ಕರ್ನಾಟಕ

karnataka

ETV Bharat / state

ಜಸ್ಟ್​ 3 ತಿಂಗಳ ಕಿಲಾರಿ ಹೋರಿ ₹1.51 ಲಕ್ಷಕ್ಕೆ ಮಾರಾಟ!: ಈ ತಳಿಯ ವಿಶೇಷತೆ ಏನು ಗೊತ್ತಾ? - Kilari Bull - KILARI BULL

ಕಾಗವಾಡ ತಾಲೂಕಿನ ಕೃಷ್ಣಾ ಕಿತ್ತೂರು ಗ್ರಾಮದ 95 ದಿನಗಳ ಕಿಲಾರಿ ತಳಿಯ ಹೋರಿ ಬರೋಬ್ಬರಿ 1.51 ಲಕ್ಷ ರೂಪಾಯಿಗೆ ಮಾರಾಟವಾಗಿ ದಾಖಲೆ ನಿರ್ಮಿಸಿದೆ.

3 ತಿಂಗಳ ಕಿಲಾರಿ ಹೋರಿ ₹1.51 ಲಕ್ಷಕ್ಕೆ ಮಾರಾಟ
3 ತಿಂಗಳ ಕಿಲಾರಿ ಹೋರಿ ₹1.51 ಲಕ್ಷಕ್ಕೆ ಮಾರಾಟ (ETV Bharat)

By ETV Bharat Karnataka Team

Published : Oct 2, 2024, 8:23 PM IST

Updated : Oct 2, 2024, 8:48 PM IST

ಚಿಕ್ಕೋಡಿ(ಬೆಳಗಾವಿ): ಕಿಲಾರಿ ಜಾತಿಯ 3 ತಿಂಗಳ ಕರುವೊಂದು (ಹೋರಿ) 1.51 ಲಕ್ಷ ರೂ.ಗೆ ಮಾರಾಟವಾಗಿ ದಾಖಲೆ ಸೃಷ್ಟಿಸಿದೆ. ಕಾಗವಾಡ ತಾಲೂಕಿನ ಕೃಷ್ಣಾ ಕಿತ್ತೂರು ಗ್ರಾಮದ ರೈತ ಅಶೋಕ ನಿಂಗಪ್ಪ ಜಂಬಗಿ ಎಂಬುವರಿಗೆ ಸೇರಿದ 95 ದಿನಗಳ ಹೋರಿ ಇದಾಗಿದೆ. ರಾಯಬಾಗ ತಾಲೂಕಿನ ಯಲ್ಪಾರಟ್ಟಿ ಗ್ರಾಮದ ರೈತ ಕರಿಯಪ್ಪ ಭರಮಪ್ಪ ಲಾಳಿ ಎಂಬುವರು ಈ ಕರುವನ್ನು ಒಂದೂವರೆ ಲಕ್ಷಕ್ಕೆ ಖರೀದಿಸಿ ಎಲ್ಲರಿಗೂ ಗುಲಾಲ್(ಬಣ್ಣ) ಹಚ್ಚಿ ಸಂಭ್ರಮಿಸಿದರು.

