ಹಾವೇರಿ: ಜಿಲ್ಲೆಯ ಶಿಗ್ಗಾಂವ್ ಪಟ್ಟಣದ ಹತ್ತಿರ ಶನಿವಾರ ಸಂಭವಿಸಿದ ಕಾರು ಡಿಕ್ಕಿ ಪ್ರಕರಣದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಐದಕ್ಕೇರಿದೆ. ಇದೀಗ ಮೃತರ ಗ್ರಾಮಕ್ಕೆ ತೆರಳಿರುವ ಸಂಸದ ಬಸವರಾಜ್ ಬೊಮ್ಮಾಯಿ ಅವರು ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ.
ಶನಿವಾರ ಬೆಳಗ್ಗೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿರುವ ಬೇವಿನಮರಕ್ಕೆ ಕಾರು ಡಿಕ್ಕಿ ಹೊಡೆದಿತ್ತು. ಸ್ಥಳದಲ್ಲಿ ಓರ್ವ ಸಾವನ್ನಪ್ಪಿದರೆ, ಶಿಗ್ಗಾಂವ್ ಆಸ್ಪತ್ರೆಯಲ್ಲಿ ಮತ್ತೊಬ್ಬ ಅಸುನೀಗಿದ್ದ. ತೀವ್ರವಾಗಿ ಗಾಯಗೊಂಡಿದ್ದ ಐವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಕಿಮ್ಸ್‌ನಲ್ಲಿ ಸಹ ಚಿಕಿತ್ಸೆ ಫಲಕಾರಿಯಾಗದೆ ಮತ್ತಿಬ್ಬರು ಸಾವನ್ನಪ್ಪಿದ್ದರು. ಇಂದು ಬೆಳಗ್ಗೆ ಮತ್ತೊಬ್ಬ ಗಾಯಾಳು ಸಾವನ್ನಪ್ಪಿದ್ದರಿಂದ ಮೃತರ ಸಂಖ್ಯೆ ಐದಕ್ಕೇರಿದಂತಾಗಿದೆ.
ಸವಣೂರು ತಾಲೂಕಿನ ಏಳು ಜನ ಸ್ನೇಹಿತರು ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ನಂದಗಡಕ್ಕೆ ತೆರಳುತ್ತಿದ್ದರು. ಮತ್ತೊಂದು ವಾಹನವನ್ನು ಓವರ್ಟೇಕ್ ಮಾಡಲು ಹೋದ ಚಾಲಕನ ನಿಯಂತ್ರಣ ತಪ್ಪಿ ಕಾರು ಬೇವಿನಮರಕ್ಕೆ ಡಿಕ್ಕಿಯಾಗಿ ಅಪಘಾತ ಸಂಭವಿಸಿತ್ತು.