋಲಾರ ಮಾರ್ಗದರ್ಶನ ನೀಡಿದ್ದಾರೆ. ಈ ಮೂವರು ವಿದ್ಯಾರ್ಥಿಗಳು ಪ್ರಧಾನಮಂತ್ರಿ ಕಾರ್ಯಕ್ರಮಕ್ಕೆ ಆಯ್ಕೆಯಾಗಿರುವುದರಿಂದ ಜಿಲ್ಲೆಯ ಕೀರ್ತಿ ಹೆಚ್ಚಿದೆ.

ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಪ್ರತಿಕ್ರಿಯಿಸಿದ್ದು, ಪ್ರಧಾನಮಂತ್ರಿಗಳ ವಿಶೇಷ ಆಮಂತ್ರಿತರಾಗಿ ಸರ್ಕಾರಿ ಪದವಿ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಭಾಗವಹಿಸಲಿದ್ದು, ಜಿಲ್ಲೆಯ, ರಾಜ್ಯದ ಮತ್ತು ರಾಷ್ಟ್ರ ಮಟ್ಟದಲ್ಲಿ ನನ್ನ ಮತಕ್ಷೇತ್ರದ ಶಾಲೆಗೆ ಕೀರ್ತಿ ತಂದಿದ್ದಾರೆ. ಕಾರ್ಯಕ್ರಮ ನಿಯೋಜಕರಾದ ಅನುಸೂಯಾ ಹಿರೇಮಠ ಮತ್ತು ಸರ್ಕಾರಿ ಸರಸ್ವತಿ
ಶಾಲೆಯ ಎಲ್ಲ ಉಪನ್ಯಾಸಕರಿಗೆ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಹಾಗೂ ಇಲಾಖೆ ಸಿಬ್ಬಂದಿಗಳಿಗೆ ಅಭಿನಂದನೆ ತಿಳಿಸುವುದಾಗಿ ಹೇಳಿದ್ದಾರೆ.

ಪ್ರಭಾರ ಡಿಡಿಪಿಐ ಮೋಹನಕುಮಾರ ಹಂಚಾಟಿ ಅವರನ್ನು 'ಈಟಿವಿ ಭಾರತ' ಸಂಪರ್ಕಿಸಿದಾಗ, ಮೂವರು ವಿದ್ಯಾರ್ಥಿಗಳು ಪ್ರಧಾನಮಂತ್ರಿಗಳ ಸಂವಾದದಲ್ಲಿ ಭಾಗವಹಿಸುತ್ತಿರುವುದು ಜಿಲ್ಲೆಗೆ ಹೆಮ್ಮೆಯ ಸಂಗತಿ. ಇತರೆ ವಿದ್ಯಾರ್ಥಿಗಳಿಗೆ ಇವರು ಮಾದರಿಯಾಗಿದ್ದಾರೆ. ಸಂವಾದದಲ್ಲಿ ಚೆನ್ನಾಗಿ ಪ್ರದರ್ಶನ ನೀಡಿ, ಜಿಲ್ಲೆಯ ಕೀರ್ತಿ ಹೆಚ್ಚಿಸಲಿ ಎಂದು ಶುಭ ಹಾರೈಸುತ್ತೇನೆ ಎಂದರು.

ಇದನ್ನೂ ಓದಿ:ಮಾನವ-ಆನೆ ಸಂಘರ್ಷ ತಡೆಗೆ ಸರ್ಕಾರ ಬದ್ಧ, 8 ಆನೆ ಕಾರ್ಯಪಡೆ ರಚನೆ: ಸಿಎಂ ಸಿದ್ದರಾಮಯ್ಯ - CM Siddaramaiah

ABOUT THE AUTHOR

...view details