ಬೆಳ್ತಂಗಡಿ:ತಾಲೂಕಿನ ಗರ್ಡಾಡಿ ಗ್ರಾಮದ ಎಸ್ಟೇಟ್ವೊಂದರ ಗೇಟ್ ಬಳಿ 25 ಮೇಕೆಗಳ ತಲೆ ಕಡಿದು ಅವುಗಳ ತಲೆಯಲ್ಲಿ ತಾಲೂಕಿನ 25 ವ್ಯಕ್ತಿಗಳ ಫೋಟೋ ಇಟ್ಟ ವಿಚಿತ್ರ ಘಟನೆ ನಡೆದಿದೆ. ಎಸ್ಟೇಟ್ ಪ್ರವೇಶಿಸುವ ಗೇಟಿನ ಒಳಗೆ ಮೇಕೆಗಳ ತಲೆಯನ್ನು ಕಡಿಯಲಾಗಿದ್ದು, ಇದೊಂದು ವಾಮಾಚಾರ ಕೃತ್ಯವೆಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸುದ್ದಿ ತಿಳಿದು ತಕ್ಷಣ ಘಟನಾ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದರು. ಸದ್ಯ ಪ್ರಕರಣದ ಮಾಹಿತಿ ಕಲೆ ಹಾಕುತ್ತಿದ್ದಾರೆ.
25 ಮೇಕೆಗಳಲ್ಲಿ ಮೂರು ಮೇಕೆ ಸ್ಥಳೀಯರದ್ದಾಗಿವೆ. ಮೇಯೋದಕ್ಕೆ ಬಿಟ್ಟಿರುವ ಮೇಕೆಗಳನ್ನು ಕಳೆದ ಮೂರು ದಿನಗಳ ಹಿಂದೆ ಯಾರೋ ಕದ್ದು ಇಲ್ಲಿ ವಾಮಾಚಾರಕ್ಕೆ ಬಳಸಿ ಅವುಗಳ ರುಂಡವನ್ನು ಕಡಿಯಲಾಗಿದೆ. ಮಕ್ಕಳ ಹಾಗೆ ಮೇಕೆಗಳನ್ನು ನೋಡಿಕೊಳ್ಳುತ್ತಿದ್ದೆವು ಎಂದು ಮೇಕೆಯನ್ನು ಸಾಕಿದ ಮಾಲೀಕರು ಮೇಕೆಗಳ ಸ್ಥಿತಿ ಕಂಡು ಕಣ್ಣೀರು ಹಾಕಿದರು.
ಘಟನೆ ಸ್ಥಳೀಯರನ್ನು ಬೆಚ್ಚಿ ಬೀಳಿಸಿದ್ದು, ಈ ಬಗ್ಗೆ ತನಿಖೆ ನಡೆಸಿ ಕೃತ್ಯ ಮಾಡಿರುವವರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು: 30 ಮಂಗಗಳನ್ನು ಕೊಂದು ರಸ್ತೆ ಬದಿ ಎಸೆದು ಹೋದ ದುಷ್ಕರ್ಮಿಗಳು - Monkeys Killed