ಹುಬ್ಬಳ್ಳಿ:ಸಿ.ಪಿ.ಯೋಗೇಶ್ವರ್ ಪರಿಷತ್ ಸದಸ್ಯ ಸ್ಥಾನಕ್ಕೆ ಸ್ವಇಚ್ಚೆಯಿಂದ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ನಗರದಲ್ಲಿಂದು ಮಾತನಾಡಿದ ಅವರು, ನನ್ನ ಸಭಾಪತಿ ಅವಧಿಯಲ್ಲಿ ಯೋಗೇಶ್ವರ್ ಸೇರಿದಂತೆ ಇಲ್ಲಿಯವರೆಗೆ 13 ಮಂದಿ ಪರಿಷತ್ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಹಿಂದೆಲ್ಲ ಎರಡು ಅಥವಾ ಮೂರು ರಾಜೀನಾಮೆ ಅಂದರೆ ಹೆಚ್ಚು. ಆದರೆ, ಈಗ ಇಷ್ಟು ಮಂದಿ ರಾಜೀನಾಮೆ ಕೊಟ್ಟಿದ್ದಾರೆ ಎಂದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿಕೆ (ETV Bharat) ಯೋಗೇಶ್ವರ್ ರಾಜೀನಾಮೆಗೂ ಮುನ್ನ ಬಹಳಷ್ಟು ಜನ ನನಗೆ ಫೋನ್ ಮಾಡಿ ಕೇಳಿದ್ದರು. ಆದರೆ, ನಾನು ಸಾಂವಿಧಾನಿಕ ಹುದ್ದೆಯಲ್ಲಿರುವ ಕಾರಣ ಅದೆಲ್ಲವನ್ನೂ ಹೇಳುವ ಹಾಗಿಲ್ಲ ಎಂದಿರುವುದಾಗಿ ತಿಳಿಸಿದರು.
ಆಗಿನ ಕಾಲದಲ್ಲಿ ಅವಧಿಗೆ ಎರಡ್ಮೂರು ರಾಜೀನಾಮೆಗಳು ಆಗುತ್ತಿದ್ದವು. ಆಗ ರಾಜಕೀಯ ಹಾಗಿತ್ತು. ಈಗ ರಾಜಕೀಯದ ಒತ್ತಡ, ಬೇರೆ ಪಕ್ಷಗಳಿಗೆ ಹೋಗುವುದಿದ್ದರೆ ರಾಜೀನಾಮೆ ನೀಡುತ್ತಾರೆ. ನಾವು ಕಾರಣ ಕೇಳುವುದಿಲ್ಲ. ಸ್ವಇಚ್ಛೆಯಿಂದ ರಾಜೀನಾಮೆ ಕೊಡುತ್ತಿದ್ದಿರೋ ಇಲ್ಲವೋ ಎಂಬುದನ್ನು ತಿಳಿಯುವುದು ನಮ್ಮ ಕರ್ತವ್ಯ ಎಂದು ತಿಳಿಸಿದರು.
ಇದನ್ನೂ ಓದಿ:ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿ ಪಿ ಯೋಗೇಶ್ವರ್; ಸ್ವತಂತ್ರ ಸ್ಪರ್ಧೆಗೆ ಸೈನಿಕನ ಇಂಗಿತ