ಬೆಂಗಳೂರು:ಗಲಾಟೆ ಮಾಡಬೇಡಿ, ಇತರರಿಗೆ ತೊಂದರೆಯಾಗುತ್ತದೆ ಎಂದು ಬುದ್ಧಿವಾದ ಹೇಳಿದ್ದಕ್ಕೆ ಹುಡುಕಿಕೊಂಡು ಬಂದು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದ ಆರು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಫೆಬ್ರವರಿ 10ರಂದು ರಾತ್ರಿ ಕೆ.ಆರ್.ಪುರಂನ ಟಿ.ಸಿ.ಪಾಳ್ಯ ಮುಖ್ಯರಸ್ತೆಯ ಆನಂದಪುರದಲ್ಲಿ ಕಾರ್ತಿಕ್ ಹಾಗೂ ವಿನೀಶ್ ಎಂಬಾತನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದ ಪವನ್, ವಿನಯ್ ಕುಮಾರ್, ಮನೋಜ್, ಸಂತೋಷ್, ಪ್ರಕಾಶ್ ಹಾಗೂ ದರ್ಶನ್ ಬಂಧಿತ ಆರೋಪಿಗಳು.
ಗಲಾಟೆ ಮಾಡದಂತೆ ಬುದ್ಧಿವಾದ ಹೇಳಿದ್ದಕ್ಕೆ ಮಾರಣಾಂತಿಕ ಹಲ್ಲೆ; 6 ಜನ ಆರೋಪಿಗಳ ಬಂಧನ - assault case
ಬುದ್ಧಿವಾದ ಹೇಳಿದ್ದಕ್ಕೆ ವ್ಯಕ್ತಿಯನ್ನು ಹುಡುಕಿಕೊಂಡು ಮಾರಣಾಂತಿಕ ಹಲ್ಲೆ ಮಾಡಿದ್ದ ಆರು ಜನ ಆರೋಪಿಗಳನ್ನು ಬಂಧಿಸಲಾಗಿದೆ.
Published : Feb 21, 2024, 4:46 PM IST
|Updated : Feb 21, 2024, 4:55 PM IST
ಫೆಬ್ರವರಿ 10ರಂದು ರಾತ್ರಿ ಸ್ನೇಹಿತ ವಿನೀಶ್ ಜೊತೆ ಟಿ.ಸಿ. ಪಾಳ್ಯ ಮುಖ್ಯರಸ್ತೆಯ ಬಾರ್ವೊಂದರ ಬಳಿಯಿರುವ ಕಬಾಬ್ ಸೆಂಟರ್ ಬಳಿ ಕಾರ್ತಿಕ್ ಬಂದಿದ್ದ. ಇದೇ ವೇಳೆ ಅಲ್ಲಿಯೇ ಗಲಾಟೆ ಮಾಡುತ್ತಿದ್ದ ಆರೋಪಿಗಳಿಗೆ ಬುದ್ಧಿವಾದ ಹೇಳಿ ತೆರಳಿದ್ದ. ಆದರೆ, ಕಾರ್ತಿಕ್ ಹಾಗೂ ವಿನೀಶನನ್ನು ಹುಡುಕಿಕೊಂಡು ಬಂದಿದ್ದ ಆರೋಪಿಗಳು, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದರು. ಆರೋಪಿಗಳ ಕೃತ್ಯದಿಂದಾಗಿ ಮಾರಣಾಂತಿಕವಾಗಿ ಗಾಯಗೊಂಡಿದ್ದ ಕಾರ್ತಿಕ್ ಹಾಗೂ ವಿನೀಶ್ ಆಸ್ಪತ್ರೆಗೆ ದಾಖಲಾಗಿದ್ದರು. ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಸದ್ಯ ಆರು ಜನ ಆರೋಪಿಗಳನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.
ಇದನ್ನೂ ಓದಿ:ಕಾರವಾರ: ಗಾಂಜಾ ಮತ್ತಿನಲ್ಲಿ ಮಹಿಳಾ ಪೊಲೀಸರ ಮೇಲೆ ಹಲ್ಲೆ, ಇಬ್ಬರು ಯುವತಿಯರ ಬಂಧನ