ಈ ಕುರಿತು ರೈತ ಅಶೋಕ ನಿಂಗಪ್ಪ ಜಂಬಗಿ ಮಾತನಾಡಿ, "ನಮ್ಮ ಅಜ್ಜ, ಮುತ್ತಜ್ಜನ ಕಾಲದಿಂದಲೂ ಕಿಲಾರಿ ಜಾತಿ ಹೋರಿಗಳನ್ನು ಸಾಕುತ್ತಾ ಬರಲಾಗಿದೆ. ಕಿಲಾರಿ ತಳಿಯು ವಿಶೇಷತೆಯಿಂದ ಕೂಡಿದ್ದು, ಈ ತಳಿಯ ಹೋರಿ ಉತ್ತಮ ಬೆಲೆಗೆ ಮಾರಾಟವಾಗುತ್ತದೆ. ಒಂದು ವರ್ಷದ ಕರು ಬರೋಬ್ಬರಿ ಐದಾರು ಲಕ್ಷ ರೂ ಬೆಲೆ ಬಾಳುತ್ತದೆ. ಸದ್ಯ ನಮ್ಮ ಬಳಿ ಜಾನುವಾರಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಅವುಗಳ ಪೋಷಣೆ ಅಷ್ಟು ಸುಲಭವಲ್ಲ. ಹೀಗಾಗಿ ನಾವು ಚಿಕ್ಕ ವಯಸ್ಸಿಗೆ ಕರು ಮಾರಾಟ ಮಾಡಿದ್ದೇವೆ. ಕಡಿಮೆ ವಯಸ್ಸಿನ ಕರು ದೊಡ್ಡ ಮೊತ್ತಕ್ಕೆ ಮಾರಾಟವಾಗಿ ನಮ್ಮ ಕುಟುಂಬದ ಕೀರ್ತಿ ಹೆಚ್ಚಿಸಿದೆ" ಎಂದರು.

ಕಿಲಾರಿ ಹೋರಿ (ETV Bharat)

ಕರು ಖರೀದಿಸಿದ ರೈತ ಕರಿಯಪ್ಪ ಭರಮಪ್ಪ ಲಾಳಿ ಮಾತನಾಡಿ, "ಹಲವು ವರ್ಷಗಳಿಂದ ಒಳ್ಳೆಯ ತಳಿಯ ಕರು ಹುಡುಕಾಡುತ್ತಿದ್ದೆವು. ಸದ್ಯ ರೈತ ಅಶೋಕ ನಿಂಗಪ್ಪ ಅವರ ಮನೆಯಲ್ಲಿ ಉತ್ತಮ ಕರು ಸಿಕ್ಕಿದೆ. ನಾವು ಕಿಲಾರಿ ತಳಿ ಉಳಿಸುವ ಸಲುವಾಗಿ ಹಾಗೂ ಪ್ರದರ್ಶನ ಮತ್ತು ತಳಿ ಅಭಿವೃದ್ಧಿ ಮಾಡುವುದಕ್ಕೆ ಯೋಜಿಸಿದ್ದೇವೆ. ಈ ಕರುವಿನ ವಿಶೇಷತೆ ಎಂದರೆ ಇದರ ತಾಯಿ ತಿಕ್ಕುಂಡಿ ಮನೆತನದ ಆಕಳು, ಕರುವಿನ ಮುಖ ತುಂಬಾ ಉದ್ದವಾಗಿದೆ. ಕೊಂಬುಗಳು ಸಣ್ಣದಾಗಿ ಬೆಳೆಯುತ್ತದೆ. ಸಂಪೂರ್ಣವಾಗಿ ಕರುವಿನ ಮೈ ತುಂಬಾ ದೃಢವಾಗಿರುತ್ತದೆ. ಇದು ಅತಿ ಉತ್ತಮವಾದ ತಳಿ ಆಗಿರುವುದರಿಂದ ನಾವು ಖರೀದಿ ಮಾಡಿದ್ದೇವೆ. ದೇಸಿ ಗೋವುಗಳನ್ನು ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ರೈತರು ಹೆಚ್ಚಾಗಿ ದೇಸಿ ಹಸುಗಳನ್ನು ಸಾಕಬೇಕು " ಎಂದು ಮನವಿ ಮಾಡಿದರು.

ಇದನ್ನೂ ಓದಿ:ಚಿಕ್ಕೋಡಿ: ಚಾಲಕನ ಸಹಿತ ಸುಟ್ಟು ಕರಕಲಾದ ಕಾರು ಪತ್ತೆ - burnt dead body

Last Updated : Oct 2, 2024, 8:48 PM IST

ABOUT THE AUTHOR

...view details