ಬೆಂಗಳೂರು:ವಿಧಾನಸಭೆಯ ಸಭಾಂಗಣದ ಮೊಗಸಾಲೆಗಳಲ್ಲಿ ಮತ್ತು ವಿಕಾಸಸೌಧದಲ್ಲಿ ನೆಟ್‌ವರ್ಕ್ ಸಮಸ್ಯೆಯನ್ನು ಹೋಗಲಾಡಿಸಲು 5ಜಿ ಇಂಟರ್‌ನೆಟ್ ಸೇವೆಗೆ ಚಾಲನೆ ನೀಡಲಾಗಿದೆ.
ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹಾಗೂ ಸಭಾಪತಿ ಬಸವರಾಜ ಹೊರಟ್ಟಿ ಅವರು 5G ಅಂತರ್ಜಾಲ ಸೇವೆಗೆ ಇಂದು ಚಾಲನೆ ನೀಡಿದರು. ಈ ಹಿಂದೆ ವಿಧಾನಸೌಧ ಹಾಗೂ ವಿಕಾಸಸೌಧದಲ್ಲಿ ಅಂತರ್ಜಾಲ ಸಂಪರ್ಕ ದುರ್ಬಲವಾಗಿದ್ದು, ಸಾಕಷ್ಟು ಸಮಸ್ಯೆ ಉಂಟಾಗಿತ್ತು.
ಇದರೊಂದಿಗೆ ಸೋಮವಾರದಿಂದ ವಿಧಾನಸೌಧದ ಒಳಗೆ ಮತ್ತು ಸುತ್ತಮುತ್ತ ಜಾಮರ್‌ಗಳಿಲ್ಲದೆ ಮೊಬೈಲ್ ಫೋನ್‌ಗಳನ್ನು ಮುಕ್ತವಾಗಿ ಬಳಸಬಹುದು. ದಶಕಗಳಿಂದ ವಿಧಾನಸಭೆ ಮತ್ತು ವಿಧಾನಪರಿಷತ್ ಅಧಿವೇಶನದಲ್ಲಿದ್ದ ಜಾಮರ್ಗಳನ್ನು ತೆಗೆದುಹಾಕಲಾಗಿದೆ. ಈಗ ಕರೆ ಮಾಡಲು ಅಥವಾ ಸ್ವೀಕರಿಸಲು ಯಾವುದೇ ಸಮಸ್ಯೆ ಇಲ್ಲ.
ಅಲ್ಲದೆ, ವಿಧಾನಸೌಧದ ಒಳಗೆ 5G ವೈಫೈ ಸೇವೆಯನ್ನು ಸಕ್ರಿಯಗೊಳಿಸಲಾಗಿದೆ. ಶಾಸಕರು ತಮ್ಮ ಟ್ಯಾಬ್ಲೆಟ್‌ಗಳು ಮತ್ತು ಮೊಬೈಲ್ ಸಾಧನಗಳನ್ನು ಸಕ್ರಿಯವಾಗಿ ಬಳಸಬಹುದು. ಇದು ಆಡಳಿತ ಮತ್ತು ಸಂವಹನವನ್ನು ಇನ್ನಷ್ಟು ಸುಗಮಗೊಳಿಸಲಿದೆ.
ಇದನ್ನೂ ಓದಿ:ಬೆಳಗ್ಗೆ 9 ಗಂಟೆಗೆ ವಿಧಾನಸಭೆ ಕಲಾಪಕ್ಕೆ ಆಕ್ಷೇಪ; 10 ಗಂಟೆಗೆ ಆರಂಭಿಸಲು ತೀರ್ಮಾನ